ಅರಣ್ಯ ಇಲಾಖೆಯ ಸರ್ಕಾರಿ ಅಧಿಕಾರಿಯೊಬ್ಬರು ಹನಿ ಟ್ರ್ಯಾಪ್ ಬಲೆಗೆ
15 ಲಕ್ಷ ರೂಪಾಯಿ ಹಣಕ್ಕೆ ಡೀಲ್ ಮಾಡಿರುವ ಆರೋಪಿಗಳ ಗ್ಯಾಂಗ್?
ಮೇಗರವಳ್ಳಿ ಮೂಲದ ಅಧಿಕಾರಿಯೊಬ್ಬರ ನಡುವಿನ ಹನಿ, ಹನಿ ಕಹಾನಿ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಲ್ಲಿ ಅಶ್ಲೀಲ ವಿಡಿಯೋ, ವೇಶ್ಯಾವಾಟಿಕೆ ಜಾಲ ಬಯಲಾದ ಬಳಿಕ ಹನಿ ಟ್ರ್ಯಾಪ್ ಕೂಡ ನಡೆದಿರೋ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ. ಇಬ್ಬರು ಯುವತಿಯರ ಗ್ಯಾಂಗ್, ಪ್ರತಿಷ್ಠಿತ ಅಧಿಕಾರಿಯೊಬ್ಬರ ನಡುವಿನ ಹನಿ, ಹನಿ ಕಹಾನಿ ಈಗ ಭಾರೀ ಸುದ್ದಿಯಲ್ಲಿದೆ.
ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಅಧಿಕಾರಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ದೂರೊಂದು ದಾಖಲಾಗಿದೆ. ಒಂದು ಹಂತಕ್ಕೆ 15 ಲಕ್ಷ ರೂಪಾಯಿ ಹಣಕ್ಕೆ ಈ ಪ್ರಕರಣವನ್ನು ಆರೋಪಿಗಳು ಡೀಲ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಜ್ಜವಳ್ಳಿ ಮೂಲದ ಯುವತಿ ಒಬ್ಬಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಗಂಟೆ ಹಕ್ಲು ಮೂಲದ ಯುವಕನೊಬ್ಬನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಮೂಲದ ಅರಣ್ಯ ಇಲಾಖೆಯ ಸರ್ಕಾರಿ ಅಧಿಕಾರಿಯೊಬ್ಬರು ಹನಿ ಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಇಬ್ಬರು ಮಾತ್ರ ಬಂಧಿತರಾಗಿದ್ದು ವ್ಯವಸ್ಥಿತವಾದ ತಂಡ ಇದರ ಹಿಂದಿದ್ದು ಅವರ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ. ಹನಿ ಟ್ರ್ಯಾಪ್ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯಕ್ಕೆ ಸರ್ಕಾರಿ ಅಧಿಕಾರಿಯೊಬ್ಬರು ಈ ಬಲೆಗೆ ಬಿದ್ದಿರೋ ಅಂಶ ಬೆಳಕಿಗೆ ಬಂದಿದೆ. ಅವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ