/newsfirstlive-kannada/media/post_attachments/wp-content/uploads/2024/09/SHIKHAR_DHAVAN.jpg)
ಶಿಖರ್ ಧವನ್ ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ರು. ಫುಲ್​ ಫಿಟ್ & ಫೈನ್​​ ಆಗಿದ್ರೂ ಧವನ್ ದಿಢೀರನೆ ವಿದಾಯ ಘೋಷಿಸಿದರು. ಇದರ ಹಿಂದಿನ ಅಸಲಿ ಕಾರಣವೇನು?.
ಎಷ್ಟೇ ವರ್ಷಗಳ ಕಾಲ ಕ್ರಿಕೆಟ್​​​​​​​​​​​​​​​​​​​​​​​​​​ ಅನ್ನೋ ರನ್​​​​​ ಭೂಮಿಯಲ್ಲಿ, ದಿಗ್ಗಜನಾಗಿ ವಿಜೃಂಭಿಸಿದ್ರು, ಒಂದಿಲ್ಲ ಒಂದು ದಿನ ವಿದಾಯ ಘೋಷಿಸಲೇಬೇಕು. ಅಂತಹದೇ ವಿದಾಯಕ್ಕೆ ಟೀಮ್ ಇಂಡಿಯಾ ಸ್ಟಾರ್ ಓಪನರ್​​ ಶಿಖರ್ ಧವನ್​ ಸಾಕ್ಷಿಯಾಗಿದ್ರು. ಕಳೆದ ತಿಂಗಳು ಗಬ್ಬರ್ ಸಿಂಗ್​​ ದಿಢೀರ್ ಎಂದು ನಿವೃತ್ತಿ ಘೋಷಿಸಿ 12 ವರ್ಷಗಳ ಕ್ರಿಕೆಟ್​​ ಬದುಕಿಗೆ ಅಂತ್ಯ ಹಾಡಿದರು. ಮನೋಜ್ಞ ಆಟದಿಂದ ಯುವ ಕ್ರಿಕೆಟರ್ಸ್​ಗೆ ಸ್ಫೂರ್ತಿಯಾಗಿದ್ದ ಧವನ್​​ ದಿಢೀರ್​​​ ಗುಡ್​​ಬೈ ಹೇಳಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಇದೀಗ ತಾನೇಕೆ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​​ಬೈ ಹೇಳಿದೆ ಅನ್ನೋದನ್ನ ಧವನ್​​ ಬಹಿರಂಗಗೊಳಿಸಿದ್ದಾರೆ.
ಇದನ್ನೂ ಓದಿ:RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?
/newsfirstlive-kannada/media/post_attachments/wp-content/uploads/2024/09/SHIKHAR_DHAVAN_ROHIT.jpg)
ಧವನ್​ಗೆ 2 ವರ್ಷದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನವಿರಲಿಲ್ಲ. ಆಡುವ ಛಲ, ಫಿಟ್ನೆಸ್​ ಇದ್ರೂ ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿತು. ಇನ್ನೊಂದೆಡೆ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಘಟಿಸಿದವು. ಪತ್ನಿ ಆಯೆಷಾ ಮುಖರ್ಜಿ ಅವರಿಗೆ ವಿಚ್ಛೇದನ ನೀಡಿದರು. ಮಗ ಝೊರಾವೆರ್​​ ಕೂಡ ತಂದೆ ಧವನ್​​ರಿಂದ ದೂರವಾದರು. ಇದರಿಂದ ಶಿಖರ್ ಮಾನಸಿಕವಾಗಿ ನೊಂದಿದ್ದರು.
ಇಂತಹ ಟೈಮ್​​ನಲ್ಲಿ ಧವನ್​ಗೆ ಟೀಮ್ ಇಂಡಿಯಾಗೆ ಮರಳಲು ಇದ್ದ ಒಂದೇ ದಾರಿ ಅಂದ್ರೆ ಡೊಮೆಸ್ಟಿಕ್ ಕ್ರಿಕೆಟ್ ಆಡೋದು. ಆದರೆ ಡೊಮೆಸ್ಟಿಕ್ ಕ್ರಿಕೆಟ್ ಆಡುವ ಮನಸ್ಸು ಮಾಡಲಿಲ್ಲ. ಯಾಕಂದ್ರೆ ಸ್ಫೂರ್ತಿ ತುಂಬುವವರೇ ಇರಲಿಲ್ಲ. ಹೀಗಾಗಿಯೇ ನಾನು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದೆ ಎಂದು ಶಿಖರ್ ಧವನ್​ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us