newsfirstkannada.com

ಟೀಮ್​ ಇಂಡಿಯಾ ಪ್ಲೇಯಿಂಗ್​ -11ನಿಂದ ಈ ಪ್ಲೇಯರ್ ಔಟ್​..? ಯಾರಿಗೆ ​ಸಿಗುತ್ತೆ ಚಾನ್ಸ್?

Share :

Published June 29, 2024 at 7:09pm

    ಒಂದು ಸೋಲನ್ನೂ ಕಾಣದೇ ಫೈನಲ್​ಗೆ ಬಂದ 2 ಟೀಮ್ಸ್

    ಭಾರತದ ಈ ಮೂವರಲ್ಲಿ ಯಾರಿಗೆ ಸಿಗುತ್ತೆ ಆಡುವ ಚಾನ್ಸ್?​

    ಭಾರತ- ಆಫ್ರಿಕಾ ನಡುವಿನ T20 ವಿಶ್ವಕಪ್ ಫೈನಲ್ ಪಂದ್ಯ

2024ರ T20 ವಿಶ್ವಕಪ್‌ ಟೂರ್ನಿಯ ಫೈನಲ್​ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಇದುವರೆಗೆ ಎರಡು ಟೀಮ್​ಗಳು ಸೋಲು ಅನ್ನೋದೇ ಕಂಡಿಲ್ಲ. ಹೀಗಾಗಿ ಈ ಫೈನಲ್​ನಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತೆ ಎನ್ನುವ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಇಂದಿನ ಪ್ಲೇಯಿಂಗ್- 11ನಿಂದ ಶಿವಂ ದುಬೆರನ್ನ ಕೈ ಬಿಡುತ್ತಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

ಆಲ್​​ರೌಂಡರ್​ ಆಗಿ ಭಾರತ ತಂಡದಲ್ಲಿ ಶಿವಂ ದುಬೆರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಂತೆ ದುಬೆಗೆ ತಂಡದಲ್ಲಿ ಆಡಲು 11ರ ಬಳಗದಲ್ಲಿ ಅವಕಾಶ ನೀಡಿತ್ತು. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡರಲ್ಲೂ ದುಬೆ ಫೇಲ್ ಆಗಿದ್ದಾರೆ. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಹೀಗಾಗಿ ಇಂದಿನ ಫೈನಲ್​​ ಪಂದ್ಯದಿಂದ ಕೈ ಬಿಡುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್

ದುಬೆ ಈ ಟೂರ್ನಿಯಲ್ಲಿ 7 ಪಂದ್ಯಗಳಿಂದ ಕೇವಲ 106 ರನ್ ಗಳಿಸಿದ್ದು 106 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬೌಲಿಂಗ್​ನಲ್ಲೂ ಅಂತಹದ್ದೇನು ಪ್ರದರ್ಶನ ನೀಡಿಲ್ಲ. ದುಬೆರನ್ನ ಬೆಂಚ್​ ಕಾಯಿಸಿ, ಸಂಜು ಸ್ಯಾಮ್ಸ್​ನ್, ಯಶಸ್ವಿ ಜೈಸ್ವಾಲ್​ ಅಥವಾ ಚಹಾಲ್ ಈ ಮೂವರಲ್ಲಿ ಒಬ್ಬರಿಗೆ ಅವಕಾಶ ಮಾಡಿಕೊಡಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ​ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು

ಇನ್ನು ಶಿವಂ ದುಬೆ ಅವರು ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 162.30 ಸ್ಟ್ರೈಕ್​ರೇಟ್‌ನಲ್ಲಿ 396 ರನ್ ಗಳಿಸಿದ್ದರು. ಇದೇ ಅವರನ್ನು ಟೀಮ್ ಇಂಡಿಯಾ ಆಯ್ಕೆಗೆ ಮುಖ್ಯ ಕಾರಣವಾಗಿತ್ತು. ಆದರೆ ಸದ್ಯದ ವರ್ಲ್ಡ್​​​ಕಪ್​​ ಮ್ಯಾಚ್​ನಲ್ಲಿ ರೋಹಿತ್ ಬಳಗದಲ್ಲಿ ಯಶಸ್ವಿ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಇದರಿಂದ ಬೇರೆ ಪ್ಲೇಯರ್​ಗೆ ಅವಕಾಸ ಮಾಡಿಕೊಡ್ತಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಪ್ಲೇಯಿಂಗ್​ -11ನಿಂದ ಈ ಪ್ಲೇಯರ್ ಔಟ್​..? ಯಾರಿಗೆ ​ಸಿಗುತ್ತೆ ಚಾನ್ಸ್?

https://newsfirstlive.com/wp-content/uploads/2024/01/Shivam-Dube.jpg

Load More