newsfirstkannada.com

ಮಲ್ಲಿಕಾರ್ಜುನ್ ಖರ್ಗೆ ಮೈಬಣ್ಣದ ಬಗ್ಗೆ ನಾಲಿಗೆ ಹರಿಬಿಟ್ಟ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ -Video

Share :

02-08-2023

    ‘ಖರ್ಗೆ ಮೈಬಣ್ಣದ ಬಗ್ಗೆ ಮಾಡಿದ ಅವಹೇಳನ’ ಎಂದ ಕಾಂಗ್ರೆಸ್​

    ದಲಿತರ ಕ್ಷಮೆ ಕೇಳುವಂತೆ ಕಾಂಗ್ರೆಸ್​ ಪಟ್ಟು!

    ಖಂಡ್ರೆಗೆ ಮರ-ಗಿಡ ಏನಂತ ಗೊತ್ತಿಲ್ಲ, ಸುಟ್ಟು ಕರಕಲಾಗಿರ್ತಾರೆ -ಜ್ಞಾನೇಂದ್ರ

ಶಿವಮೊಗ್ಗ: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಲೆನಾಡಿನ ಬಗ್ಗೆ ಗೊತ್ತಿರದ ಆ ಕಡೆಯ ಮಿನಿಸ್ಟರ್​ ಸಾಹೇಬ್ರು ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿಕೊಂಡಿರುವುದೇ ಅವರಿಗೆ ಅದೇ ನೆರಳಂತೆ ತಿಳಿದಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್​ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಸರ್ಕಾರ ಕಸ್ತೂರಿ ರಂಗನ್​ ವರದಿ ಈ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದರು.

ನಮ್ಮ ದುರಾದೃಷ್ಟ ಏನೆಂದರೆ ಫಾರೆಸ್ಟ್​ ಮಿನಿಸ್ಟರ್​ ಸಾಹೇಬ್ರು ಆ ಕಡೆಯವರು. ಅವರಿಗೆ ಮರ-ಗಿಡ, ನೆರಳು ಏನಂಥ ಗೊತ್ತಿಲ್ಲ. ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆರವರನ್ನು ನೋಡಿದ್ರೆ ಗೊತ್ತಾಗುತ್ತದೆ. ಪಾಪ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳಿದುಕೊಂಡಿವೆ. ಅದೇ ನೆರಳು ಅವರಿಗೆ. ಮಲೆನಾಡಿನ ಬಗ್ಗೆ ಬದುಕು ಗೊತ್ತಿಲ್ಲ ಎಂದು ಭಾಷಣದ ವೇಳೆ ಹರಿಹಾಯ್ದಿದ್ದರು.

ಈ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಟ್ವೀಟ್​ ಮಾಡಿರುವ ಕರ್ನಾಟಕ ಕಾಂಗ್ರೆಸ್​ ಖರ್ಗೆಯವರ ಕುರಿತು ನೀಡಿರುವ ಹೇಳಿಕೆ ಇಡೀ ಮೂಲ ನಿವಾಸಿ ದಲಿತರಿಗೆ ಮಾಡಿದ ಅವಮಾನ. ಹೀಗಾಗಿ ಆರಗ ಜ್ಞಾನೇಂದ್ರರವರು ಮಲ್ಲಿಕಾರ್ಜುನ್ ಖರ್ಗೆ ಹಾಗೂ ದಲಿತರ ಬಗ್ಗೆ ಕ್ಷಮೆ ಕೇಳಬೇಕು ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲ್ಲಿಕಾರ್ಜುನ್ ಖರ್ಗೆ ಮೈಬಣ್ಣದ ಬಗ್ಗೆ ನಾಲಿಗೆ ಹರಿಬಿಟ್ಟ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ -Video

https://newsfirstlive.com/wp-content/uploads/2023/08/KHARGE_ARAGA.jpg

Load More