newsfirstkannada.com

ಒಂದು, ಎರಡು ಬಾರಿ ಆಯ್ಕೆ ಆದವರಿಗೆ ಕೊಟ್ಟಿದ್ದೀರಿ, ಪರಿಷತ್ ವಿಪಕ್ಷ ಸ್ಥಾನ ನನಗೇ ಬೇಕು -ನಮೋಶಿ ಒತ್ತಾಯ

Share :

17-11-2023

    ಹಿರಿಯ ನಾಯಕರ ನಡೆಗೆ ಶಶೀಲ್ ನಮೋಶಿ ಬೇಸರ

    ‘ಕಲ್ಯಾಣ ಕರ್ನಾಟಕ ಭಾಗದವರಿಗೆ ಏನು ಕೊಟ್ಟಿಲ್ಲ’

    ಅಂದು ಹೊರಟ್ಟಿಯನ್ನು ತಂದು ಕೂರಿಸಿದರು-ನಮೋಶಿ ಬೇಸರ

ಕಲ್ಯಾಣ ಕರ್ನಾಟಕ ಭಾಗದಲ್ಲಿ ತುಂಬಾ ಸಿನಿಯರ್ ಲೀಡರ್ ನಾನೇ ಇದೀನಿ, ಇಲ್ಲಿಯವರೆಗೆ ಪರಿಷತ್ ನಲ್ಲಿ ನಮ್ಮ ಭಾಗದವರಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ ಎಂದು ಬಿಜೆಪಿ ಪರಿಷತ್ ಸದಸ್ಯ ಶಶೀಲ್ ನಮೋಶಿ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಶಶೀಲ್ ನಮೋಶಿ ಮಾತನಾಡಿದ್ದು ಅವಕಾಶ ಇರುವಾಗ ನನಗೆ ಪರಿಷತ್​ನಲ್ಲಿ ವಿಪಕ್ಷ ನಾಯಕನ ಸ್ಥಾನ ಯಾಕೆ ಕೊಡಬಾರದು? ನಮ್ಮ ಸರ್ಕಾರ ಇರುವಾಗಲೂ ಕಲ್ಯಾಣ ಕರ್ನಾಟಕ ಭಾಗದವರಿಗೆ ಏನು ಕೊಟ್ಟಿಲ್ಲ. ಈ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ ಯಾವ ಪ್ರಯೋಜನವಾಗಿಲ್ಲ. ಆದ್ರೆ ಪಕ್ಷ ವಿರೋಧಿ ಕಲಸ ಮಾಡಿಲ್ಲ. ಇವತ್ತು ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಅವರ ಜೊತೆಗೆ ಕೈ ಜೊಡಿಸುವ ಕೆಲಸ ಮಾಡಬೇಕು ಎಂದು ಶಶೀಲ್ ನಮೋಶಿ ಹೇಳಿದರು.

ಅಂದು ನಾನು ಪರಿಷತ್​ನ ಸಭಾಧ್ಯಕ್ಷ ಆಗುತ್ತೇನೆ ಅಂದುಕೊಂಡಿದ್ದೆ. ದೊಡ್ಡವರು ಹೊರಟ್ಟಿ ಅವರನ್ನು ಕರೆದುಕೊಂಡು ಬಂದು ಕೂರಿಸಿದರು. ನಂತರ ನಾನು ಈ ಬಗ್ಗೆ ಯಾವುದೇ ಪ್ರಶ್ನೆ ಮಾಡಲಿಲ್ಲ. ಒಂದು ಬಾರಿ ಆಯ್ಕೆ ಆದವರಿಗೆ, ಎರಡು ಬಾರಿ ಆಯ್ಕೆ ಆದವರಿಗೆ ಕೊಟ್ಟಿದ್ದೀರಿ ನನಗೆ ಯಾಕೆ ಕೊಟ್ಟಿಲ್ಲ ಅನ್ನೋದು ನನ್ನ ಪ್ರಶ್ನೆ. ಒಂದು ವೇಳೆ ನನಗೆ ಅವಕಾಶ ಕೊಟ್ಟಿಲ್ಲ ಅಂದರೆ ಪಕ್ಷ ವಿರೋಧ ಚಟುವಟಿಕೆಯಂತೂ ಖಂಡಿತ ಮಾಡೋದಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು, ಎರಡು ಬಾರಿ ಆಯ್ಕೆ ಆದವರಿಗೆ ಕೊಟ್ಟಿದ್ದೀರಿ, ಪರಿಷತ್ ವಿಪಕ್ಷ ಸ್ಥಾನ ನನಗೇ ಬೇಕು -ನಮೋಶಿ ಒತ್ತಾಯ

https://newsfirstlive.com/wp-content/uploads/2023/11/BJP_SUSHIL-NAMOSHI.jpg

Load More