/newsfirstlive-kannada/media/post_attachments/wp-content/uploads/2024/10/bbk1112.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರ ಪೈಕಿ ಮೊನ್ನೆಯಷ್ಟೇ ಬಿಗ್​ಬಾಸ್​ ಮನೆಯಿಂದ ಲಾಯರ್​ ಜಗದೀಶ್​ ಹಾಗೂ ರಂಜಿತ್​ ಔಟ್​ ಆಗಿದ್ದರು.
/newsfirstlive-kannada/media/post_attachments/wp-content/uploads/2024/10/bbk1111.jpg)
ಇದಾದ ಬೆನ್ನಲ್ಲೇ ಬಿಗ್​​ಬಾಸ್​ ಮನೆಗೆ ವೈಲ್ಡ್ ಕಾರ್ಡ್​ನಲ್ಲಿ ಓರ್ವ ಹೊಸ ಸ್ಪರ್ಧಿ ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರೆ ಯಾರು ಅಲ್ಲ. ಕನ್ನಡದ ಫೇಮಸ್​ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿದೆ. ಮೂರನೇ ವಾರ ವೈಲ್ಡ್ ಕಾರ್ಡ್ ಆಗಿ ಬಂದ ಸ್ಪರ್ಧಿಯನ್ನೇ ಬಿಗ್​ಬಾಸ್​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದರು. ಈ ಘೋಷಣೆಯಿಂದ ಮನೆಯಲ್ಲಿನ ಎಲ್ಲಾ ಸದಸ್ಯರು ಒಂದು ಕ್ಷಣ ಶಾಕ್ ಆಗಿದ್ದರು.
/newsfirstlive-kannada/media/post_attachments/wp-content/uploads/2024/10/BBK11-4-1.jpg)
ಇದೀಗ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳ ಮಧ್ಯೆ ಬೆಂಕಿ ಹೊತ್ತಿಕೊಂಡದೆ. ಬಿಗ್​ಬಾಸ್​ ಮನೆ ಮಂದಿಗೆ ಕ್ಯಾಪ್ಟನ್ಸಿ ಟಾಸ್ಕ್​ ಕೊಟ್ಟಿದ್ದಾರೆ. ಜೋಡಿಗಳು ಸುತ್ತುತ್ತಾ, 17 ನಿಮಿಷಗಳನ್ನು ಎಣಿಸುತ್ತಾ ತಿರುಗಬೇಕು ಅಂತ ಹೇಳಿದ್ದರು. ಈ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಗ್ರಂ ಮಂಜು ಹಾಗೂ ಶಿಶಿರ್​ ನಡುವೆ ಗಲಾಟೆಯಾಗಿದೆ.
View this post on Instagram
ಕ್ಯಾಪ್ಟನ್ಸಿ ಪಟ್ಟ ಸಿಗಬಾರದೆಂದು ಉಗ್ರಂ ಮಂಜು, ಶಿಶರ್​ಗೆ ಡಿಸ್ಟ್ರಾಕ್ಟ್ ಮಾಡಿದ್ದಾರೆ. ಆಗ ಅದೇ ಕೋಪದಲ್ಲಿ ಮಂಜು, ಶಿಶಿರ್​ಗೆ ಹಾಗೂ ಸುರೇಶ್​ಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯೆ ಮಧ್ಯೆ ಕೋಲನ್ನು ಅಡ್ಡ ತಂದಿದ್ದಾರೆ. ಜೋರಾಗಿ ಕೋಲು ತಳ್ಳಿದ್ದರಿಂದ ಶಿಶಿರ್​ ಕೈಗೆ ಗಾಯವಾಗಿದೆ.
ಇದೇ ಕೋಪದಲ್ಲಿ ಶಿಶಿರ್, ಉಗ್ರಂ ಮಂಜುಗೆ​ ದಿಬ್ಬಿನಿಂದ ಹೊಡೆದಿದ್ದಾರೆ. ಇದನ್ನೂ ನೋಡಿದ ಮನೆಮಂದಿ ಶಾಕ್​ ಆಗಿ ಅವರನ್ನು ತಡೆದಿದ್ದಾರೆ. ಇನ್ನು, ಈ ವಾರದ ​ಕ್ಯಾಪ್ಟನ್ ಪಟ್ಟ ಸಿಗೋದು ಯಾವ ಸ್ಪರ್ಧಿಗೆ ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us