newsfirstkannada.com

ನಟಿ ಕಂಗನಾ ಎಮರ್ಜೆನ್ಸಿ ಸಿನಿಮಾ ರಿಲೀಸ್​​ಗೆ ನೂರೆಂಟು ವಿಘ್ನ; ಜೀವ ಬೆದರಿಕೆ ಹಾಕಿದ್ಯಾರು?

Share :

Published August 31, 2024 at 8:05pm

    ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೆ ನೂರೆಂಟು ವಿಘ್ನ

    ಕ್ವೀನ್ ನಟನೆಯ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ ಸೆನ್ಸಾರ್ ಬೋರ್ಡ್​

    ನಿರಂತರ ಬೆದರಿಕೆ, ಲೀಗಲ್ ನೋಟಿಸ್, ನೂರಾರು ವಿವಾದದಲ್ಲಿ ಸಿನಿಮಾ

ಮುಂಬೈ: ಕಂಗನಾ ರಣಾವತ್, ವಿವಾದಗಳು ಈ ನಟಿಯ ಸುತ್ತುತ್ತವೆಯೋ, ವಿವಾದಗಳ ಹಿಂದೆ ಇವರು ಸುತ್ತುತ್ತಾರೊ ಗೊತ್ತಿಲ್ಲ. ಒಂದಿಲ್ಲ ಒಂದು ರೀತಿಯಲ್ಲಿ ಈ ನಟಿ ಹಾಗೂ ಸಂಸದೆ ಸದಾ ಸುದ್ದಿಯಲ್ಲಿರುತ್ತಾರೆ. ತನ್ನದು ನೇರ ನುಡಿ ಎಂದೇ ಹೇಳಿಕೊಳ್ಳುವ ಕಂಗನಾಳ ಒಂದು ಹೇಳಿಕೆಯೋ, ಒಂದು ಸಿನಿಮಾವೋ, ಒಂದು ನಡೆಯೋ ಒಟ್ಟಲ್ಲಿ ಒಂದಿಲ್ಲ ಒಂದು ವಿವಾದ ಆಕೆಯ ಸುತ್ತ ಸದಾ ಸುತ್ತುತ್ತಿರುತ್ತದೆ. ಈಗ ತಾನೇ ನಿರ್ಮಿಸಿದ ಸಿನಿಮಾವೊಂದು ಕೂಡ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಅಂಶಗಳು ಸಿನಿಮಾದಲ್ಲಿ ಅಡಗಿವೆ ಎಂದು ಸಿನಿಮಾ ಬ್ಯಾನ್​ಗೆ ಕರೆಕೊಡುವ ಮಟ್ಟಕ್ಕೆ ಈಗ ಎಮರ್ಜೆನ್ಸಿ ಸಿನಿಮಾ ಬಂದು ನಿಂತಿದೆ.

ಇದನ್ನೂ ಓದಿ: VIDEO: ವಡಾಪಾವ್​​ ತಿನ್ನಲು ಹೋಗಿ ಚಿನ್ನದ ಒಡವೆ ಕಳೆದುಕೊಂಡ ದಂಪತಿ; ಕಳ್ಳ ಕದ್ದಿದ್ದು ಹೀಗೆ!

ಕಂಗನಾ ನಿರ್ಮಾಣದ ಸಿನಿಮಾ ಎಮೆರ್ಜೆನ್ಸಿ, ಇಂದಿರಾ ಗಾಂಧಿ ಪ್ರಧಾನಿಯಾದ ಕಾಲಘಟ್ಟದಲ್ಲಿ ದೇಶದಲ್ಲಿ ಘೋಷಿಸಲಾದ ಎಮೆರ್ಜನ್ಸಿಯಿಂದ ಹಿಡಿದು, ಬಾಂಗ್ಲಾ ವಿಮೋಚನೆಯಿಂದ ಹಿಡಿದು, ಇಂದಿರಾ ಹತ್ಯೆಯವರೆಗೂ ಈ ಸಿನಿಮಾ ಹಲವು ಅಂಶಗಳನ್ನು ಒಳಗೊಂಡಿದೆ. ಇದು ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಲಡ್ಡು ಬೇಕಂದ್ರೆ ಈ​ ಕಾರ್ಡ್​ ಬೇಕೇ ಬೇಕು; TTD ಅಧಿಕಾರಿ ಹೇಳಿದ್ದೇನು?

ಸಿನಿಮಾ ಗ್ರೀನ್​ ಸಿಗ್ನಲ್ ಕೊಡಲು ಸಿಬಿಎಸ್​ಸಿ ಮೀನಾಮೇಷ

ಇನ್ನು ಕಂಗನಾ ಪ್ರಮುಖ ಪಾತ್ರದಲ್ಲಿರುವ ಎಮರ್ಜೆನ್ಸಿ ಸಿನಿಮಾದ ಶೂಟಿಂಗ್ ಮುಗಿದು, ಸೆಪ್ಟಂಬರ್ 6ಕ್ಕೆ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡು ಕೂತಿದೆ. ಆದ್ರೆ ಸಿನಿಮಾಗೆ ಮಾತ್ರ ಸೆಂಟ್ರಲ್ ಬೋರ್ಡ್ ಫಿಲ್ಮ್​ ಸರ್ಟಿಫಿಕೆಟ್ ಮಾತ್ರ ಇನ್ನೂ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ. ಹಲವು ಬೆದರಿಕೆಗಳಿಂದಾಗಿ ಸೆನ್ಸಾರ್ ಬೋರ್ಡ್​ ಸಿನಿಮಾವನ್ನು ತಡೆಹಿಡಿದು ಕೊಂಡಿದೆ ಎಂದು ಖುದ್ದು ಕಂಗನಾ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಹೇಳಿದ್ದಾರೆ.

ದೇಶಾದ್ಯಂತ ಸಿನಿಮಾ ಬ್ಯಾನ್​ಗೆ ಶಿರೋಮಣಿ ಅಕಾಲಿದಳ ಆಗ್ರಹ

ಇನ್ನು ಸಿನಿಮಾದಲ್ಲಿ ಸಿಖ್ ಸಮುದಾಯದ ಭಾವನೆಗೆ ಧಕ್ಕೆಯಾಗುವ ಅಂಶಗಳಿವೆ ಎಂದು ಆರೋಪಿಸಿರುವ ಶಿರೋಮಣಿ ಅಕಾಲಿದಳ, ಸಿನಿಮಾವನ್ನು ದೇಶಾದ್ಯಂತ ಬ್ಯಾನ್ ಮಾಡಬೇಕು ಎಂಬ ಆಗ್ರಹ ಮಾಡಿದೆ. ಪಕ್ಷದ ಅಧ್ಯಕ್ಷರಾಗಿರುವ ಪರಂಜೀತ್ ಸಿಂಗ್ ಸರ್ನಾ ಈಗಾಗಲೇ ಸೆನ್ಸಾರ್​ ಬೋರ್ಡ್​ಗೆ ಒಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೇ ಈ ಸಿನಿಮಾದ ಟ್ರೈಲರ್ ನೋಡಿದಾಗ ಇತಿಹಾಸದ ಹಲವು ವಿಚಾರಗಳನ್ನು ತಿರುಚಿ ತೋರಿಸಲಾಗಿದೆ. ಸಿಖ್ ಸಮುದಾಯದನ್ನು ಬೇರೆ ರೀತಿ ನಿರೂಪಿಸಲಾಗಿದೆ. ಇದು ಕೇವಲ ಜನರ ದಿಕ್ಕು ತಪ್ಪಿಸುತ್ತಿಲ್ಲ, ಪಂಜಾಬ್ ಹಾಗೂ ದೇಶದ ಸಾಮಾಜಿಕ ಮೌಲ್ಯಗಳಿಗೆ ಹಾನಿ ಮಾಡುತ್ತಿದೆ. ಈ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ಲೀಗಲ್ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ನಟ ವಿಶಾಖ್ ನಾಯರ್​ಗೆ ಪ್ರಾಣ ಬೆದರಿಕೆ

ಇನ್ನೂ ಎಮರ್ಜೆನ್ಸಿ ಸಿನಿಮಾದಲ್ಲಿ ನಟಿಸಿರುವ ನಟ ವಿಶಾಖ್​ ನಾಯರ್ ಅವರಿಗೂ ಕೂಡ ನಿರಂತರವಾಗಿ ಪ್ರಾಣ ಬೆದರಿಕೆ ಬರುತ್ತಿವೆಯಂತೆ. ಈ ಬಗ್ಗೆ ಅವರೇ ಖುದ್ದು ಹೇಳಿಕೊಂಡಿದ್ದು. ಸಿನಿಮಾದಲ್ಲಿ ನಾನು ಜರ್ನೈಲ್ ಸಿಂಗ್ ಭಿಂದ್ರನ್​ವಾಲೆ ಪಾತ್ರ ಮಾಡಿದ್ದೇನೆ ಎಂದು ತಪ್ಪು ಕಲ್ಪಿಸಿಕೊಂಡಿರುವ ಕೆಲವು ಜನರು, ನನಗೆ ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ. ನಿರಂತರ ಕರೆ ಹಾಗೂ ಮೆಸೇಜ್​ಗಳ ಮೂಲಕ ನನಗೆ ಪ್ರಾಣ ಬೆದರಿಕೆವೊಡ್ಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆಯಲ್ಲಿ ಮತ್ತೆರಡು ಬೆಳೆಗಳ ಖರೀದಿಗೆ ಅನುಮತಿ

ಆದ್ರೆ ಅಸಲಿಗೆ ನಾನು ಈ ಸಿನಿಮಾದಲ್ಲಿ ಭಿಂದ್ರನ್​ವಾಲೆ ಪಾತ್ರ ಮಾಡಿಲ್ಲ, ನಾನು ನಿಭಾಯಿಸಿದ್ದು ಸಂಜಯ್ ಗಾಂಧಿ ಪಾತ್ರ, ದಯವಿಟ್ಟು ಎಲ್ಲವನ್ನೂ ತಿಳಿದುಕೊಂಡು ಮಾತನಾಡಲಿ ಎಂದು ವಿಶಾಖ್ ಮನವಿ ಮಾಡಿದ್ದಾರೆ.

ಒಟ್ಟಾರೆ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಮಿಂಚಿರುವ ಎಮರ್ಜೆನ್ಸಿ ಸಿನಿಮಾಗೆ ನೂರೆಂಟು ವಿಘ್ನಗಳು ಉಂಟಾಗುತ್ತಿವೆ. ಸೆಪ್ಟಂಬರ್ 6 ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಆದ್ರೆ ಅಂದುಕೊಂಡಷ್ಟು ಸುಲಭವಾಗಿ ತೆರೆಗ ಬರಲಿದೆಯಾ..? ಅಥವಾ ವಿರೋಧಗಳು ಇನ್ನೂ ಜಾಸ್ತಿಯಾಗಲಿವೆಯಾ ಅನ್ನೊ ಸಂಶಯ ಇನ್ನೂ ಕೂಡ ಕೊನೆಗೊಂಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಕಂಗನಾ ಎಮರ್ಜೆನ್ಸಿ ಸಿನಿಮಾ ರಿಲೀಸ್​​ಗೆ ನೂರೆಂಟು ವಿಘ್ನ; ಜೀವ ಬೆದರಿಕೆ ಹಾಕಿದ್ಯಾರು?

https://newsfirstlive.com/wp-content/uploads/2024/08/KANGANA-EMERGENCY-MOVIE.jpg

Load More