newsfirstkannada.com

ರೈತರ ಬಗ್ಗೆ ಹಗುರವಾಗಿ ಮಾತಾಡಿದ್ರಾ ಸಚಿವ ಶಿವಾನಂದ್ ಪಾಟೀಲ್​​..? ಅಸಲಿಗೆ ಆಗಿದ್ದೇನು..?

Share :

05-09-2023

    ರೈತರ ಬಗ್ಗೆ ಹಗುರವಾಗಿ ಮಾತಾಡಿದ ಸಚಿವ ಶಿವಾನಂದ ಪಾಟೀಲ್

    ನಗರದ ಗುರುಭವನದ ಮುಂದೆ ಸಚಿವರಿಗೆ ಘೇರಾವ್ ಹಾಕಿದ ರೈತರು!

    5 ಲಕ್ಷದ ಆಸೆಗೆ ಯಾರಾದರೂ ಪ್ರಾಣ ಕಳೆದುಕೊಳ್ತಾರಾ ಎಂದು ಪ್ರಶ್ನೆ

ಹಾವೇರಿ: ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ರೈತರು ಫುಲ್​ ಗರಂ ಆಗಿದ್ದಾರೆ. ಹೀಗಾಗಿ ಹಾವೇರಿ ನಗರದ ಗುರುಭವನದ ಮುಂದೆ ರೈತರು ಸಚಿವರಿಗೆ ಘೇರಾವ್​​ ಹಾಕಿದ್ದಾರೆ.

ಈ ಹಿಂದೆ ಮಾತನಾಡಿದ್ದ ಸಚಿವ ಶಿವಾನಂದ್​ ಪಾಟೀಲ್​​, ರೈತರ ಆತ್ಮಹತ್ಯೆ ಪ್ರಕರಣದ ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಒಬ್ಬರು ಕುಡಿದು ಸತ್ತಿರುತ್ತಾರೆ. ಹಾರ್ಟ್ ಅಟ್ಯಾಕ್ ಆಗಿ ಸತ್ತವರೂ ಇದ್ದಾರೆ. 2020ರಲ್ಲಿ 500ಕ್ಕೂ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. 2021ರಲ್ಲಿ 600ಕ್ಕೂ ಹೆಚ್ಚು ಸೂಸೈಡ್ ಆಗಿವೆ. 2022 ರಿಂದ 2023ರ ತನಕ 412 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 64 ಜನ ರೈತರ ಆತ್ಮಹತ್ಯೆ ಆಗಿದೆ. ಆದರೆ ಈ ಕುರಿತು ಎಫ್​​ಐಆರ್​ ಪರಿಗಣನೆಗೆ ತೆಗೆದುಕೊಂಡರೆ ಅದು ನಿಮ್ಮ ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದರು.

ಹೀಗೆ ಉಡಾಫೆ ಹೇಳಿಕೆ ನೀಡಿದ್ದ ಸಚಿವರ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಅದಕ್ಕೆ ಅವರದ್ದೇ ಆದ ಕಾರಣಗಳು ಇವೆ​. ಹೀಗಾಗಿ ಸರ್ಕಾರ ಸಹಾಯ ನೀಡಿದರೆ ರೈತರ ಆತ್ಮಹತ್ಯೆ ಕಡಿಮೆಯಾಗುತ್ತೆ. 5 ಲಕ್ಷದ ಆಸೆಗೆ ಯಾರಾದರೂ ಪ್ರಾಣ ಕಳೆದುಕೊಳ್ತಾರಾ? ಈ ರೀತಿ ಹೇಳಿಕೆ ಸರಿಯಲ್ಲ. ನೀವು ರೈತರಿಗೆ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಇದಕ್ಕೆ ನಾನು ರೈತರ ಬಗ್ಗೆ ಹಗುರವಾಗಿ ಮಾತಾಡಿಲ್ಲ. ಇದು ಸುಳ್ಳು. ನಾನು ಕ್ಷಮೆ ಕೇಳಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಕಾರನ್ನು ಹತ್ತಿ ಹೊರಟು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತರ ಬಗ್ಗೆ ಹಗುರವಾಗಿ ಮಾತಾಡಿದ್ರಾ ಸಚಿವ ಶಿವಾನಂದ್ ಪಾಟೀಲ್​​..? ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/09/sachiva.jpg

Load More