newsfirstkannada.com

ಶಿವಮೊಗ್ಗ ಏರ್​ಪೋರ್ಟ್​​ ರನ್​ ವೇ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ; ಸಂಸದ ರಾಘವೇಂದ್ರ ವಿರುದ್ಧ ಬಾಂಬ್..!

Share :

19-08-2023

  ರಾಜ್ಯದ ಎರಡನೇ ಅತಿ ದೊಡ್ಡ ರನ್​ ವೇ ಎಂಬ ಖ್ಯಾತಿ

  460 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಏರ್​ಪೋರ್ಟ್

  ತಮ್ಮ ಮೇಲಿನ ಆರೋಪಕ್ಕೆ ಉತ್ತರ ಕೊಟ್ಟ ಸಂಸದ ರಾಘವೇಂದ್ರ

ರಾಜ್ಯದ ಎರಡನೇ ಅತಿ ದೊಡ್ಡ ರನ್​ ವೇ ಎಂಬ ಖ್ಯಾತಿ ಪಡೆದಿರೋ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಕಳಂಕವೊಂದು ಅಂಟಿದೆ. ಸುಮಾರು 460 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಏರ್​ಪೋರ್ಟ್​​ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

‘ಬಿ.ವೈ.ರಾಘವೇಂದ್ರ ಪ್ರಭಾವ ಇದೆ’ ಎಂದ ಗುತ್ತಿಗೆದಾರರ ಸಂಘ

ಈ ಬಗ್ಗೆ ಕಾಂಗ್ರೆಸ್​ ಎಂಎಲ್​ಸಿ ಮಂಜುನಾಥ ಭಂಡಾರಿ ಮಾಡಿದ್ದ ಆರೋಪ ಬೆನ್ನಲ್ಲೆ ಜಿಲ್ಲಾ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ ಸಹ ಆರೋಪಿಸಿದೆ. ವಿಮಾನ ನಿಲ್ದಾಣ ನಿರ್ಮಿಸಿದ ಅನುಭವವೇ ಇಲ್ಲದ ಹಾಗೂ ಹೈವೇ ಕೆಲಸ ಮಾಡುತ್ತಿದ್ದ ಗುತ್ತಿಗೆದಾರಿಗೆ ಏರ್​ಪೋರ್ಟ್ ಗುತ್ತಿಗೆ ನೀಡಿದ್ದರ ಹಿಂದೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಕೆಟಿಪಿಪಿ ಆ್ಯಕ್ಟ್​ ಪ್ರಕಾರ ಕೆಲಸ ನಡೆದಿಲ್ಲ. ಒಂದೇ ಕುಟುಂಬದವರಿಗೆ ಟೆಂಡರ್​ ನೀಡಲಾಗಿದೆ. ಅವಕಾಶ ಇಲ್ಲದಿದ್ದರೂ ಟೆಂಡರ್ ​ದಾರರಿಗೆ 4ಜಿ ವಿನಾಯಿತಿ ನೀಡಲಾಗಿದೆ. ಇದರ ಹಿಂದೆ ಸಂಸದ ಬಿ.ವೈ.ರಾಘವೇಂದ್ರರ ಪ್ರಭಾವ ಕೆಲಸ ಮಾಡಿದೆ. ಇದರ ಬಗ್ಗೆ ಲೋಕಾಯುಕ್ತ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ

ಖಾರವಾಗಿ ಉತ್ತರ ಕೊಟ್ಟ ಬಿವೈ ರಾಘವೇಂದ್ರ

ಏರ್​ಪೋರ್ಟ್​ ಕಾಮಗಾರಿಗೆ ಸಂಬಂಧಿಸಿದಂತೆ ಕೇಳಿ ಬರುತ್ತ್ತಿರುವ ಆರೋಪಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಖಾರವಾಗಿ ಉತ್ತರ ನೀಡಿದ್ದಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸಲಿ. ಜನರು ಅವರಿಗೆ ಅಧಿಕಾರ ನೀಡಿದ್ದಾರೆ. ಆದರೆ ಮೂಲ ಸೌಕರ್ಯ ಸಚಿವ ಎಂ.ಬಿ.ಪಾಟೀಲ್​ ಅವರೇ ಶಿವಮೊಗ್ಗ ಏರ್​ಪೋರ್ಟ್​ ಕಾಮಗಾರಿ ಬಗ್ಗೆ ಮಾತನಾಡಿದ್ದಾರೆ. ಎಟಿಆರ್​ ವಿಮಾನ ನಿಲುಗಡೆ ವಿನ್ಯಾಸಗೊಂಡಿದ್ದ ಏರ್​​ಪೋರ್ಟ್ ನಂತರದಲ್ಲಿ ಏರ್​ಬಸ್​ ನಂತಹ ದೊಡ್ಡ ವಿಮಾನ ಸಹ ಇಳಿಯಲು ಅನುಕೂಲವಾಗುವಂತೆ ಮರು ವಿನ್ಯಾಸಗೊಂಡಿದೆ. ಬೆಂಗಳೂರು ಏರ್​​ಪೋರ್ಟ್ ನಂತರದಲ್ಲಿ ರಾಜ್ಯದಲ್ಲಿ ಅತಿದೊಡ್ಡ ರನ್​ ವೇ ಹೊಂದಿರೋ ಏರ್​​ಪೋರ್ಟ್ ಎಂದು ಗುರುತಿಸಿಕೊಂಡಿದೆ. ಹೀಗಿರುವಾಗ ಯಾವುದೇ ತನಿಖೆ ನಡೆದರೂ ಅದಕ್ಕೆ ಸಿದ್ಧ ಎಂದಿದ್ದಾರೆ.

ವಿಮಾನ ನಿಲ್ದಾಣ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನಿ ಮೋದಿ

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಏರ್​ಪೋರ್ಟ್​ಅ​ನ್ನು ಪ್ರಧಾನಿ ನರೇಂದ್ರ ಮೋದಿ ಸ್ವತಃ ಶಿವಮೊಗ್ಗಕ್ಕೆ ಆಗಮಿಸಿ ಉದ್ಘಾಟಿಸಿದ್ದಾರೆ. ಇದೀಗ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿದ್ದು ಆಗಸ್ಟ್​ 31 ರಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ. ಈ ನಡುವೆ ಏರ್ಪೋರ್ಟ್​ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗ ಏರ್​ಪೋರ್ಟ್​​ ರನ್​ ವೇ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ; ಸಂಸದ ರಾಘವೇಂದ್ರ ವಿರುದ್ಧ ಬಾಂಬ್..!

https://newsfirstlive.com/wp-content/uploads/2023/08/SMG_AIRPORT.jpg

Load More