newsfirstkannada.com

ಡಿಕೆಶಿ, ಸಿದ್ದು ಮಾಸ್ಟರ್​​ ಪ್ಲಾನ್​​; ಸದ್ಯದಲ್ಲೇ ಕಾಂಗ್ರೆಸ್​ ಸೇರ್ತಾರಾ ಈ ಬಿಜೆಪಿ ನಾಯಕರು..?

Share :

29-08-2023

    ಕಾಂಗ್ರೆಸ್ ಸೇರಲ್ಲ.. ‘ಲೋಕ’ ಕದನಕ್ಕೆ ಇಳಿಯೋದಿಲ್ಲ

    ‘ಕೈ’ ಸೇರ್ಪಡೆ ವದಂತಿ ಬಗ್ಗೆ ಮುನೇನಕೊಪ್ಪ ಸ್ಪಷ್ಟನೆ

    ಬಾಂಬೆ ಟೀಂ ಜೊತೆ ಕಮಲ ಪಾಳಯಕ್ಕೆ ‘ಕೈ’ ಗಾಳ!

ಆಪರೇಷನ್ ಹಸ್ತದ ಬಿರುಗಾಳಿಯಲ್ಲಿ ಮತ್ತಷ್ಟು ಕಮಲ ಕಲಿಗಳ ಹೆಸರು ಸುತ್ತಾಡುತ್ತಿದೆ. ಬಾಂಬೆ ಟೀಂ ಘರ್‌ವಾಪ್ಸಿಯ ಗುಂಗಿನಲ್ಲೇ ಕಮಲ ಪಾಳಯಕ್ಕೆ ಕೈ ಗಾಳ ಹಾಕಿರೋ ಗುಲ್ಲೆದ್ದಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಸಿಡಿಸಿದ್ದ ಆಪರೇಷನ್ ಬಾಂಬ್ ಮತ್ತೊಂದು ಚರ್ಚೆಯನ್ನ ಹುಟ್ಟುಹಾಕಿದೆ. ಆದ್ರೀಗ ಕಾಂಗ್ರೆಸ್ ಪಕ್ಷದ ಸೆಳೆತದ ಬಗ್ಗೆ ಬಿಜೆಪಿ ನಾಯಕರೇ ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ಬಿಜೆಪಿ ಕೂಡಾ ರಿವರ್ಸ್ ಆಪರೇಷನ್‌ ಮಾಡ್ತಿರೋ ಸುದ್ದಿ ಹಬ್ಬಿದೆ.

ಬಾಂಬೆ ಟೀಂ ಘರ್‌ವಾಪ್ಸಿಯ ಸದ್ದಿನ ಮಧ್ಯೆ ಮತ್ತಷ್ಟು ನಾಯಕರನ್ನ ಸೆಳೆಯಲು ಹಸ್ತ ಪಡೆ ಸನ್ನದ್ಧವಾಗಿದೆ. ಬೆಂಗಳೂರು, ಹಳೇ ಮೈಸೂರು ಭಾಗದ ಬಳಿಕ ಕಿತ್ತೂರು ಕರ್ನಾಟಕದಲ್ಲೂ ಆಪರೇಷನ್ ಜಾಲ ಹಬ್ಬಿಸಿರೋ ಬಾಂಬ್ ಸ್ಫೋಟಗೊಂಡಿದೆ. ಸಚಿವ ಸಂತೋಷ್ ಲಾಡ್ ಬಿಜೆಪಿಯ ಮತ್ತಷ್ಟು ಘಟಾನುಘಟಿ ನಾಯಕರು ಕೈ ಹಿಡಿಯೋ ಸುಳಿವು ಕೊಟ್ಟಿದ್ದಾರೆ. ಆದ್ರೆ, ಲಾಡ್ ಮಾತಿಗೆ ಕೇಸರಿ ಕಲಿಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಸ್ವಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಲಿಂಗಾಯತ ನಾಯಕರಾದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ​, ಚಿಕ್ಕನಗೌಡರ್​ ಕಾಂಗ್ರೆಸ್​​​ ಸೇರ್ತಾರೆ ಅಂತ ಸಚಿವ ಸಂತೋಷ ಲಾಡ್ ಸಿಡಿಸಿದ್ದ ಬಾಂಬ್ ಸಿಡಿಸಿದ್ರು. ಆದ್ರೀಗ ಕಾರ್ಮಿಕ ಸಚಿವರ ಆಪರೇಷನ್ ಮಾತಿಗೆ ಶಂಕರ್‌ ಪಾಟೀಲ್ ಮುನೇನಕೊಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವಪಕ್ಷ ಬಿಜೆಪಿಯಲ್ಲಿನ ಬಿರುಕಿನ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ತಮಗೆ ಯಾರೂ ಆಹ್ವಾನ ನೀಡಿಲ್ಲ. ಯಾರೊಂದಿಗೂ ಈ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಗಬೇಕು ಅನ್ನೋ ಇಚ್ಚೆ ಇಲ್ಲ. ಆದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಅದಂತೂ ಸತ್ಯ.

– ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

‘ನಮ್ಮ ಬಳಿ ಆಪರೇಷನ್ ಹಸ್ತ ಎನ್ನುವ ಪದವೇ ಇಲ್ಲ’
ಆಪರೇಷನ್ ರಾಜಕಾರಣದ ಬಗ್ಗೆ ಡಿ.ಕೆ.ಸುರೇಶ್ ಮಾತು

ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿದ್ರೆ, ಸಂಸದ ಡಿ.ಕೆ.ಸುರೇಶ್ ಈ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ನಮ್ಮ ಬಳಿ ಆಪರೇಷನ್ ಹಸ್ತ ಎನ್ನುವ ಪದವೇ ಇಲ್ಲ. ನಮಗೆ ಲೋಕಸಭೆಗೆ ಅಭ್ಯರ್ಥಿಗಳ ಕೊರತೆ ಕಾಣುತ್ತಿಲ್ಲ ಎಂಬ ಮಾತನ್ನಾಡಿದ್ದಾರೆ. ಇತ್ತ ಮುನೇನಕೊಪ್ಪ ಕೈ ಹಿಡಿಯೋ ಬಗ್ಗೆ ಮಾತನಾಡಿರೋ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೂಕ್ತ ನಾಯಕನಿಲ್ಲದೇ ಬಿಜೆಪಿ ಕುಗ್ಗುತ್ತಿದೆ ಅಂತಾ ಕಿಡಿಕಾರಿದ್ದಾರೆ.

‘ಆಪರೇಷನ್ ಹಸ್ತ’ಕ್ಕೆ ಬಿಜೆಪಿ ರಿವರ್ಸ್ ಆಪರೇಷನ್‌!
ರಿವರ್ಸ್ ಆಪರೇಷನ್‌ಗೆ ಬಿಜೆಪಿ ‘ಹೈ’ ನಾಯಕರ ಎಂಟ್ರಿ

ಕಾಂಗ್ರೆಸ್ ಪಾಳಯ ಒಂದೊಂದೇ ಕ್ಷೇತ್ರಗಳನ್ನ ಕಬ್ಜ ಮಾಡಲು ರಣತಂತ್ರ ಹೆಣೆಯುತ್ತಿದ್ರೆ, ಬಿಜೆಪಿ ಕೈಗೆ ತಿರುಗೇಟು ಕೊಡಲು ಸಜ್ಜಾಗಿದೆ. ಆಪರೇಷನ್ ಹಸ್ತಕ್ಕೆ ತಿರುಮತ್ರ ನೀಡಲು ನೇರವಾಗಿ ಬಿಜೆಪಿ ಹೈಕಮಾಂಡ್ ಅಖಾಡಕ್ಕಿಳಿಯಲು ಸಜ್ಜಾಗಿದೆ.
ರಿವರ್ಸ್ ಆಪರೇಷನ್ ಮಾಡಲು ಬಿಜೆಪಿ ‘ಹೈ ಕಮಾಂಡ್‌ ನಾಯಕರೇ ರಾಜ್ಯಕ್ಕೆ ಎಂಟ್ರಿ ಕೊಡ್ತಾರೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಆರರಿಂದ 8 ತಿಂಗಳು ಮಾತ್ರ ಬಾಕಿ ಇದ್ದು, ಈಗಲೇ ಅಖಾಡಕ್ಕಿಳಿಯಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪಕ್ಷ ಬಿಟ್ಟು ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಮತ್ತೆ ಗಾಳ ಹಾಕಲು ಮುಂದಾಗಿದೆ. ಮಾಜಿ ಸಚಿವರಾದ ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರನ್ನು ಹಿಡಿದಿಟ್ಟುಕೊಳ್ಳಲು ‘ಹೈ’ ನಾಯಕರು ನಿರ್ಧರಿಸಿದ್ದಾರೆ.

ಒಬ್ಬೊಬ್ಬರಿಗೆ ಕರೆ ಮಾಡಿ ಮಾತನಾಡಿ ವಿಶ್ವಾಸ ಗಳಿಸಿಕೊಳ್ಳಲು ಪ್ಲಾನ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ, ಕರುನಾಡ ರಾಜಕೀಯದಲ್ಲಿ ಆಪರೇಷನ್‌ ಎಂಬ ಪದ ಹಲ್‌ಚಲ್ ಎಬ್ಬಿಸಿದೆ. ಆದ್ರೆ, ಇಷ್ಟೆಲ್ಲಾ ಚರ್ಚೆಯ ಮಧ್ಯೆ ಯಾರೆಲ್ಲಾ ಪಕ್ಷ ತೊರೀತಾರೆ. ಮತ್ಯಾವ ಪಕ್ಷ ಸೇರ್ತಾರೆ ಅನ್ನೋದೆ ಮುಂದಿರೋ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿ, ಸಿದ್ದು ಮಾಸ್ಟರ್​​ ಪ್ಲಾನ್​​; ಸದ್ಯದಲ್ಲೇ ಕಾಂಗ್ರೆಸ್​ ಸೇರ್ತಾರಾ ಈ ಬಿಜೆಪಿ ನಾಯಕರು..?

https://newsfirstlive.com/wp-content/uploads/2023/07/bjp.jpg

Load More