ಫೋಕ್ಸೋ ಕೇಸ್‌ನಲ್ಲಿ ಹೈಕೋರ್ಟ್ನಿಂದ ಮಂಜೂರಾಗಿದ್ದ ಜಾಮೀನು
14 ತಿಂಗಳ ಬಳಿಕ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಶ್ರೀಗಳು
ಜೈಲಿನ ಬಳಿ ಹಾರ ಹಾಕಿ ಸ್ವಾಗತಿಸಿದ ಮುರುಘಾ ಸ್ವಾಮೀಜಿ ಭಕ್ತರು
ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಜೈಲು ಸೇರಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು 14 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಫೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ನಿನ್ನೆಯೇ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಮಂಜೂರಿನ ಪ್ರಕ್ರಿಯೆಗಳು ಆರಂಭವಾಗಿತ್ತು. ಆದರೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಶಿವಮೂರ್ತಿ ಶರಣರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಚಿತ್ರದುರ್ಗ ಜೈಲಿನಲ್ಲಿ ಮುರುಘಾ ಶ್ರೀಗಳು ಜಾಮೀನಿನ ಪ್ರಕ್ರಿಯೆ ಮುಗಿಸಿದ್ದು ಇದೀಗ ಜೈಲಿನಿಂದ ಹೊರಗಡೆ ಬಂದಿದ್ದಾರೆ. ಜೈಲಿನ ಬಳಿ ಬಸವಪ್ರಭು ಸ್ವಾಮೀಜಿ ಮುರುಘಾ ಶ್ರೀಗಳನ್ನು ಸ್ವಾಗತಿಸಿದ್ದಾರೆ. ಜೈಲಿನ ಬಳಿ ಜಮಾಯಿಸಿದ್ದ ಅವರ ಭಕ್ತರು ಶ್ರೀಗಳಿಗೆ ಹಾರ ಹಾಕಿ ಸ್ವಾಗತಿಸಿದ್ದಾರೆ.
ಮುರುಘಾ ಶ್ರೀ ಪ್ರಕರಣದ ಹಾದಿ
ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ
2022 ರ ಆಗಸ್ಟ್ 26ರಂದು ಶ್ರೀಗಳ ವಿರುದ್ಧ ದೂರು ದಾಖಲು
2022 ರ ಆಗಸ್ಟ್ 28 ರಂದು ಬಾಲಕಿಯರ ಮೆಡಿಕಲ್ ಟೆಸ್ಟ್
2022ರ ಸೆಪ್ಟೆಂಬರ್ 1, ಮುರುಘಾ ಶರಣರನ್ನ ಬಂಧಿಸಿದ್ದ ಪೊಲೀಸರು
ಸದ್ಯ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಮುರುಘಾಶ್ರೀ
ಕಳೆದ 14 ತಿಂಗಳಿನಿಂದ ಚಿತ್ರದುರ್ಗ ಜೈಲಿನಲ್ಲಿದ್ದ ಶ್ರೀಗಳು
2022ರ ಸೆಪ್ಟೆಂಬರ್ 1ರಿಂದ ಜೈಲಿನಲ್ಲಿರುವ ಮುರುಘಾಶ್ರೀ
2022ರ ಅಕ್ಟೋಬರ್ 25ರಂದು ಶ್ರೀಗಳ ವಿರುದ್ಧ 2ನೇ ಕೇಸ್
ಒಟ್ಟು ನಾಲ್ವರು ವಿದ್ಯಾರ್ಥಿನಿಯರಿಂದ ಶ್ರೀಗಳ ವಿರುದ್ಧ ಕೇಸ್
ನಾಲ್ಕು ಮಂದಿ ಬಾಲಕಿಯರಿಂದ 2 ಪ್ರತ್ಯೇಕ ದೂರು ದಾಖಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ