newsfirstkannada.com

Watch: ಫ್ರೀ ಬಸ್​ನಲ್ಲಿ ಮಹಿಳೆಯರ ಫುಲ್​ ಫೈಟಿಂಗ್​.. ಗಲಾಟೆ ನೋಡುತ್ತಾ ನಿಂತ ಕಂಡಕ್ಟರ್..!

Share :

20-06-2023

    ರಾಜ್ಯ ಸಾರಿಗೆ ಬಸ್​ನಲ್ಲಿ ಒಂದಲ್ಲ ಒಂದು ವಿಷಯಕ್ಕೆ ನಿತ್ಯ ಜಗಳ

    ಫುಲ್​ ರಶ್​ ಆದ್ರೂ ಕೈ, ಕೈ ಮಿಲಾಯಿಸಿದ ಮಹಿಳಾ ಪ್ರಯಾಣಿಕರು

    ಮಹಿಳಾ ಮಣಿಗಳ ಗಲಾಟೆಗೆ ಕೈ ಕಟ್ಟಿ ನಿಂತ ಬಸ್​ ಕಂಡಕ್ಟರ್..!​​​

ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದ್ದೆ, ತಂದಿದ್ದು ಉಚಿತವಾಗಿ ಬಸ್​ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಪುಣ್ಯ ಕ್ಷೇತ್ರಗಳಿಗೆ. ತಮ್ಮ ಸಂಬಂಧಿಕರ ಮನೆಗಳಿಗೆ, ತಮಗಿಷ್ಟ ಬಂದಲ್ಲಿಗೆ ತೆರಳುತ್ತಿದ್ದಾರೆ. ಇದರಿಂದ ಕೆಲವು ಬಸ್​ನಲ್ಲಿ ಸೀಟ್​ಗಾಗಿ ಜಗಳ ನಡೆದಿದ್ದೂ ಇದೆ. ಸದ್ಯ ಅಂತಹದ್ದೆ ಘಟನೆ ನಡೆದಿದ್ದು ಮಹಿಳೆಯರು ಬಸ್​ನಲ್ಲಿ ಫುಲ್​ ಫೈಟಿಂಗ್​ ಮಾಡಿಬಿಟ್ಟಿದ್ದಾರೆ.

ಮಹಿಳೆಯರಿಂದಲೇ ಫುಲ್​ ರಶ್​ ಆಗಿದ್ದ ಬಸ್ ​ತೆರಳುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತೀವ್ರವಾಗಿದ್ದರಿಂದ ಕೈ, ಕೈ ಮಿಲಾಯಿಸಿ ಬಿಟ್ಟಿದ್ದಾರೆ. ಫುಲ್​ ರಶ್​ನಲ್ಲಿದ್ದ ಬಸ್​ನಲ್ಲೇ ಮಹಿಳೆಯರು ಗುದ್ದಾಡಿದ್ದರಿಂದ ಮಕ್ಕಳು ಭಯದಿಂದ ಚೀರಾಡಿದ್ದಾರೆ. ಇಬ್ಬರು ಯುವಕರ ನಡುವೆ ಮಾರಾಮಾರಿ ಆಗುತ್ತಿದ್ದಾಗ ಇಬ್ಬರನ್ನು ಬಿಡಿಸಿ ಸಮಾಧಾನ ಮಾಡಲಾಗಿದೆ.

ಇನ್ನು ಕಂಡಕ್ಟರ್​ ಅಂತೂ ನನಗೇನು ಸಂಬಂಧವಿಲ್ಲ ಎಂದು ಗಲಾಟೆ ನೋಡುತ್ತಾ ನಿಂತಿದ್ದಾರೆ. ಈ ನಾರಿಯರ ಜಗಳ ಬಿಡಿಸಲು ಸಹ ಪ್ರಯಾಣಿಕರು ಹರಸಾಹಸ ಪಟ್ಟರು. ಆದ್ರೆ ಈ ವಿಡಿಯೋ ಎಲ್ಲಿ, ಯಾಕೆ, ಯಾರ-ಯಾರ ನಡುವೆ ನಡೆಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದಿಲ್ಲ.

ಇದು ಅಲ್ಲದೇ, ಹಾಸನದ ಬಳಿ KSRTC ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ವಿಂಡೋ ಸೀಟ್​ಗಾಗಿ ವಾಗ್ವಾದ ಮಾಡಿದ್ದಾರೆ. ಕಿಟಕಿ ಪಕ್ಕದ ಸೀಟ್​ ನನಗೆ ಬೇಕು ಬಿಡು ಅಂತಾ ಮಹಿಳೆಯರು ಪರಸ್ಪರ ಕಿತ್ತಾಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಫ್ರೀ ಬಸ್​ನಲ್ಲಿ ಮಹಿಳೆಯರ ಫುಲ್​ ಫೈಟಿಂಗ್​.. ಗಲಾಟೆ ನೋಡುತ್ತಾ ನಿಂತ ಕಂಡಕ್ಟರ್..!

https://newsfirstlive.com/wp-content/uploads/2023/06/WOMANS_FIGHT.jpg

Load More