newsfirstkannada.com

VIDEO: ಮಲೆನಾಡಿಗರ ಬಹುದಿನದ ಕನಸು ನನಸು.. ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನ

Share :

Published August 31, 2023 at 12:04pm

Update August 31, 2023 at 12:13pm

    ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ಶಿವಮೊಗ್ಗ ಏರ್​ಪೋರ್ಟ್

    ಬೆಂಗಳೂರಿನಿಂದ ನೇರ ಶಿವಮೊಗ್ಗಕ್ಕೆ ವಿಮಾನಯಾನ ಶುರು..!

    ದಿನಕ್ಕೆ ಎರಡು ಬಾರಿ ಓಡಾಟ, ಈಗಾಗಲೇ ಮುಂಗಡ ಬುಕ್ಕಿಂಗ್

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮೊದಲ ಇಂಡಿಗೋ ವಿಮಾನವು ಬೆಂಗಳೂರಿನಿಂದ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಫ್ ಆದ ಇಂಡಿಗೋ ವಿಮಾನವು 72 ನಾಗರಿಕರನ್ನು ಹೊತ್ತುಕೊಂಡು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಯಿತು. ಈ ವೇಳೆ ವಿಮಾನದಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಸಂಸದ ಬಿ.ಬೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ ವಿಜಯೇಂದ್ರ, ಮಾಜಿ ಎಂಎಲ್​ಎ ಹರತಾಳು ಹಾಲಪ್ಪ ಸೇರಿದಂತೆ ಇತರೆ ಗಣ್ಯರು ಬಂದಿಳಿದರು.

ಶಿವಮೊಗ್ಗ ಹಾಗೂ ಬೆಂಗಳೂರು ನಡುವಿನ ವಿಮಾನ ಹಾರಾಟ ಇಂದಿನಿಂದ ಅಧಿಕೃತವಾಗಿ ಶುರುವಾಗಿದೆ. ಇಂದು ಮಾತ್ರ 20 ನಿಮಿಷ ಮೊದಲೇ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಂದು ಮೊದಲ ವಿಮಾನ ಲ್ಯಾಂಡ್ ಆಗಿದೆ. ಶಿವಮೊಗ್ಗ ಟು ಬೆಂಗಳೂರು ನಡುವೆ ದಿನಕ್ಕೆ 2 ಬಾರಿ ವಿಮಾನ ಸೇವೆ ಇರಲಿದೆ. ವಿಮಾನ ಪ್ರಯಾಣ ಮಾಡಲು ಉತ್ಸುಕರಾಗಿರುವ ಜನರು ಹೆಚ್ಚಿನ ಪ್ರಮಾಣದಲ್ಲಿ ಮುಂಗಡವಾಗಿ ಆನ್‌ಲೈ​ನ್‌ನಲ್ಲಿ ಬುಕ್ಕಿಂಗ್​ ಮಾಡುತ್ತಿದ್ದಾರೆ. ಶಿವಮೊಗ್ಗ ಶಾಸಕ ಚೆನ್ನಬಸಪ್ಪ, ಚೇಂಬರ್​ ಆಫ್​ ಕಾಮರ್ಸ್​ ಅಧ್ಯಕ್ಷ ಗೋಪಿನಾಥ್​, ಎಂಎಲ್​ಸಿ ಅರುಣ್​ ಸೇರಿದಂತೆ ಹಲವರು ಮೊದಲ ವಿಮಾನದಲ್ಲಿ ಪ್ರಯಾಣ ಮಾಡಿ ಖುಷಿ ವ್ಯಕ್ತಪಡಿಸಿದರು.

ಇನ್ನು ಏರ್​ಪೋರ್ಟ್​ಗೆ ವಿಮಾನ ಬಂದು ಲ್ಯಾಂಡ್ ಆಗುತ್ತಿದ್ದಂತೆ ಎರಡು ಫೈರ್​ ಇಂಜಿನ್ ವಾಹನಗಳು ವಾಟರ್ ಸೆಲ್ಯೂಟ್ ಮಾಡಿರುವುದು ನೋಡುಗರ ಗಮನ ಸೆಳೆಯಿತು. ಶಿವಮೊಗ್ಗಕ್ಕೆ ಬಂದ ಮೊದಲ ವಿಮಾನದಲ್ಲಿ ಪ್ರಯಾಣ ಮಾಡಿದಂತ ಸಚಿವರು, ಶಾಸಕರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಕನಸಿನ ಕೂಸು ಆಗಿದ್ದ ಈ ವಿಮಾನ ನಿಲ್ದಾಣವನ್ನು ಫೆಬ್ರುವರಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರು. ಆಗ ಪ್ರಧಾನಿ ಮೋದಿಯವರು ಮಾತನಾಡಿ, ಈ ವಿಮಾನ ನಿಲ್ದಾಣವು ಕರ್ನಾಟಕದ ಸಂಪ್ರದಾಯ ಮತ್ತು ತಂತ್ರಜ್ಞಾನದ ಸಂಯೋಜನೆ ಒಳಗೊಂಡು ನಿರ್ಮಾಣವಾಗಿದೆ. ಯುವಕರು ಹೊಸ ಕನಸುಗಳನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ 

VIDEO: ಮಲೆನಾಡಿಗರ ಬಹುದಿನದ ಕನಸು ನನಸು.. ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನ

https://newsfirstlive.com/wp-content/uploads/2023/08/SMG_AIRPORT_BSY_1.jpg

Load More