newsfirstkannada.com

‘ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ..’ ದರ್ಶನ್​ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

Share :

Published June 30, 2024 at 2:03pm

  ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್ ಎಂದ ಶಿವಣ್ಣ

  ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು

  ನ್ಯಾಯ ಏನಿದೆಯೋ ನೋಡೋಣ.. ಈಗ ಮಾತಾಡಿ ಪ್ರಯೋಜನ ಇಲ್ಲ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್​ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಯಾಗಿ ಬಂಧನದಲ್ಲಿದ್ದಾರೆ. ಸದ್ಯ ದರ್ಶನ್​ ಪ್ರಕರಣದ ಕುರಿತು ಸ್ಯಾಂಡಲ್​ವುಡ್​ ನಟ ಸೆಂಚುರಿ ಸ್ಟಾರ್​ ಶಿವ ರಾಜ್​ಕುಮಾರ್ ಮೊದಲ ಬಾರಿಗೆ​ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್. ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತೆ. ಪ್ರಕರಣ ನ್ಯಾಯಾಲಯದಲ್ಲಿದೆ. ಒಳ್ಳೆದಾಗುತ್ತೆ ಅನ್ನೋ ಭರವಸೆ ಇದೆ. ಎಲ್ಲಾ ಕುಟುಂಬಕ್ಕೂ ಒಳ್ಳೆದಾಗಬೇಕಿದೆ’ ಶಿವಣ್ಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

ಬಳಿಕ ಮಾತನಾಡಿದ ಶಿವ ರಾಜ್​ಕುಮಾರ್​, ‘ನ್ಯಾಯ ಏನಿದೆಯೋ ಅದಾಗುತ್ತೆ. ಹಣೆಬರಹ ಅದು. ಏನೂ ಮಾಡೋಕೆ ಆಗಲ್ಲ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. ಈ ಘಟನೆಯಿಂದ ಆ ಫ್ಯಾಮಿಲಿಗೆ ಆಗ್ಲಿ, ದರ್ಶನ್ ಅವರ‌ ಫ್ಯಾಮಿಲಿಗೆ ಆಗಲಿ ನೋವಾಗಿರುತ್ತೆ. ನ್ಯಾಯ ಏನಿದೆಯೋ ನೋಡೋಣ. ಈಗ ಮಾತಾಡಿ ಪ್ರಯೋಜನ ಇಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಗೆದ್ದ ನೆಲದ ಮಣ್ಣನ್ನು ಪ್ರಸಾದವಾಗಿ ಸೇವಿಸಿದ ರೋಹಿತ್ ಶರ್ಮಾ.. ಪಿಚ್​​ಗೆ ಮುತ್ತುಕೊಟ್ಟು ಕೃತಜ್ಞತೆ!

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಜೊತೆಗೆ ನಟಿ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಸೆರೆಮನೆ ವಾಸದಲ್ಲಿದ್ದಾರೆ. ಸದ್ಯ ದರ್ಶನ್ 14 ದಿನ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ 8 ದಿನಗಳನ್ನು ಈಗಾಗಲೇ ಕಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ..’ ದರ್ಶನ್​ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

https://newsfirstlive.com/wp-content/uploads/2024/06/Shivaraj-kumar.jpg

Load More