‘ಶಿವ ಮದ್ಯ ಮತ್ತು ಗಾಂಜಾ ವ್ಯಸನಿಗಳ ಗುರು ಇದ್ದಂತೆ’ ಎಂದ ಬಿಕಾಶ್ ರಂಜನ್
ಶಿವ ತಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಸರಿಯೇ?
ಅಖಿಲ ಭಾರತ ಹಿಂದೂ ಮಹಾಸಭಾ, ಶಿವನ ಭಕ್ತರು ಕೆಂಡಾಮಂಡಲ
ಕೊಲ್ಕತ್ತಾ: ಸಿಪಿಐ (ಎಂ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ಭಗವಾನ್ ಶಿವನ ಕುರಿತು ನೀಡಿರುವ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಬಿಕಾಶ್ ಅವರ ಹೇಳಿಕೆಯನ್ನು ಖಂಡಿಸಿರುವ ಅಖಿಲ ಭಾರತ ಹಿಂದೂ ಮಹಾಸಭಾ, ಮಹದೇವ ಇಡೀ ಜಗತ್ತನ್ನು ರಕ್ಷಿಸಲು ವಿಷ ಸೇವಿಸಿದವನು. ಶಿವ ಎಂದಿಗೂ ಮದ್ಯ ಸೇವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ನವೆಂಬರ್ 11ರಂದು ಶಿವನ ಕುರಿತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ನನ್ನ ಬಾಲ್ಯದಲ್ಲಿ ಪೋಸ್ಟ್‌ಮ್ಯಾನ್ ಒಬ್ಬ ಕುಡಿದು ಶಿವನ ದೇವಾಲಯಕ್ಕೆ ಒದೆಯುವುದನ್ನು ನೋಡಿದ್ದೇನೆ. ಆತ ತನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ಮಹಾದೇವನನ್ನ ಬೇಡಿಕೊಳ್ಳುತ್ತಿದ್ದ. ಹೀಗಾಗಿ ಶಿವ ಮದ್ಯ ಮತ್ತು ಗಾಂಜಾ ವ್ಯಸನಿಗಳ ಗುರು ಇದ್ದಂತೆ. ಶಿವ ತಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯ ನಡುವೆ ನಾಶವಾದ ಕುಟುಂಬಗಳ ಸಂಖ್ಯೆಯನ್ನು ಯಾರು ಲೆಕ್ಕ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಸಂಸದ ಬಿಕಾಶ್ ರಂಜನ್ ಅವರ ಹೇಳಿಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಕಾಶ್ ಮೇಲೆ ಶಿವನ ಭಕ್ತರು ದೇಶಾದ್ಯಂತ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾವು ಯಾವುದೇ ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ವಿವಾದ ಸೃಷ್ಟಿಸುತ್ತಿರುವವರು ಮೂಲಭೂತವಾದಿಗಳು ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ ನಾನು ಹೇಳಿರುವುದು ನಾನು ನೋಡಿದ ಜೀವನದ ಸತ್ಯ ಸಂಗತಿ. ಇದು ಧರ್ಮಕ್ಕೆ ವಿರುದ್ಧವಾದದ್ದು ಅಲ್ಲ. ವಿಷಯದ ಬಗ್ಗೆ ಆಳವಾಗಿ ಹೋಗದೆ ಮತ್ತು ಧರ್ಮ ಯಾವುದು ಎಂದು ಅರಿತುಕೊಳ್ಳದೆ ಯಾರೋ ಅದನ್ನು ವಿವಾದಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲು ನನಗೆ ವಿಷಾದವಾಗುತ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ