ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಪದೇ ಪದೇ ಎಡವಟ್ಟುಗಳು ಯಾಕೆ?
ಶಿವಮೂರ್ತಿ ಸರ್ಕಲ್‌ಗೆ ಬರೋಬ್ಬರಿ 75 ವರ್ಷದ ಇತಿಹಾಸವಿದೆ
ಗಣೇಶೋತ್ಸವದ ವೇಳೆ ನಡೆದ ಕೋಮು ಗಲಭೆಯಲ್ಲಿ ಹುತಾತ್ಮ
ಶಿವಮೊಗ್ಗ: ಸ್ಮಾರ್ಟ್ ಸಿಟಿಯಾಗಿ ಹೊಸ ರೂಪ ಪಡೆಯುತ್ತಿರೋ ಶಿವಮೊಗ್ಗದಲ್ಲಿ ಹೊಸದೊಂದು ಎಡವಟ್ಟಾಗಿದೆ. ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಒಂದಾದ ಶಿವಮೂರ್ತಿ ಸರ್ಕಲ್‌ನಲ್ಲಿ ಹುತಾತ್ಮ ಶಿವಮೂರ್ತಿ ಸರ್ಕಲ್ ಎಂಬ ಬೋರ್ಡ್ ಮಾಯವಾಗಿದೆ. ಸುಮಾರು 2 ತಿಂಗಳಿನಿಂದ ಈ ಸರ್ಕಲ್‌ನಲ್ಲಿ ಶಿವಮೂರ್ತಿಯವರ ನಾಮಫಲಕ ಕಾಣದಿರೋದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಯ ಹೆಸರಲ್ಲಿ ಶಿವಮೊಗ್ಗ ನಗರದಲ್ಲಿ ಈಗಾಗಲೇ ಹಲವು ಎಡವಟ್ಟುಗಳು ನಡೆದಿದೆ. ಜೈಲ್ ಸರ್ಕಲ್ನಲ್ಲಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮ ಫಲಕವನ್ನು ತೆಗೆದು ಹಾಕಿದ್ದಲ್ಲದೆ ಅದರ ನಿರ್ವಹಣೆಯನ್ನು ಕಡೆಗಣಿಸಲಾಗಿತ್ತು. ಆ ನಂತರ ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ, ಹೊಸದಾಗಿ ಅಂಬೇಡ್ಕರ್ ವೃತ್ತ ಹೆಸರಿನ ಬೋರ್ಡ್ ಹಾಕಲಾಗಿತ್ತು. ಇದೇ ರೀತಿಯಲ್ಲಿ ಕನ್ನಡ ಧ್ವಜ ಕಟ್ಟೆ ತೆರವಿನ ವಿಚಾರವೂ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೀಗ ಹುತಾತ್ಮ ಶಿವಮೂರ್ತಿಯವರ ಫಲಕ ಕಾಣದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಶಿವಮೂರ್ತಿ ಸರ್ಕಲ್ನ ಮೆಟ್ರೋ ಆಸ್ಪತ್ರೆಯ ಆವರಣದ ಬದಿಯಲ್ಲಿ ಮ್ಯೂರಲ್ ಆರ್ಟ್ ಬಳಸಿ ಕಲಾಕೃತಿಯನ್ನು ಚಿತ್ರಿಸಲಾಗಿದೆ. ಅದೇ ರೀತಿಯಲ್ಲಿ ಶಿವಮೂರ್ತಿ ಸರ್ಕಲ್ ಬೋರ್ಡ್ ಇದ್ದ ಜಾಗದಲ್ಲೂ ಮ್ಯೂರಲ್ ಆರ್ಟ್‌ನಿಂದಲೇ ಶಿವಮೂರ್ತಿ ನಾಮಫಲಕ ಅಳವಡಿಸುವ ಪ್ಲಾನ್ ಆಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಪ್ಲಾನ್ ಅನುಷ್ಠಾನವಾಗಲಿಲ್ಲ. ಮೊದಲಿದ್ದ ಕಬ್ಬಿಣದ ನಾಮಫಲಕವೂ ಕಾಣುತ್ತಿಲ್ಲ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗ ನಗರ ಶಾಸಕರು, ಮೇಯರ್ ಏನಂತಾರೆ?
ಶಿವಮೂರ್ತಿ ಸರ್ಕಲ್ ನಾಮಫಲಕ ಮಾಯವಾದ ಬಗ್ಗೆ ಮೇಯರ್ ಶಿವಕುಮಾರ್ ಅವರನ್ನ ಸಂಪರ್ಕಿಸಿದಾಗ, ಶಿವಮೂರ್ತಿ ಸರ್ಕಲ್‌ನಲ್ಲಿ ಹುತಾತ್ಮ ಶಿವಮೂರ್ತಿ ಸರ್ಕಲ್ ಹೆಸರಿನ ನಾಮಫಲಕ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಗಮನಿಸುತ್ತೇನೆ ಎಂದಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪರವರು, ಹುತಾತ್ಮ ಶಿವಮೂರ್ತಿಯವರ ಹೆಸರಿನ ಶಿಲೆಯಿಂದ ಮಾಡಿರುವ ಫಲಕವನ್ನು, ಈ ಹಿಂದೇ ಇದ್ದ ಸ್ಥಳದಲ್ಲಿಯೇ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಮೂರ್ತಿ ಸರ್ಕಲ್ನ ಚರಿತ್ರೆ ಏನು?
ಶಿವಮೊಗ್ಗ ನಗರದ ಈ ಶಿವಮೂರ್ತಿ ಸರ್ಕಲ್‌ಗೆ ಬರೋಬ್ಬರಿ 75 ವರ್ಷದ ಇತಿಹಾಸವಿದೆ. 1947ರ ಗಣೇಶೋತ್ಸವದ ವೇಳೆ ಎರಡು ಕೋಮುಗಳ ನಡುವೆ ಗಲಭೆ ನಡೆದಿತ್ತು. ಆಗ ಶಿವಮೂರ್ತಿ ಎನ್ನುವ 26 ವರ್ಷದ ಯುವಕನ ಹತ್ಯೆಯಾಗಿತ್ತು. ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ವಾರಗಟ್ಟಲೆ ಕರ್ಫ್ಯೂ ವಿಧಿಸಲಾಗಿತ್ತು. ಕೊನೆಗೆ ಪೊಲೀಸರ ಸರ್ಪಗಾವಲಿನಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಯಿತು. ಇದಾದ ಬಳಿಕ ಶಿವಮೂರ್ತಿ ಯುವಕನ ನೆನಪಿನಲ್ಲಿ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ವೃತ್ತಕ್ಕೆ ಶಿವಮೂರ್ತಿ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ಪ್ರತಿ ವರ್ಷ ಗಣಪತಿ ಹಬ್ಬದ ಸಂದರ್ಭದಲ್ಲಿ ಈ ಸರ್ಕಲ್ ವೃತ್ತದಲ್ಲಿ ಶಿವಮೂರ್ತಿ ಪೋಟೋ ಇಟ್ಟು ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ