INDIA ಕೂಟದ ವಿರೋಧದ ಮಧ್ಯೆಯೂ ಮೋದಿ ಜೊತೆ ಪವಾರ್-ವಿಡಿಯೋ
ಮೋದಿ ಮಹಾರಾಷ್ಟ್ರ ಭೇಟಿಯ ಪ್ರಾಮುಖ್ಯತೆ ಏನು? ವಿರೋಧ ಯಾಕೆ?
ಪ್ರಧಾನಿ ಮೋದಿ, ಶರದ್ ಪವಾರ್ ಸಂಬಂಧ ಹೇಗಿದೆ ಗೊತ್ತಾ..?
ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಎನ್ಸಿಪಿ (Nationalist Congress Party) ಮುಖ್ಯಸ್ಥ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಇವತ್ತು ಪ್ರತಿಷ್ಠಿತ ‘ಲೋಕಮಾನ್ಯ ಬಾಲಗಂಗಾಧರ ತಿಲಕ್’ ಪ್ರಶಸ್ತಿಯನ್ನು ಪ್ರಧಾನಿಗೆ ನೀಡಿ ಗೌರವಿಸಲಾಯಿತು. ರಾಜಕೀಯೇತರ ಕಾರ್ಯಕ್ರಮದ ಈ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಒಟ್ಟಿಗೆ ಕಾಣಿಸಿಕೊಂಡರು. ವಿಶೇಷ ಅಂದರೆ ಮೋದಿ ಮತ್ತು ಶರದ್ ಪವಾರ್ ಪರಸ್ಪರ ಕೈಕುಲುಕಿ ಉಭಯ ಕುಶಲೋಪರಿ ನಡೆಸಿದರು. ನಂತರ ಪವಾರ್ ಮೋದಿಯ ಬೆನ್ನುತಟ್ಟಿ ಗಮನ ಸೆಳೆದರು.
ಯಾಕೆ ವಿರೋಧ..?
ಲೋಕಸಭೆ ಚುನಾವಣೆ ಹೊತ್ತಲ್ಲಿ ವಿಪಕ್ಷಗಳೆಲ್ಲ ಸೇರಿ INDIA ಕೂಟವನ್ನು ರಚಿಸಿದ್ದಾರೆ. ಎನ್ಡಿಎ ಒಕ್ಕೂಟವನ್ನು ಚುನಾವಣೆಯಲ್ಲಿ ಸೋಲಿಸಲು ರಚಿಸಿರುವ ಕೂಟ ಇದಾಗಿದೆ. ಈ ‘ಇಂಡಿಯಾ’ ಒಕ್ಕೂಟಕ್ಕೆ ಮಹಾರಾಷ್ಟ್ರದ ಶರದ್ ಪವಾರ್, ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೂಡ ಬೆಂಬಲ ಸೂಚಿಸಿದೆ. ಹೀಗಿರುವಾಗ ಪ್ರಧಾನಿ ಮೋದಿ ಮಹಾರಾಷ್ಟ್ರಕ್ಕೆ ಬಂದಾಗ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರೋದು ಸರಿಯಲ್ಲ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಶರದ್ ಪವಾರ್ ನಡೆಯನ್ನು ಖಂಡಿಸಿ, ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಠಾಕ್ರೆ), ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆಯನ್ನೂ ನಡೆಸಿದರು. ಅಲ್ಲದೇ ಪವಾರ್ ತಪ್ಪು ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ತಪ್ಪು ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಮಹಾರಾಷ್ಟ್ರ ಭೇಟಿ ಯಾಕೆ ಮುಖ್ಯ?
ಮಹಾರಾಷ್ಟ್ರದಲ್ಲಿ ಎನ್ಸಿಪಿ ವಿಭಜನೆ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಅಲ್ಲಿಗೆ ಬಂದಿದ್ದಾರೆ. ಎನ್ಸಿಪಿಯ ಅಜಿತ್ ಪವಾರ್ ಬಣ, ಶಿವಸೇನೆ (ಏಕನಾಥ್ ಶಿಂದೆ) ಹಾಗೂ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದೆ. ಮಾತ್ರವಲ್ಲ ಅಜಿತ್ ಪವಾರ್, ಏಕನಾಥ್ ಶಿಂದೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಶರದ್ ಪವಾರ್ರ ಎನ್ಸಿಪಿ ಬಣಕ್ಕೆ ದೊಡ್ಡ ಹೊಡೆತ ಆಗಿದೆ. ಈ ಎನ್ಸಿಪಿ ಒಡೆದು ಎರಡು ಹೋಳಾಗಲು ಬಿಜೆಪಿಯೇ ಕಾರಣ ಅನ್ನೋದು ಶರದ್ ಪವಾರ್ ಬಣದ ಆರೋಪ. ವಿಷಯ ಹೀಗಿರುವಾಗ ಮೋದಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಇದೀಗ ಅವರ ಜೊತೆ ಪವಾರ್ ವೇದಿಕೆ ಹಂಚಿಕೊಂಡಿದ್ದಾರೆ.
ಶರದ್ ಪವಾರ್ ಮತ್ತು ಮೋದಿ
‘ಶರದ್ ಪವಾರ್ ತಮ್ಮ ರಾಜಕೀಯ ಮಾರ್ಗದರ್ಶಕ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ತಮಗೆ ಸಹಾಯ ಮಾಡಿದ ಏಕೈಕ ನಾಯಕ. ಕೈ ಹಿಡಿದು ರಾಜಕೀಯ ಕಲಿಸಿದ್ದು ಶರದ್ ಪವಾರ್. ಸಂಸತ್ತಿನಲ್ಲಿ ಶಿಸ್ತು ಪಾಲಿಸುವ ನಾಯಕ’ ಎಂದು ಈ ಹಿಂದೆ ಬಣ್ಣಿಸಿದ್ದರು. ಮಾತ್ರವಲ್ಲ, ಮೋದಿ ಸರ್ಕಾರದ ಅವಧಿಯಲ್ಲೇ ಶರದ್ ಪವಾರ್ಗೆ ‘ಪದ್ಮವಿಭೂಷಣ’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಪವಾರ್ ಕೂಡ ಹೊಗಳಿದ್ದರು..!
‘ಮೋದಿ ಕಾರ್ಯವೈಖರಿಯಿಂದ ನನಗೆ ಆಶ್ಚರ್ಯವಾಗುತ್ತದೆ. ಯಾವುದೇ ಕೆಲಸವನ್ನು ಅದರ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಅವರಿಗಿದೆ. ರಫೇಲ್ ಖರೀದಿಯಲ್ಲಿ ಮೋದಿ ಉದ್ದೇಶವನ್ನು ಯಾರೂ ಅನುಮಾನಿಸಬಾರದು’ ಎಂದಿದ್ದರು. ಅಲ್ಲದೇ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಮೋದಿ ಲಡಾಖ್ಗೆ ಭೇಟಿ ನೀಡಿದ್ದಾಗ ಪವಾರ್ ಮೋದಿಯನ್ನು ಶ್ಲಾಘಿಸಿದ್ದರು.
ಲೋಕಮಾನ್ಯ ತಿಲಕ್ ಪ್ರಶಸ್ತಿ ಇತಿಹಾಸ
‘ಲೋಕಮಾನ್ಯ ಬಾಲಗಂಗಾಧರ ತಿಲಕ್’ ಪ್ರಶಸ್ತಿಯನ್ನು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿಗಳಾದ ಡಾ.ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ್ ಮೂರ್ತಿ ಹಾಗೂ ಮೆಟ್ರೋಮ್ಯಾನ್ ಇ. ಶ್ರೀಧರನ್ಗೆ ನೀಡಿ ಗೌರವಿಸಲಾಗಿದೆ.
ಮೋದಿ 41ನೇ ಗಣ್ಯ ವ್ಯಕ್ತಿ
ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು 1983ರಲ್ಲಿ ಸ್ಥಾಪಿಸಲಾಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಂಪರೆಯನ್ನು ಗೌರವಿಸುವುದು ಈ ಪ್ರಶಸ್ತಿ ಹಿಂದಿನ ಪರಿಕಲ್ಪನೆ. ಇದನ್ನು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ನೀಡುತ್ತ ಬಂದಿದೆ. ದೇಶದ ಪ್ರಗತಿ, ಅಭಿವೃದ್ಧಿಗೆ ಶ್ರಮಿಸಿದವರಿಗೆ ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 1 ರಂದು ಬಾಲಗಂಗಾಧರ ತಿಲಕರ ಪುಣ್ಯತಿಥಿಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಂದ್ಹಾಗೆ ಮೋದಿ ಲೋಕಮಾನ್ಯ ತಿಲಕ್ ಪ್ರಶಸ್ತಿ ಪಡೆದ 41ನೇ ಗಣ್ಯ ವ್ಯಕ್ತಿ ಆಗಿದ್ದಾರೆ.
ವಿಶೇಷ ವರದಿ: ಗಣೇಶ್ ಕೆರೆಕುಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
PM modi and Sharad pawar…pic.twitter.com/dJg2nbZhFM
— Risinghindu (@rising_hindu) August 1, 2023