ಆರೋಪಿ ದರ್ಶನ್ ಇಂದು ಬಳ್ಳಾರಿಗೆ ಶಿಫ್ಟ್ ಆಗೋದು ಬಹುತೇಕ್ ಡೌಟ್!
ಇಂದು ಬಳ್ಳಾರಿಗೆ ದರ್ಶನ್ರನ್ನ ಸ್ಥಳಾಂತರ ಮಾಡದಿರಲು ಇವೆ 8 ಕಾರಣಗಳು
ಬಳ್ಳಾರಿ ಜೈಲಿಗೆ ಇಂದು ದರ್ಶನ್ ಸ್ಥಳಾಂತರಕ್ಕೆ ಅಡ್ಡಿಯಾಗಿರುವ ತೊಡಕುಗಳೇನು?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರು ಇಂದು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋದು ಬಹುತೇಕ ಡೌಟ್ ಇದೆ. ಅನೇಕ ಕಾರಣಗಳಿಂದಾಗಿ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಳ್ಳೊದು ಇಂದು ಸಾಧ್ಯವಿಲ್ಲ. ಕಾನೂನಿನ ಹಲವಾರು ತೊಡುಕುಗಳಿಂದಾಗಿ ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುವ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ನಟ ದರ್ಶನ್ ಬಳ್ಳಾರಿಗೆ ಸ್ಥಳಾಂತರವಾಗೋದು ಬಹುತೇಕ ಪಕ್ಕಾ ಆಗಿದೆ. ಆದ್ರೆ ಯಾವಾಗ ಅನ್ನೋದು ಇನ್ನೂ ಕೂಡ ಸ್ಪಷ್ಟನೆ ಸಿಕ್ಕಿಲ್ಲ ಅದಕ್ಕೆ ಹಲವಾರು ಕಾನೂನು ತೊಡುಕಗಳಿವೆ ಅವು ಏನು ಅನ್ನೋದನ್ನ ನೋಡಿದ್ರೆ, ವಿಳಂಬಕ್ಕೆ ಅಸಲಿ ಕಾರಣ ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ‘ಬೆಂಗಳೂರು ಜೈಲಲ್ಲೇ ಇರಲು ಅವಕಾಶ ಕೊಡಿ ಸ್ವಾಮಿ’- ದರ್ಶನ್ ಗ್ಯಾಂಗ್ ಮನವಿಗೆ ಕೋರ್ಟ್ ಹೇಳಿದ್ದೇನು?+
ಕಾರಣ 01: ನ್ಯಾಯಾಲಯದ ಆದೇಶದ ಪ್ರತಿ ಜೈಲಿಗೆ ಫ್ಯಾಕ್ಸ್ ಮೂಲಕ ತಲುಪಲಿದೆ
ದರ್ಶನ್ ಶಿಫ್ಟ್ ಮಾಡಬೇಕು ಅಂದ್ರೆ ನ್ಯಾಯಾಲಯದ ಆದೇಶದ ಪ್ರತಿ ಫ್ಯಾಕ್ಸ್ ಮೂಲಕ ಬಳ್ಳಾರಿ ಜೈಲಿಗೆ ತಲುಪಬೇಕು. ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದ್ದು. ಅದು ಬಳ್ಳಾರಿ ಜೈಲಿಗೆ ತಲುಪುವರೆಗೂ ದರ್ಶನ್ ಸ್ಥಳಾಂತರ ಕಷ್ಟ. ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಇನ್ನೂ ಸಂಪೂರ್ಣಗೊಂಡಿಲ್ಲ ಹೀಗಾಗಿ ದರ್ಶನ್ ಇಂದೇ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗೋದು ಬಹುತೇಕ ಡೌಟ್.
ಕಾರಣ 02: ನ್ಯಾಯಾಂಗ ಬಂಧನ ವಿಸ್ತರಣೆಯಾದ ಪ್ರತಿ ಪಡೆದೇ ಶಿಫ್ಟ್ ಮಾಡ್ಬೇಕು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು ಈಗ ಎಲ್ಲರಿಗೂ ಗೊತ್ತೆ ಇದೆ. ಹೀಗಾಗಿ ನ್ಯಾಯಂಗ ಬಂಧನದ ಆದೇಶದ ಪ್ರತಿ ಪಡೆದೇ ದರ್ಶನ್ರನ್ನ ಶಿಫ್ಟ್ ಮಾಡಬೇಕಾಗುತ್ತದೆ. ಹೀಗಾಗಿ ಆ ಪ್ರತಿ ಪೊಲೀಸರ ಕೈ ಸೇರುವವರೆಗೂ ದರ್ಶನ್ ಸ್ಥಳಾಂತರ ಸಾಧ್ಯವಿಲ್ಲ
ಕಾರಣ 03:ಅಲ್ಲದೇ ರಾತ್ರಿ ವೇಳೆ ಆರೋಪಿಯನ್ನ ಶಿಫ್ಟ್ ಮಾಡಲಿಕ್ಕೆ ಅವಕಾಶವಿಲ್ಲ
ಈ ಎಲ್ಲಾ ಪ್ರಕ್ರಿಯೆಗಳು ಮುಗಿಯಲು ಹೆಚ್ಚು ಕಡಿಮೆ ಇಂದು ಸಾಯಂಕಾಲ ಆಗಬಹುದು ರಾತ್ರಿ ವೇಳೆ ಯಾವುದೇ ಆರೋಪಿಯನ್ನು ಸ್ಥಳಾಂತರಿಸಲು ಅವಕಾಶವಿಲ್ಲ. ಇನ್ನೂ ಅನೇಕ ಕಾನೂನು ಪ್ರಕ್ರಿಯೆಗಳು ಮುಗಿಯಬೇಕಾಗಿರುವುದರಿಂದ ಪೊಲೀಸರು ಕಾದು ನೋಡುವ, ಸರಿಯಾದ ಸಮಯಕ್ಕೆ ಸ್ಥಳಾಂತರ ಮಾಡುವ ಇರಾದೆಯಲ್ಲಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾಲ್ ಬಗ್ಗೆ ದರ್ಶನ್ ವಿಚಾರಣೆ.. ಫೋನ್ ಬಳಕೆಯ ಬಗ್ಗೆ ದಾಸ ಹೇಳಿದಿಷ್ಟು?
ಕಾರಣ 04: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ 334 ಕಿಲೋಮೀಟರ್ ದೂರ
ಮತ್ತೊಂದು ಕಾರಣ ಅಂದ್ರೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸುಮಾರು 334 ಕಿಲೋ ಮೀಟರ್ ದೂರವಿದೆ. ಆ ದೂರವನ್ನು ಕ್ರಮಿಸಲು ಸರಿಯಾದ ಸಮಯವನ್ನು ನೋಡಿಕೊಳ್ಳಬೇಕು. ದರ್ಶನ್ ಕರ್ನಾಟಕ ಸಿನಿಮಾ ಕ್ಷೇತ್ರದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟ. ಹೀಗಾಗಿ ಈ 334 ಕಿಲೋಮೀಟರ್ ಪ್ರಯಾಣದಲ್ಲಿ ಅವರ ಅಭಿಮಾನಿಗಳು ರಸ್ತೆಯಲ್ಲಿ ಗುಂಪುಗೂಡಿಕೊಂಡಲ್ಲಿ ಏನಾದೂ ಸಮಸ್ಯೆಯುಂಟಾಗಬಹುದು ಹೀಗಾಗಿ ಈ 334 ಕಿಮೀ ದೂರವನ್ನು ಕ್ರಮಿಸಲು ಪಕ್ಕಾ ಪ್ಲಾನ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: ದುಡ್ಡು ಕೊಟ್ಟರೆ ಬಳ್ಳಾರಿ ಜೈಲ್‌ನಲ್ಲಿ ಗಾಂಜಾ, ಸಿಗರೇಟ್ ಎಲ್ಲಾ ಸಿಗುತ್ತೆ! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಜಯಶೀಲ! ಯಾರೀತ?
ಕಾರಣ 05 :ಈ 334 ಕಿ.ಮೀ ದೂರ ಕ್ರಮಿಸಲು ಕನಿಷ್ಟ 6 ಗಂಟೆಗಳ ಸಮಯ ಬೇಕು
ಇನ್ನು 334 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಕನಿಷ್ಠ 6 ಗಂಟೆಗಳ ಸಮಯ ಬೇಕು. ಹೀಗಾಗಿ ಇಂದೇ ದರ್ಶನ್ರನ್ನು ಬಳ್ಳಾರಿಗೆ ಸ್ಥಳಾಂತರ ಮಾಡುವುದು ಅಷ್ಟ ಸರಳವಿಲ್ಲ
ಕಾರಣ 06: ಬಳ್ಳಾರಿಗೆ ತಲುಪಿದ ನಂತ್ರ ಮೆಡಿಕಲ್ ಚೆಕಪ್ ಸಹ ಮಾಡಿಸಲೇಬೇಕು
ಬಳ್ಳಾರಿ ತಲುಪಿದ ಬಳಿಕ ಆರೋಪಿ ದರ್ಶನ್ ಅವರ ವೈದ್ಯಕೀಯ ಪರೀಕ್ಷೆಗಳು ನಡೆಯಬೇಕು ಹೀಗಾಗಿ ಇಂದು ಸಂಜೆ ಹೊರಟಲ್ಲಿ ಬಳ್ಳಾರಿ ತಲುಪುವುದು ನಡುರಾತ್ರಿಯಾಗುತ್ತೆ. ಹೀಗಾಗಿ ಅವರ ಮೆಡಿಕಲ್ ಚೆಕಪ್ನಂತಹ ಪ್ರಕ್ರಿಯೆಗಳು ನಡೆಸುವುದು ಆ ಸಮಯದಲ್ಲಿ ಸುಲಭವಲ್ಲ ಹೀಗಾಗಿ ಇಂದೇ ದರ್ಶನ್ ಸ್ಥಳಾಂತರ ಮಾಡೋದು ಸುಲಭವಿಲ್ಲ
ಕಾರಣ 07 :ಈ ಹಿನ್ನೆಲೆ ಇಂದು ಕರೆದೊಯ್ದರೆ ರಾತ್ರಿಯೊಳಗೆ ಬಳ್ಳಾರಿ ತಲುಪೋದು ಕಷ್ಟ
ಈಗಾಗಲೇ ಹೇಳಿದಂತೆ ಒಬ್ಬ ಆರೋಪಿಯನ್ನು ರಾತ್ರಿ ವೇಳೆ ಸ್ಥಳಾಂತರಿಸಲು ಅನುಮತಿಯಿಲ್ಲ ಹೀಗಾಗಿ ಒಂದು ವೇಳೆ ಈಗ ದರ್ಶನ್ರನ್ನ ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭವಾದಲ್ಲಿ, ರಾತ್ರಿಯೊಳಗೆ ಬಳ್ಳಾರಿ ತಲುಪೋದು ಸರಳವಿಲ್ಲ ಹೀಗಾಗಿ, ಸ್ಥಳಾಂತರ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಹೇಳಲಾಗ್ತಿದೆ.
ಕಾರಣ 08 :ಹೀಗಾಗಿ ಆರೋಪಿ ದರ್ಶನ್ನ ಇಂದು ಬಳ್ಳಾರಿಗೆ ಶಿಫ್ಟ್ ಮಾಡೋದು ಡೌಟ್
ಈ ಎಲ್ಲಾ ಕಾನೂನು ತೊಡಕುಗಳು, ಭದ್ರತೆಯ ವಿಷಯ, ಆರೋಪಿ ವಿಚಾರದಲ್ಲಿರುವ ನೀತಿ ನಿಯಮಗಳನ್ವಯ ಇಂದೇ ಬಳ್ಳಾರಿಗೆ ದರ್ಶನ್ ಶಿಫ್ಟ್ ಆಗೋದು ಡೌಟ್ ಎಂದೇ ಹೇಳಲಾಗುತ್ತಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ