newsfirstkannada.com

ಬರಿದಾಗುತ್ತಿದೆ ‘ಭದ್ರಾ’ ಒಡಲು.. ಡ್ಯಾಂ ನೀರು ಸೋರಿಕೆ ನಿಲ್ಲಿಸಲು ಹರಸಾಹಸ; ಭಾರೀ ಆತಂಕ!

Share :

Published July 6, 2024 at 5:31pm

    ಸೋರಿಕೆ ನಿಲ್ಲದಿದ್ದರೆ 5-6 ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಅಭಾವ

    ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹೀಗೆ ಆಗಿದೆ ಎಂದು ಅನುಮಾನ

    ಭದ್ರಾ ಡ್ಯಾಂ ಸೋರಿಕೆ ಕುರಿತು ಉನ್ನತ ಮಟ್ಟದ ತನಿಖೆಗೆ ಸ್ಥಳೀಯರಿಂದ ಆಗ್ರಹ

ಶಿವಮೊಗ್ಗ: ರಾಜ್ಯದ ಹಲವು ಭಾಗಗಳಲ್ಲಿ ಈಗ ಭಾರೀ ಮಳೆಯಾಗುತ್ತಿವೆ. ಮಲೆನಾಡಿನ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟು ಮಾತ್ರ ತುಂಬಿದ್ದರೂ ನೀರು ಸೋರಿಕೆಯಾಗುತ್ತಿದೆ. ಸಾಮಾನ್ಯವಾಗಿ ಜಲಾಶಯಗಳ ದುರಸ್ತಿ ಕೆಲಸವನ್ನು ನೀರಿಲ್ಲದ ಸಂದರ್ಭದಲ್ಲಿ ಮಾಡುತ್ತಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಲಾಶಯದ ನೀರು ಪೋಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

ಸರ್ಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎನ್ನಲಾಗಿದೆ. ಜಿಲ್ಲೆಯ ರೈತರು, ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಭದ್ರಾ ಜಲಾಶಯದ ಸ್ಲೂಯಿಸ್ ಗೇಟ್​ನಿಂದ ಸಾವಿರಾರು ಕ್ಯೂಸೆಕ್ ನೀರು ನಿರಂತರವಾಗಿ ಹರಿದು ಹೋಗುತ್ತಿವೆ. ಆದರೆ ನೀರನ್ನು ಸೋರಿಕೆಯಾಗದಂತೆ ತಡೆಗಟ್ಟಲು ಅಧಿಕಾರಿಗಳು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಸೋರಿಕೆ ತಡೆಗಟ್ಟಲು ಮರದ ದಿಮ್ಮಿ, ಸೊಪ್ಪು ಬಳಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಸೋರಿಕೆ ತಡೆಗೆ ಡ್ಯಾಂನ ನಿವೃತ್ತ ಮೆಕ್ಯಾನಿಕ್ ವರದಯ್ಯನ ಮೊರೆ ಹೋಗಿದ್ದಾರೆ ಅಧಿಕಾರಿಗಳು.

ಡ್ಯಾಂ ನಿರ್ವಹಣೆಯಲ್ಲಿ ನಿವೃತ್ತ ಮೆಕ್ಯಾನಿಕ್ ವರದಯ್ಯ ಅವರು ಅಪಾರ ಅನುಭವ ಹೊಂದಿದ್ದಾರೆ. ಗೇಟ್ ಎತ್ತುವ ವೇಳೆ ರಬ್ಬರ್ ಮತ್ತಿತರ ಭಾಗಗಳು ಜಾಮ್ ಆಗಿರುವ ಸಾಧ್ಯತೆ ಇದ್ದು, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷದಿಂದ ಹೀಗೆ ಆಗಿದೆ ಎಂದು ಅನುಮಾನ ವ್ಯಕ್ತವಾಗಿದೆ. ಸದ್ಯ ಸೋರಿಕೆಯಾಗುತ್ತಿರೋ ಭದ್ರಾ ಡ್ಯಾಂ ಮಧ್ಯ ಕರ್ನಾಟಕ ಭಾಗದಲ್ಲಿನ ರೈತರ ಜೀವನಾಡಿಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭದ್ರಾ ಡ್ಯಾಂ ಬರಿದಾಗುವ ಆತಂಕ ವ್ಯಕ್ತವಾಗುತ್ತಿದೆ. ಸೋರಿಕೆ ನಿಲ್ಲದಿದ್ದರೆ 5-6 ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ! 

ಇನ್ನು, ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಭದ್ರಾ ಜಲಾಶಯದಲ್ಲಿ ಸ್ವಲ್ಪ ನೀರು ಸೋರಿಕೆ ಆಗುತ್ತಿದೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಟೈಮ್ ಕೊಟ್ಟಿದ್ದೇನೆ. ಇಂದು ಅಧಿಕಾರಿಗಳು ಭದ್ರಾ ಡ್ಯಾಂಗೆ ಭೇಟಿ ನೀಡಿದ್ದಾರೆ. ಏನು ಮಾಡಬೇಕೆಂದು ಟೆಕ್ನಿಕಲ್ ಟೀಮ್ ಕಳುಹಿಸಿದ್ದೇನೆ. ರಿಪೋರ್ಟ್ ಬಂದ್ಮೇಲೆ ಹೇಗೆ ಸ್ಟಾಪ್ ಮಾಡಬೇಕೆಂದು ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರಿದಾಗುತ್ತಿದೆ ‘ಭದ್ರಾ’ ಒಡಲು.. ಡ್ಯಾಂ ನೀರು ಸೋರಿಕೆ ನಿಲ್ಲಿಸಲು ಹರಸಾಹಸ; ಭಾರೀ ಆತಂಕ!

https://newsfirstlive.com/wp-content/uploads/2024/07/Bhadra-Dam2.jpg

Load More