/newsfirstlive-kannada/media/post_attachments/wp-content/uploads/2024/07/Shirur-6.jpg)
ಗುಡ್ಡ ಕುಸಿತ ದುರಂತ ಸಂಭವಿಸಿ ತಿಂಗಳಿಗೆ ಹತ್ತಿರವಾಗ್ತಿದೆ. ಗುಡ್ಡದ ಭೂತದ ಬಾಯಿಗೆ ತುತ್ತಾಗಿ 8 ಮಂದಿ ಪ್ರಾಣ ಚೆಲ್ಲಿದ್ದಾರೆ. ಈ ಪೈಕಿ ನಾಪತ್ತೆಯಾಗಿದ್ದ ಮೂವರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಅತ್ತ, ಮೃತರ ಕುಟುಂಬಸ್ಥರು ನಿತ್ಯ ಕಣ್ಣೀರಿಡುತ್ತಿದ್ದಾರೆ. ಈ ಮಧ್ಯೆ ಮಣ್ಣಿನಡಿ ಮರೆಯಾದವರಿಗಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಮತ್ತೆ ಶುರುವಾಗ್ತಿದೆ.
ಇದನ್ನೂ ಓದಿ: ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!
/newsfirstlive-kannada/media/post_attachments/wp-content/uploads/2024/07/SHIRURU_GUDDA.jpg)
ಹೌದು, ಜುಲೈ 16ರಂದು ಶಾಂತವಾಗಿದ್ದ ಉತ್ತರ ಕನ್ನಡದ ಶಿರೂರು ಗುಡ್ಡ ರಾಕ್ಷಸ ರೂಪ ತಾಳಿದ ದಿನ. ಕೆರಳಿದ ಗುಡ್ಡದ ಭೂತ ಅದೆಷ್ಟೋ ಮಂದಿಯನ್ನ ಬಲಿ ಪಡೆದುಕೊಂಡ ದಿನ. ಅಂದು ಗುಡ್ಡದ ಭೂತದ ಪ್ರತಾಪಕ್ಕೆ ಅಕ್ಷರಶಃ ಹಲವರು ಮಣ್ಣಿನಡಿ ಉಸಿರು ನಿಲ್ಲಿಸಿದ್ರು. ಈಗಾಗಲೇ 8 ಮಂದಿಯ ಮೃತದೇಹ ಸಿಕ್ಕಿದ್ರೆ, ಇನ್ನೂ ಮೂವರ ಪತ್ತೆಯಾಗಿಲ್ಲ. ಲಾರಿ ಪತ್ತೆಯಾದ್ರೂ ಲಾರಿ ಚಾಲಕ ಅರ್ಜುನ್​ನ ಸುಳಿವೇ ಸಿಕ್ಕಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಶೋಧ ಕಾರ್ಯ ಪುನಾರಂಭಿಸಲಾಗ್ತಿದೆ.
/newsfirstlive-kannada/media/post_attachments/wp-content/uploads/2024/07/shiruru1.jpg)
ಗುಡ್ಡದ ಸಮೀಪದಲ್ಲಿರುವ ಗಂಗಾವಳಿ ನದಿಯ ಪ್ರತಾಪ ಜಾಸ್ತಿಯಿದ್ದ ಕಾರಣಕ್ಕೆ. ಹಾಗೇ ಮಳೆಯಾರ್ಭಟ ಜಾಸ್ತಿಯಿದ್ದ ಕಾರಣ ಶೋಧ ಕಾರ್ಯಕ್ಕೆ ಸಾಕಷ್ಟು ತೊಂದರೆಯಾಗ್ತಾಯಿತ್ತು. ಅದಲ್ಲದೇ, ಶೋಧಕಾರ್ಯ ನಡೆಸುವ ಸಂದರ್ಭದಲ್ಲಿ ಕಲ್ಲು, ಮಣ್ಣು, ಮರದ ತುಂಡು ಪತ್ತೆಯಾಗಿದ್ದು ಸಾಕಷ್ಟು ಅಡೆ ತಡೆಗಳು ಎದುರಾಗಿದ್ವು. ಹೀಗಾಗಿ ಜುಲೈ 28ರಂದು ಕಾರ್ಯಚರಣೆ ಸ್ಥಗಿತ ಆಗಿತ್ತು.
ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/07/Shiruru-Landslide-1.jpg)
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ವರುಣನ ಆರ್ಭಟ ಕೊಂಚ ತಗ್ಗಿದಂತೆ ಕಾಣ್ತಿದೆ. ಹೀಗಾಗಿ, ಇಂದು ಈಶ್ವರ್​ ಮಲ್ಪೆ ನೇತೃತ್ವದ ತಂಡದ ಮತ್ತೆ ಕಾರ್ಯಾಚರಣೆಗೆ ಇಳಿಯಲಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಈಶ್ವರ್ ಮಲ್ಪೆ ತಂಡ ಇಂದು ಶೋಧ ಕಾರ್ಯಕ್ಕೆ ಧುಮುಕಲಿದೆ. ನದಿಗೆ ಇಳಿದು ಲಾರಿ ಮೇಲೆತ್ತುವ ಕಾರ್ಯದ ಜೊತೆಗೆ ಲಾರಿ ಚಾಲಕ ಅರ್ಜುನ್​ ಸೇರಿ ಜಗನ್ನಾಥ್​, ಲೋಕೇಶ್​ಗಾಗಿ ಹುಡುಕಾಟ ನಡೆಯಲಿದೆ. ಒಟ್ಟಾರೆ, ಗುಡ್ಡದ ಭೂತದಿಂದ ಕಾಣೆಯಾದ ತಮ್ಮವರಿಗಾಗಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಕೊನೆ ಸಲ ಮುಖ ನೋಡಬೇಕು ಅಂತ ಕಂಬನಿಗರೆಯುತ್ತಿದ್ದಾರೆ. ದೇವರ ದಯೆ ಶೋಧ ಕಾರ್ಯ ಪುನಾರಾರಂಭವಾಗ್ತಿದೆ. ಆ ಕುಟುಂಬಗಳ ಕೊನೆಯಾಸೆ ಈಡೇರುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us