newsfirstkannada.com

ಕಳೆದು ಹೋಗಿದ್ದ ದುಬೆಗೆ ಜೀವ ತುಂಬಿದ್ದು ಒಬ್ಬ ಗ್ರೇಟ್​ ಕ್ಯಾಪ್ಟನ್.. ಕಿಕ್​​ಔಟ್ ಆದವನ ಜಾತಕ ಬದಲಿಸಿದ ರೋಚಕ ಸ್ಟೋರಿ..!

Share :

03-08-2023

    ದುಬೆ ಬಡಿದೆಬ್ಬಿಸಿತು ಆ ಒಂದು ಮಾತು

    40 ತಿಂಗಳ ಬಳಿಕ ಶಿವಂ ದುಬೆ ಕಮ್​​ಬ್ಯಾಕ್

    2 ವರ್ಷದಲ್ಲೇ ಶಿವಂ ಜಾತಕ ಬದಲಿಸಿದ ವ್ಯಕ್ತಿ ಯಾರು?

2 ತಿಂಗಳ ಹಿಂದೆ ರಹಾನೆ.. ಈಗ ಶಿವಂ ದುಬೆ.. ಇವರಿಬ್ಬರ ಕಮ್​​ಬ್ಯಾಕ್​​ ಹಿಂದಿನ ಸೂತ್ರದಾರ ಮಾಹಿ.. ಮಾಹಿಯ ನೀಡಿದ್ದ ಒಂದೇ ಒಂದು ಮಂತ್ರ ಪಠಿಸಿದ ಶಿವಂ ದುಬೆ, ಈಗ ಮತ್ತೆ ಪ್ರಕರಿಸುತ್ತಿದ್ದಾರೆ. ಅಷ್ಟೇ ಅಲ್ಲ. ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದಾರೆ.​​

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಂತೂ ಜಸ್​​ಪ್ರೀತ್​ ಬೂಮ್ರಾ, ಕನ್ನಡಿಗ ಪ್ರಸಿದ್ಧ್​ ಕೃಷ್ಣ ಕಮ್​​ಬ್ಯಾಕ್​ ಮಾಡಿದ್ರು. ಇವರಿಬ್ಬರ ಜೊತೆಗೆ ವೇಗಿ ಅವೇಶ್​ ಖಾನ್, ಅರ್ಷ್​​ದೀಪ್​ ಸಿಂಗ್​ ಕೂಡ ತಂಡ ಸೇರಿಕೊಂಡಿದ್ದಾಯ್ತು. ಅಷ್ಟೇ ಅಲ್ಲ.. ಯುವ ಮುಖಗಳಿಗೂ ತಂಡದಲ್ಲಿ ಚಾನ್ಸ್​ ನೀಡಲಾಗಿದೆ. ಆದ್ರೆ, ಇದೆಲ್ಲಕ್ಕಿಂತ ಮಿಗಿಲಾಗಿ ಕಳೆದು ಹೋಗಿದ್ದ ಆಟಗಾರನೊಬ್ಬ, ಟೀಮ್ ಇಂಡಿಯಾಗೆ ಕಮ್​​ಬ್ಯಾಕ್​ ಮಾಡಿದ್ದಾನೆ. ಅಂದ್ಹಾಗೆ ಆ ಆಟಗಾರ ಬೇಱರೂ ಅಲ್ಲ. ಆಲ್​ರೌಂಡರ್ ಶಿವಂ ದುಬೆ.

2020 ಫೆಬ್ರವರಿ 02.. ಶಿವಂ ದುಬೆ ಟೀಮ್ ಇಂಡಿಯಾ ಪರ ಆಡಿದ್ದ ಕೊನೆ ಪಂದ್ಯ. ಈ ಬಳಿಕ ಕಿಕ್​ಔಟ್​ ಆಗಿದ್ದ ಶಿವಂ ದುಬೆ ಹೆಸರು ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಕೇಳಿಸಿ ಬರೋಬ್ಬರಿ 40 ತಿಂಗಳೇ ಕಳೆದಿತ್ತು. ಇನ್​ಫ್ಯಾಕ್ಟ್​ ಶಿವಂ Shout down ಆಗಿದ್ದಾನೆ ಅಂತಾನೇ ಕ್ರಿಕೆಟ್​​ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಅದೇ ಶಿವಂ ದುಬೆ, ಐರ್ಲೆಂಡ್​ ಸರಣಿಯಲ್ಲಿ ಸ್ಥಾನ ಪಡೆಯುವುದರೊಂದಿಗೆ 3 ವರ್ಷಗಳ ಬಳಿಕ ಕಮ್​​ಬ್ಯಾಕ್ ಮಾಡಿದ್ದಾನೆ. ಈ ಕಮ್​​ಬ್ಯಾಕ್ ಹಿಂದೆ ಮಹಾನ್ ಪುರುಷನಿದ್ದಾನೆ. ಅವರೇ ದಿ ಗ್ರೇಟ್​ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ..

ಕಳೆದು ಹೋಗಿದ್ದ ದುಬೆಗೆ ಜೀವ ತುಂಬಿದ್ದೇ ಮಾಹಿ..!

ಟೀಮ್ ಇಂಡಿಯಾದಿಂದ ಕಿಕ್​ಔಟ್ ಆಗಿದ್ದ ಶಿವಂ, ನಿಜಕ್ಕೂ ಕಳೆದುಹೋಗಿದ್ರು. ಒಂದು ಮಾತಲ್ಲಿ ಹೇಳೋದಾದ್ರೆ, ಶಿವಂ ಕರಿಯರ್​ ಖತಂ ಆಗಿತ್ತು. ಆದ್ರೆ, ಬರಡಾಗಿದ್ದ ಶಿವಂ ವೃತ್ತಿ ಜೀವನಕ್ಕೆ ನೀರೆರೆದು ಮತ್ತೆ ಜೀವ ತಂಬಿದ್ದು ಮಿಸ್ಟರ್ ಕೂಲ್​​ ಮಾಹಿ…
ಧೋನಿ ಹೇಳಿದ್ದ ಒಂದೇ ಒಂದು ಮಾತನ್ನು. ಮಂತ್ರದಂತೆ ಪಠಣೆ ಮಾಡಿ ಪಾಲಿಸಿದ್ದ ಶಿವಂ, ಫಿನಿಕ್ಸ್​ನಂತೆ ಮೇಲೆದಿದ್ರು. ಅಷ್ಟಕ್ಕೂ ಶಿವಂ ಬ್ಯಾಟಿಂಗ್ ಅಪ್​​ಗ್ರೇಡ್​​​​ಗೆ ಮಾಹಿ ನೀಡಿದ್ದ ಟಿಪ್ಸ್​ ಏನು ಅನ್ನೋದನ್ನ ದುಬೆ ಮಾತಲ್ಲೇ ಕೇಳಿ.

ಹಲವು ವಿಷಯಗಳು ಇವೆ. ಬಟ್ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಖಂಡಿತ ಅಮೂಲ್ಯ ಟಿಪ್ಸ್​ ಪಡೆದಿದ್ದೇನೆ. ಅದರಲ್ಲಿ ಕೊನೆಯವರೆಗೂ ಆಟವಾಡಿ, ಗೇಮ್​​ ಮುಗಿಸಲು ಪ್ರಯತ್ನಿಸಿ. ನಿಮ್ಮ ಬ್ಯಾಟಿಂಗ್‌ನಿಂದ ಅನೇಕ ಪಂದ್ಯಗಳನ್ನ ಗೆಲ್ಲಬಹುದು, ಆದ್ದರಿಂದ ನಿಮ್ಮ ಮೇಲೆ ನಂಬಿಕೆ ಇಡಿ-ಶಿವಂ ದುಬೆ, ಆಲ್​ರೌಂಡರ್​

ಇದೇ ಶಿವಂ ದುಬೆ ಜೀವನವನ್ನ ಬದಲಿಸಿ ಆ ಮಂತ್ರ. ಈ ಒಂದು ಮಂತ್ರ ಫಾಲೋ ಮಾಡಿದ ಬಳಿಕವೇ ಶಿವಂ ವೃತ್ತಿ ಜೀವನವೇ ಸಂಪೂರ್ಣ ಬದಲಾಯ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ಸಕ್ಸಸ್​ ಸಿಕ್ರೇಟ್​ ಕೂಡ ಇದೇ ಸ್ಟ್ರಾಟರ್ಜಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸ್ಲೋ ಆಗಿ ಸ್ಟಾರ್ಟ್​ ಮಾಡೋ ಧೋನಿ, ನಂತರ ಮ್ಯಾಚ್ ಫಿನಿಷ್ ಮಾಡೋದು. ಇದೇ ಪಾಲಿಸಿ ಫಾಲೋ ಮಾಡ್ತಿರೋ ದುಬೆ ಈಗ ಶೈನ್​ ಆಗ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​.. ಐಪಿಎಲ್​ ಸೀಸನ್​​-16.

ಚೆನ್ನೈ ಕ್ಯಾಂಪ್ ಸೇರಿದ 2 ವರ್ಷದಲ್ಲಿ ಬದಲಾಯ್ತು ಚಿತ್ರಣ

ಒಂದೆಡೆ ಟೀಮ್ ಇಂಡಿಯಾದಿಂದ ಕಿಕ್​ಔಟ್ ಆಗಿದ್ದ ಶಿವಂ ದುಬೆ, ಅದೇ ವರ್ಷ ಆರ್​ಸಿಬಿ ಪಾಳಯದಿಂದ ಗೇಟ್​ಪಾಸ್​ ಪಡೆದಿದ್ರು. ಈ ಬೆನ್ನಲ್ಲೇ 2021ರಲ್ಲಿ ಆರ್​ಆರ್​ ಕ್ಯಾಂಪ್ ಸೇರಿದ್ದ ಶಿವಂಗೆ ಸಕ್ಸಸ್​ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿತ್ತು. ಈ ಬೆನ್ನಲ್ಲೇ ಶಿವಂ ದುಬೆ ಸೇರಿದ್ದು ಮಾಸ್ಟರ್​ ಮಾಹಿ ಕ್ಯಾಂಪ್​ಗೆ.. ಸೀಸನ್​​-15ರಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ದುಬೆ, 2023ರಲ್ಲಿ ರೌದ್ರವತಾರವನ್ನೇ ಪ್ರದರ್ಶಿಸಿದ್ದರು.

ಐಪಿಎಲ್ ಸೀಸನ್​-16ರಲ್ಲಿ ಶಿವಂ

ಸೀಸನ್​​-16ರಲ್ಲಿ ಆಡಿದ 16 ಪಂದ್ಯಗಳಿಂದ 418 ರನ್​ ಕೊಳ್ಳೆ ಹೊಡೆದ ಶಿವಂ ದುಬೆ, 38ರ ಸರಾಸರಿಯಲ್ಲಿ ರನ್ ಗಳಿಸಿದ್ರು. ಅಷ್ಟೇ ಅಲ್ಲ.! 158.33ರ ಸ್ಟ್ರೇಕ್​ ರೇಟ್​​ನಲ್ಲಿ ಬ್ಯಾಟ್ ಬೀಸಿದ ದುಬೆ, ಚೆನ್ನೈ ಸೂಪರ್ ಕಿಂಗ್ಸ್​ನ ಮ್ಯಾಚ್ ವಿನ್ನರ್ ಎನಿಸಿದ್ರು. ಬರೋಬ್ಬರಿ 35 ಸಿಕ್ಸರ್​ ಸಿಡಿಸಿದ ಶಿವಂ ದುಬೆ, ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್​ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಅಷ್ಟೇ ಅಲ್ಲ.! ನಂಬಿಕಸ್ಥ ಬ್ಯಾಟ್ಸ್​ಮನ್ ಆಗಿ ಚೆನ್ನೈನ ಮ್ಯಾಚ್ ವಿನ್ನರ್ ಆಗಿ ಮಾರ್ಪಟ್ಟಿದ್ದ ಶಿವಂ, ದೇಶಿ ಕ್ರಿಕೆಟ್​ನಲ್ಲೂ ಘರ್ಜಿಸುತ್ತಿದ್ದಾರೆ.

ಸದ್ಯ ನಡೀತಿರೋ ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ಪರವೂ ಅದೇ ಟೆಂಪಮೆಂಟ್​ ಮುಂದುವರಿಸಿರೋ ದುಬೆ, ಆಡಿದ 3 ಇನ್ನಿಂಗ್ಸ್​​ಗಳಿಂದ 119 ರನ್ ಕಲೆಹಾಕಿರೋ ದುಬೆ, ಡಿಫರೆಂಟ್ ಬ್ಯಾಟಿಂಗ್ ಪೊಸಿಷನ್​ನಲ್ಲಿ ಬ್ಯಾಟ್ ಬೀಸುವ ತಾಕತ್ತಿದೆ. ಸ್ಪಿನ್, ಫಾಸ್ಟ್​ ಎನ್ನದೇ ಕೆಚ್ಚೆದೆಯ ಬ್ಯಾಟಿಂಗ್ ನಡೆಸೋ ಸಾಮರ್ಥ್ಯ ಇದೆ. ಇದೇ ಈಗ ಕಗ್ಗತ್ತಿಲಿನಲ್ಲಿದ್ದ ಶಿವಂ ದುಬೆಯನ್ನ ಟೀಮ್ ಇಂಡಿಯಾಗೆ ಕಮ್​​ಬ್ಯಾಕ್ ಮಾಡುವಂತೆ ಮಾಡಿದ್ದು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದು ಹೋಗಿದ್ದ ದುಬೆಗೆ ಜೀವ ತುಂಬಿದ್ದು ಒಬ್ಬ ಗ್ರೇಟ್​ ಕ್ಯಾಪ್ಟನ್.. ಕಿಕ್​​ಔಟ್ ಆದವನ ಜಾತಕ ಬದಲಿಸಿದ ರೋಚಕ ಸ್ಟೋರಿ..!

https://newsfirstlive.com/wp-content/uploads/2023/08/DUBE-1.jpg

Load More