ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ಶಿಖರ್ ಧವನ್
ಶಿಖರ್ ಧವನ್ ನಿವೃತ್ತಿ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಫ್ಯಾನ್ಸ್
ನಾವು ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ ಎಂದ ಧವನ್ ಅಭಿಮಾನಿಗಳು
ಭಾರತ ತಂಡದ ಹಿರಿಯ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿ ನಿವೃತ್ತಿ ನಿರ್ಧಾರವನ್ನು ತಿಳಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಒಂದಷ್ಟು ಏರುಪೇರುಗಳನ್ನು ಕಂಡರೂ ಧವನ್ ಕುಗ್ಗಿರಲಿಲ್ಲ. ಆಟದಲ್ಲಿನ ಹೋರಾಟದ ಗುರಿಯನ್ನು ಎಂದಿಗೂ ಕೈಬಿಟ್ಟಿರಲಿಲ್ಲ. ಅದೇ ಕಾರಣಕ್ಕೆ ಧವನ್ ಕ್ರಿಕೆಟ್ ಬದುಕಿನಲ್ಲಿ ಉತ್ತಂಗ ತಲುಪಿದ್ದರು. ಇದೀಗ ಟೀಂ ಇಂಡಿಯಾ ಅವರನ್ನು ಮಿಸ್ ಮಾಡಿಕೊಳ್ತಿದೆ.
ಧವನ್ ನಿವೃತ್ತಿಗೆ ಕಾರಣಗಳು..
ಅವಕಾಶ ವಂಚಿತ: ಅನುಭವಿ ಬ್ಯಾಟ್ಸ್‌ಮನ್‌ಗೆ ಕೆಲ ಸಮಯದಿಂದ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಡಿಸೆಂಬರ್ 2022ರಲ್ಲಿ ಭಾರತಕ್ಕಾಗಿ ಕೊನೆಯ ODI ಪಂದ್ಯವನ್ನು ಆಡಿದರು. ಈ ಅವಧಿಯಲ್ಲಿ ಅವರು ಕೇವಲ ಮೂರು ರನ್ ಗಳಿಸಿದ್ದರು. 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಜುಲೈ 2021ರಲ್ಲಿ ಧವನ್ ಶ್ರೀಲಂಕಾ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ T20 ಪಂದ್ಯ ಆಡಿದರು.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
ಬಿಸಿಸಿಐ ರಾಜಕೀಯ
ಬಿಸಿಸಿಐ ರಾಜಕೀಯದಿಂದ ಧವನ್ಗೆ ಅವಕಾಶ ಸಿಗಲಿಲ್ಲ ಅನ್ನೋದು ಅಭಿಮಾನಿಗಳ ಆರೋಪ. ಉತ್ತಮ ಫಾರ್ಮ್ನಲ್ಲಿದ್ದರೂ ಧವನ್ಗೆ ಅವಕಾಶ ಕೊಡಲಿಲ್ಲ. ಗಾಯದ ಕಾರಣ ಇಟ್ಕೊಂಡು ಅವರನ್ನು ತಂಡದಿಂದಲೇ ಕೈಬಿಟ್ಟ ಆಟವಾಡಿಸಿದೆ ಎಂದು ಫ್ಯಾನ್ಸ್ ಆಕ್ರೋಶವಾಗಿದೆ.
ವೈಯಕ್ತಿಕ ಜೀವನ
ಧವನ್ ವೈಯಕ್ತಿಕ ಜೀವನವು ವಿವಾದಗಳಿಂದ ತುಂಬಿದೆ. ಪತ್ನಿ ಆಯೇಷಾ ಮುಖರ್ಜಿಯವರಿಂದಲೂ ವಿಚ್ಛೇದನ ಪಡೆದಿದ್ದಾರೆ. ಶಿಖರ್ ಧವನ್- ಆಯೇಶಾ ಫೇಸ್ ಬುಕ್ ಮೂಲಕ ಪರಿಚಯವಾಗಿ ಪ್ರೀತಿಸಿ ಮದುವೆ ಆಗಿದ್ದರು. ಆಯೇಶಾ, ಧವನ್ಗಿಂತ 10 ವರ್ಷ ದೊಡ್ಡವರು. 2009ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2012ರಲ್ಲಿ ವಿವಾಹವಾದರು. ಆಯೇಷಾ ಮುಖರ್ಜಿಗೆ ಇದು ಎರಡನೇ ಮದುವೆಯಾಗಿತ್ತು. ಇವರಿಗೆ ಧವನ್ ಮದುವೆ ಆಗುವುದಕ್ಕೂ ಮೊದಲು ಇಬ್ಬರು ಹೆಣ್ಮಕ್ಕಳಿದ್ದರು.
ಇದನ್ನೂ ಓದಿ:ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತನಾಡೋರ ವಿರುದ್ಧ ಡಾಲಿ ಧನಂಜಯ ಆಕ್ರೋಶ.. ಏನಂದ್ರು
2014ರಲ್ಲಿ ಆಯೇಶಾ-ಧವನ್ಗೆ ಮಗ ಹುಟ್ಟುತ್ತಾನೆ. ಒಂಬತ್ತು ವರ್ಷಗಳ ಕಾಲ ಒಟ್ಟಿಗೆಯಿದ್ದ ಧವನ್ ಮತ್ತು ಆಯೇಶಾ ಬೇರೆಯಾದರು. ಧವನ್ ಪತ್ನಿ ಆಯೇಷಾ ಮುಖರ್ಜಿ, ಭಾರತದಲ್ಲಿ ಜನಿಸಿದ್ದರೂ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಆಯೇಷಾ ಕಿಕ್ ಬಾಕ್ಸರ್. ಅವರ ತಂದೆ ಬಂಗಾಳಿ ಮತ್ತು ತಾಯಿ ಬ್ರಿಟನ್ ಮೂಲದವರು.
ಡಿವೋರ್ಸ್ಗೆ ಕಾರಣ ಏನು..?
ಇಬ್ಬರ ನಡುವೆ ಮನಸ್ತಾಪ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾ ಮೂಲಕ ಪ್ರತ್ಯೇಕತೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ವಿಚ್ಛೇದನಕ್ಕೆ ಕಾರಣ ಆಯೇಷಾಳ ಮೊದಲ ಮದುವೆ. ಮೊದಲ ಪತಿಗೆ ಇಬ್ಬರು ಹೆಣ್ಮಕ್ಕಳನ್ನು ನೋಡಿಕೊಳ್ತೇನೆ, ಆಸ್ಟ್ರೇಲಿಯಾ ಬಿಟ್ಟು ಹೋಗುವುದಿಲ್ಲ ಎಂದು ಭರವಸೆ ನೀಡಿದ್ದರು. ಅದೇ ಸಮಯದಲ್ಲಿ ಧವನ್ ಅವರೊಂದಿಗೆ ಇರುವುದಾಗಿಯೂ ಹೇಳಿದ್ದರು. ಮದುವೆಯ ನಂತರ ಮಗ ಜೋರಾವರ್ ಮತ್ತು ಇಬ್ಬರು ಹೆಣ್ಮಕ್ಕಳೊಂದಿಗೆ ಆಸ್ಟ್ರೇಲಿಯಾಗೆ ಹೋಗಿ ವಾಸವಿದ್ದರು. ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಭಾರತದಲ್ಲಿ ವಾಸಿಸಲು ನನಗೆ ಇಷ್ಟ ಇದೆ. ಧವನ್ ಜೊತೆಗೂ ಬದುಕಲು ಮನಸ್ಸಿದೆ. ಈಗಾಗಲೇ ಇಬ್ಬರು ಮಕ್ಕಳಿದ್ದು, ಅವರ ಬದುಕಿಗಾಗಿ ಆಸ್ಟ್ರೇಲಿಯಾದಲ್ಲೇ ಇರುವ ಅನಿವಾರ್ಯತೆ ಇದೆ ಎಂದು ಕೋರ್ಟ್ಗೆ ತಿಳಿಸಿದ್ದರು.
ಧವನ್ ಟೆಸ್ಟ್ ವೃತ್ತಿಜೀವನ
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಆಡಿದರು. 2013 ರಿಂದ ಇಲ್ಲಿಯವರೆಗೆ 34 ಟೆಸ್ಟ್ ಆಡಿದ್ದಾರೆ. ಕೊನೆಯ ಬಾರಿಗೆ 2018ರಲ್ಲಿ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದಿದ್ದರು. ಅವರು 40.61 ಸರಾಸರಿಯಲ್ಲಿ 2315 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 7 ಶತಕಗಳು ಮತ್ತು 5 ಅರ್ಧ ಶತಕ ಬಾರಿಸಿದ್ದಾರೆ. ಗರಿಷ್ಠ ಸ್ಕೋರ್ 190 ರನ್.
ಇದನ್ನೂ ಓದಿ:ನಿವೃತ್ತಿ ವದಂತಿ ಬೆನ್ನಲ್ಲೇ.. ಮತ್ತೊಂದು ಬಿಗ್ ಸ್ಟೇಟ್ಮೆಂಟ್ ಕೊಟ್ಟ KL ರಾಹುಲ್..!
ODI ಮತ್ತು T20 ಯಲ್ಲೂ ಯಶಸ್ವಿ
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣದಲ್ಲಿ ಮೊದಲ ODI ಆಡಿದರು. 167 ಪಂದ್ಯಗಳಲ್ಲಿ 6793 ರನ್ ಗಳಿಸಿದ್ದಾರೆ. ಸರಾಸರಿ 44.11 ಮತ್ತು ಸ್ಟ್ರೈಕ್ ರೇಟ್ ಹೊಂದಿದ್ದಾರೆ. 17 ಶತಕ ಮತ್ತು 39 ಅರ್ಧ ಶತಕ ಧವನ್ ಹೆಸರಲ್ಲಿವೆ. 68 ಟಿ-20 ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ. 11 ಅರ್ಧಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿಗೆ ತಂದೆ ಆಗ್ತಿದ್ದಾರೆ ರೋಹಿತ್ ಶರ್ಮಾ; ವಿಡಿಯೋದಲ್ಲಿ ಕ್ಲೂ ಬಿಟ್ಟುಕೊಟ್ಟ ರಿತಿಕಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್