newsfirstkannada.com

ಪುಟಾಣಿ ‘ಶಾಲ್ಮಲಿ’ ಹಾಡು ಎಷ್ಟು ಚೆಂದಾ.. ಖ್ಯಾತ ಗಾಯಕ ಶಂಕರ್ ಮಹಾದೇವನ್ ಮನಬಿಚ್ಚಿ ಹೇಳಿದ್ದೇನು?

Share :

01-08-2023

    ಶಾಲ್ಮಲಿ ಹಾಡಿಗೆ ಫುಲ್​ ಫಿದಾ ಆದ ಸಿಂಗರ್​ ಶಂಕರ್ ಮಹಾದೇವನ್

    ಈ ಪುಟ್ಟ ಬಾಲಕಿಯನ್ನು ಭೇಟಿಯಾಗಲೇಬೇಕು ಎಂದ ಖ್ಯಾತ ಗಾಯಕ

    ಪ್ರಧಾನಿ ಮೋದಿ ಅವರಿಂದಲೂ ಮೆಚ್ಚುಗೆ ಗಳಿಸಿದ್ದ ಕರುನಾಡ ‘ಶಾಲ್ಮಲಿ’

ಇತ್ತೀಚೆಗಷ್ಟೇ ‘ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ ಡಿಡಿಕ್ಕ ಎಂಬ ಭಕ್ತಿಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಳು ಶಾಲ್ಮಲಿ. ಸಾಮಾಜಿಕ ಜಾಲತಾಣದಲ್ಲಿ ಈ ಪುಟ್ಟ ಕಂದಮ್ಮನ ಅದ್ಭುತವಾದ ಹಾಡನ್ನು ಕೇಳಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು.

ನಾಲ್ಕೂವರೆ ವರ್ಷದ ಶಾಲ್ಮಲಿ ಶ್ರೀನಿವಾಸ್ ಬೆಂಗಳೂರಿನವರು. ಈ ಪುಟಾಣಿ ಮುದ್ದು, ಮುದ್ದಾಗಿ ಹಾಡುವುದರ ಜೊತೆಗೆ ಕೀ ಬೋರ್ಡ್ ಕೂಡ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾಳೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಈಕೆ ಹಾಡಿದ ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ ಹಾಡು 5.6 ಮಿಲಿಯನ್​ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಇದೀಗ ಶಾಲ್ಮಲಿ ಧ್ವನಿಗೆ ಖ್ಯಾತ ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್​ ಅವರು ಕೂಡ ಫಿದಾ ಆಗಿದ್ದಾರೆ.

ಶಂಕರ್ ಮಹಾದೇವನ್​ ಅವರು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಪುಟ್ಟ ಬಾಲಕಿ ಶಾಲ್ಮಲಿಯ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ‘ಹುಟ್ಟುತ್ತಲೇ ಟೀಚರ್ ಆಗಿರುವವರನ್ನು ನೀವು ನೋಡಬೇಕೆ? ನೋಡಿ ಇಲ್ಲಿದ್ದಾರೆ ಆಕೆ! ಇದನ್ನೇ ದೇವರ ಆಶೀರ್ವಾದ ಎನ್ನುವುದು. ಅಂದಹಾಗೆ ಈ ಮುದ್ದು ಹುಡುಗಿ ಯಾರು, ನಾನು ಈಕೆಯನ್ನು ಒಮ್ಮೆ ಭೇಟಿಯಾಗಬೇಕು. ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಹಾಗೂ ಇವಳಿಗೆ ಆಶೀರ್ವದಿಸಬೇಕು ಎಂದು ಬಯಸುತ್ತಿದ್ದೇನೆ. ಎಷ್ಟೊಂದು ಸ್ಪಷ್ಟವಾಗಿ ಮಧುರವಾಗಿ ಸ್ವರ ಸಂಗತಿಗಳನ್ನು ಪ್ರಸ್ತುತ ಪಡಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: VIDEO: ಓಡಿ ಓಡಿ ಬಂದು.. ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ.. ಎಲ್ಲರೂ ತಲೆದೂಗುವಂತೆ ಮಾಡಿರೋ ಶಾಲ್ಮಲಿಯ ಹಾಡು ಮತ್ತೆ ವೈರಲ್

ಇನ್ನು ಶಂಕರ್ ಮಹಾದೇವನ್ ಅವರ ಕ್ಯಾಪ್ಶನ್​ಗೆ ಶಾಲ್ಮಲಿಯ ತಾಯಿ ಸವಿತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಗಮನಿಸಿದಕ್ಕಾಗಿ ತುಂಬಾ ಧನ್ಯವಾದಗಳು ಸರ್. ನಿಮ್ಮ ಮೆಚ್ಚುಗೆ ಮತ್ತು ದಯೆಯ ಮಾತುಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮನ್ನು ಭೇಟಿ ಮಾಡಲು ಮತ್ತು ಆಶೀರ್ವಾದ ಪಡೆಯಲು ನಾವು ಎದುರು ನೋಡುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪುಟಾಣಿ ‘ಶಾಲ್ಮಲಿ’ ಹಾಡು ಎಷ್ಟು ಚೆಂದಾ.. ಖ್ಯಾತ ಗಾಯಕ ಶಂಕರ್ ಮಹಾದೇವನ್ ಮನಬಿಚ್ಚಿ ಹೇಳಿದ್ದೇನು?

https://newsfirstlive.com/wp-content/uploads/2023/08/shalmali.jpg

Load More