ಪುಕ್ಕಲು ಸರ್ಕಾರವೆಂದು ಲೇವಡಿ ಮಾಡಿದ ಚಕ್ರವರ್ತಿ ಸೂಲಿಬೆಲೆ
ಇದು ಸೂಲಿಬೆಲೆ ವರ್ಸಸ್ ಕಾಂಗ್ರೆಸ್ ನಡುವಿನ ಮಹಾ ಜಟಾಪಟಿ
ಉಪನ್ಯಾಸ ಮುಗಿಸಿ ಬರುತ್ತಿದ್ದ ಸೂಲಿಬೆಲೆಯನ್ನ ತಡೆದ ಪೊಲೀಸರು
ಚಂದ್ರಯಾನದ ಮೂಲಕ ಭಾರತಕ್ಕೆ ಕೀರ್ತಿ ತಂದ ವಿಜ್ಞಾನಿಗಳು ಮುಂದಿನ ಸಾಧನೆ, ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದ್ರೆ, ಇದೇ ಚಂದ್ರಯಾನಕ್ಕೆ ವಿಶ್ ಮಾಡೋದ್ರಿಂದ ಶುರುವಾದ ಜಟಾಪಟಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದು ಚಕ್ರವರ್ತಿ ಸೂಲಿಬೆಲೆ ವರ್ಸಸ್ ಕಾಂಗ್ರೆಸ್ ನಡುವಿನ ಮಹಾ ಜಟಾಪಟಿ. ಇಂಥದ್ದೊಂದು ರಣಾಂಗಣ ಪರಿಸ್ಥಿತಿಗೆ ಸಾಕ್ಷಿಯಾಗಿದ್ದು, ವಿನೋಬ ನಗರ ಪೊಲೀಸ್ ಠಾಣೆ ಆವರಣ.
ಉಪನ್ಯಾಸ ಮುಗಿಸಿ ಬರುವಾಗ ಪೊಲೀಸರ ತಡೆ
ಚಂದ್ರಯಾನ-3ರ ಹಾರೈಕೆಯ ಪೋಸ್ಟ್ನ ಕಾಮೆಂಟ್ನಿಂದ ಶುರುವಾಗಿದ್ದ ವಿವಾದದ ಕಿಡಿ ಎಫ್ಐಆರ್ ದಾಖಲಾಗೋ ಮಟ್ಟಕ್ಕೆ ತಲುಪಿತ್ತು. ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಡಿ ಸೌಗಂಧಿಕಾ ರಘುನಾಥ್ ದೂರು ದಾಖಲಿಸಿದ್ದರು. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ರು. ಶಿವಮೊಗ್ಗದ ಕರ್ನಾಟಕ ಸಂಘದ ಭವನದಲ್ಲಿ ಉಪನ್ಯಾಸ ಮುಗಿಸಿ ಬರುತ್ತಿದ್ದ ಸೂಲಿಬೆಲೆಯನ್ನ ತಡೆದು ಪೊಲೀಸರು ಠಾಣೆಗೆ ಬರುವಂತೆ ಸೂಚನೆ ನೀಡಿದ್ರು.
ವಿನೋಬನಗರ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ
ಸೂಲಿಬೆಲೆಗೆ ನೋಟಿಸ್ ನೀಡಿದ ಐಪಿಎಸ್ ಅಧಿಕಾರಿ ಬಿಂದುಮಣಿ ವಿಚಾರಣೆಗೊಳಪಡಿಸಿದ್ರು. ಈ ವಿಚಾರ ತಿಳಿಯುತ್ತಿದ್ದಂತೆ ಠಾಣೆಗೆ ಬಂದ ಸ್ಥಳೀಯ ಬಿಜೆಪಿ ಶಾಸಕ ಚನ್ನಬಸಪ್ಪ ಸಾತ್ ನೀಡಿದ್ರು. ಅತ್ತ ಪೊಲೀಸ್ ಠಾಣೆ ಮುಂದೆ ಯುವ ಬ್ರಿಗೇಡ್ನ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ರು.
‘ಸಿದ್ದರಾಮಯ್ಯ ಸರ್ಕಾರ ಬಂದಾಗ ಇಂಥ ಘಟನೆ ಆಗುತ್ತೆ’
ಠಾಣೆಗೆ ಲಿಖಿತ ಹೇಳಿಕೆ ನೀಡಿ ವಾಪಸಾದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಸುಳ್ಳು ದೂರು ನೀಡಿದ ವಿಷಯಕ್ಕೆ ಉತ್ತರಿಸಲು ಬಂದಿದ್ದೇನೆ ಎಂದ್ರು. ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ಸರ್ಕಾರದ ಇಂಥ ಬೆದರಿಕೆಗಳಿಗೆ ಬಗ್ಗಲ್ಲ ಅಂತಲೂ ಸಂದೇಶ ಹರಿಬಿಟ್ರು.
‘ಪುಕ್ಕಲು ಸರ್ಕಾರ’
ಎಷ್ಟು ಪುಕ್ಕಲು ಸರ್ಕಾರವಾಗಿದೆ ಎಂದರೆ ಧೈರ್ಯವಾಗಿರುವಂತ ಧ್ವನಿಯನ್ನ, ಕೇಳಿರುವ ಪ್ರಶ್ನೆಯನ್ನ, ಹೇಳಿರುವಂತ ಮಾತನ್ನು ಸರ್ಕಾರಕ್ಕೆ ಎದುರಿಸಲು ಆಗುತ್ತಿಲ್ಲ. ಹಿಟ್ಲರ್ ಶಾಹಿ ತುಂಬಾ ಎದ್ದು ಕಾಣುತ್ತದೆ. ಸಿದ್ದರಾಮಯ್ಯನವರು ಬಂದರೆ ಈ ರೀತಿ ಆಗುತ್ತದೆಂದು ಗೊತ್ತಿರುತ್ತೆ. ಯಾರೂ ಸರ್ಕಾರದ ದೋಷವನ್ನು ಎತ್ತಿ ತೋರಿಸುತ್ತಾರೋ, ಸಮಾಜವನ್ನು ಕಟ್ಟುವಂತ ಕೆಲಸ ಯಾರೂ ಮಾಡುತ್ತಾರೋ ಅವರನ್ನೆಲ್ಲ ಧಮನಿಸುವಂತ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಸಜ್ಜನ ಶಕ್ತಿಗಳು ಒಂದಾಗಿದ್ದೇವೆ. ಈ ತರಹದ ಯಾವುದೇ ಬೆದರಿಕೆಗಳಿಗೆ ಜಗ್ಗಲ್ಲ.
ಚಕ್ರವರ್ತಿ ಸೂಲಿಬೆಲೆ, ವಾಗ್ಮಿ
ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಸೂಲಿಬೆಲೆ, ದ್ವೇಷದ ಕ್ರಿಯೆ ಅನ್ನೋ ಆರೋಪ ಮಾಡಿದ್ರು. ಪ್ರಿಯಾಂಕ್ ಖರ್ಗೆ ನನ್ನನ್ನು ಪೊಲೀಸ್ ಮೆಟ್ಟಿಲು ಹತ್ತಿಸೋದಾಗಿ ಹೇಳಿದ್ರು. ಆದ್ರೆ ಈ ಥರ ಮೆಟ್ಟಿಲು ಹತ್ತಿಸ್ತಾರಂತ ತಿಳ್ಕೊಂಡಿರಲಿಲ್ಲ ಅಂತಾ ಹಳೇ ಕಥೆಗಳನ್ನ ಕೆದಕಿ, ಕೌಂಟರ್ ಕೊಟ್ರು.
‘ಈ ಥರ ಠಾಣೆಗೆ ಹತ್ತಿಸ್ತಾರಂತ ತಿಳ್ಕೊಂಡಿರಲಿಲ್ಲ’
ಮಂತ್ರಿಗಳು ಚಕ್ರವರ್ತಿಯನ್ನ ಜೈಲಿಗೆ ಕಳುಹಿಸುತ್ತೇವೆ. ಒಳಗೆ ಹಾಕಿಸುತ್ತೇವೆ ಎಂದು ಮಾತನಾಡಿದ್ದರು. ಪ್ರಿಯಾಂಕ್ ಖರ್ಗೆ ಖುದ್ದಾಗಿ ಟ್ವಿಟ್ಟರ್ ವಾಲ್ನಲ್ಲಿ ಬಂದು ಒಂದು ದಿನ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸುತ್ತೇನೆ ಎಂದಿದ್ದರು. ಈ ತರ ಮೆಟ್ಟಿಲು ಹತ್ತಿಸುತ್ತಾರೆ ಎಂದು ಗೊತ್ತಿರಲಿಲ್ಲ.
ಚಕ್ರವರ್ತಿ ಸೂಲಿಬೆಲೆ, ವಾಗ್ಮಿ
ಇನ್ನು, ಇದೇ ವೇಳೆ ಮಾತಾಡಿದ ಶಾಸಕ ಚನ್ನಬಸಪ್ಪ, ದೇಶಭಕ್ತ ಸೂಲಿಬೆಲೆಯನ್ನು ಠಾಣೆಗೆ ಕರೆಯಿಸುವ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಯುದ್ಧ ಸಾರಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ. ನಾವು ಇದಕ್ಕೆಲ್ಲ ಹೆದರಲ್ಲ ಬೆದರಲ್ಲ. ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ ಅಂತ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಹೀಗಾಗಿ ಈ ಹೋರಾಟ ಇನ್ನೂ ಮುಂದುವರಿಯೋ ಎಲ್ಲ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ