ಕ್ಯಾಮಿಯೋ ರೋಲ್ ಬಗ್ಗೆ ಶಿವಣ್ಣ ಮಾತು
ಜೈಲರ್ ಸಿನಿಮಾ ಬಗ್ಗೆ ಹ್ಯಾಟ್ರಿಕ್ ಹೀರೋ ಏನಂದ್ರು
ರಜನಿಕಾಂತ್ ಸಿನಿಮಾದ ಅನುಭವ ಬಿಚ್ಚಿಟ್ಟ ಸೆಂಚುರಿ ಸ್ವಾರ್
ರಜನಿಕಾಂತ್ ಸದ್ಯ ‘ಜೈಲರ್’ ಸಿನಿಮಾದ ಮೂಲಕ ಪರದೆಯ ಮೇಲೆ ಅಬ್ಬರಿಸುತ್ತಿದ್ದಾರೆ. ವಿಶ್ವದಾದ್ಯಂತ ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ ಈ ಸಿನಿಮಾದಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್ ಮಾತ್ರವಲ್ಲದೆ ಸೆಂಚುರಿ ಸ್ಟಾರ್ ಶಿವ ರಾಜ್ಕುಮಾರ್ ಕೂಡ ನಟಿಸಿದ್ದಾರೆ. ಇದೀಗ ಶಿವಣ್ಣ ವಿಶೇಷ ವಿಡಿಯೋದ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಶಿವಣ್ಣ ಜೈಲರ್ ಸಿನಿಮಾದ ಮೂಲಕ ಫ್ಯಾನ್ಸ್ ಮನದಲ್ಲಿ ಸೆಂಚುರಿ ಬಾರಿಸಿದ್ದಾರೆ. ರಜನಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ
ಜೈಲರ್ ಸಿನಿಮಾದಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ನಾನು ಕ್ಯಾಮಿಯೋ ರೋಲ್ ಮಾಡಿದ್ದೇವೆ. ತಾವೆಲ್ಲರು ಅದನ್ನ ನೋಡಿ ಮೆಚ್ಚಿದ್ದೀರ, ನನ್ನ ಪಾತ್ರಕ್ಕೂ ಗೌರವ ಕೊಟ್ಟಿದ್ದೀರ. ತುಂಬಾ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ. ನೆಲ್ಸನ್ ಸರ್ ಮತ್ತು ರಜನಿ ಸರ್ಗೆ. ಅವರ ಸಿನಿಮಾದಲ್ಲಿ ನಟನೆ ಮಾಡಿ ಅವರ ಜೊತೆ ಕಾಲ ಕಳೆಯೋದೆ ಒಂದು ದೊಡ್ಡ ಖುಷಿ. ಆ ಅನುಭವ ತುಂಬಾ ಚೆನ್ನಾಗಿತ್ತು. ಯಾರೆಲ್ಲಾ ಸಿನಿಮಾ ನೋಡಿಲ್ಲ ಹೋಗಿ ನೋಡಿ. ನಿಜವಾಗ್ಲು ಇಷ್ಟವಾಗುತ್ತೆ. ನೀವೇನು ನನ್ನ ಪಾತ್ರಕ್ಕೆ ಪ್ರೀತಿ ವಿಶ್ವಾಸ ತೋರಿಸಿದ್ದೀರಾ ಅದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಕನ್ನಡ , ತಮಿಳು, ತೆಲುಗು, ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಿದೆ. ಕನ್ನಡದಲ್ಲೂ ನೋಡ್ಬೋದು. 100% ಎಂಜಾಯ್ ಮಾಡ್ತೀರ. ಜೈ ಹಿಂದ್ ಜೈ ಕರ್ನಾಟಕ ಮಾತೆ ಎಂದು ಹೇಳಿದ್ದಾರೆ.
ಶಿವಣ್ಣ ಜೈಲರ್ ಸಿನಿಮಾದ ಮೂಲಕ ಫ್ಯಾನ್ಸ್ ಮನದಲ್ಲಿ ಸೆಂಚುರಿ ಬಾರಿಸಿದ್ದಾರೆ. ರಜನಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.#Shivarajkumar𓃵 #Jailer… pic.twitter.com/J9w7Qd0uIF
— NewsFirst Kannada (@NewsFirstKan) August 12, 2023
ಕಲೆಕ್ಷನ್ ಎಷ್ಟು?
ಇನ್ನು ಜೈಲರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿದೆ. ಎರಡೇ ದಿನದಲ್ಲಿ 100 ಕಲೆಕ್ಷನ್ ಮಾಡಿರೋದಾಗಿ ಅಂದಾಜು ಹಾಕಲಾಗ್ತಿದೆ. ಫಸ್ಟ್ ಡೇ ಭಾರತದಲ್ಲಿ 52 ಕೋಟಿ ಗಳಿಸಿದ್ದ ‘ಜೈಲರ್’, ವಿಶ್ವಾದ್ಯಂತ 80 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನವೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು ಚಿತ್ರಮಂದಿರದ ಗಲ್ಲಾಪೆಟ್ಟಿಗೆ ತುಂಬಿವೆ. ಪರಿಣಾಮ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದಂತಾಗಿದೆ. ಈ ಬಗ್ಗೆ ಅಧಿಕೃತ ನಂಬರ್ಸ್ ಇನ್ನಷ್ಟೇ ಚಿತ್ರತಂಡ ನೀಡಬೇಕಿದೆ.
ಜೈಲರ್ ಸಿನಿಮಾ ಬಗ್ಗೆ..
‘ಜೈಲರ್’ಚಿತ್ರ ಯು/ಎ ಪ್ರಮಾಣ ಪತ್ರ ಪಡೆದ ಸಿನಿಮಾವಾಗಿದೆ. ಈ ಚಿತ್ರದ ಅವಧಿ 2 ಗಂಟೆ 49 ನಿಮಿಷಗಳಿದ್ದು, ಸುಮಾರು 3 ಗಂಟೆಗಳ ಕಾಲ ಸಿನಿಮಾವಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್ ಸಿನಿಮಾ ಮೂಡಿಬಂದಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ