newsfirstkannada.com

BBMP: ಪಬ್ಲಿಕ್‌ ಪ್ಲಾಜಾ ನಿರ್ಮಿಸಲು ದುಂದು ವೆಚ್ಚ ಮಾಡ್ತಾ ಇದೆಯಾ?

Share :

13-06-2023

    ಪಬ್ಲಿಕ್‌ ಪ್ಲಾಜಾ ನಿರ್ಮಾಣಕ್ಕೆ BBMP ಚಿಂತನೆ

    ನಗರದ ಸೌಂದರ್ಯ ಹೆಚ್ಚಿಸಲು ಮುಂದಾದ BBMP

    ನಾಗರಿಕರಿಗೆ ಹಲವು ಸೌಲಭ್ಯ ಕಲ್ಪಿಸಲು BBMP ಪ್ಲ್ಯಾನ್‌

ಬೆಂಗಳೂರು: ಹೈಟೆಕ್​ ಆಲೋಚನೆಗಳು ಓಕೇನೆ. ನಗರದ ಅಂದ ಹೆಚ್ಚಾಗಬೇಕು. ಜನರಿಗೆ ಸಹಾಯ ಆಗಬೇಕು. ಎಲ್ಲವೂ ಸರಿ. ಆದ್ರೆ ಹೈಟೆಕ್‌ ಹೆಸರಲ್ಲಿ ದುಂದುವೆಚ್ಚ ಆಗಬಾರದು. ಆದ್ರೆ ಬಿಬಿಎಂಪಿ ವಿರುದ್ಧ ಸದ್ಯ ದುಂದು ವೆಚ್ಚಕ್ಕೆ ಕೈ ಹಾಕ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಆರೋಪ ಕೇಳಿ ಬಂದಿರೋದು ಪಾಲಿಕೆ ಶಿವಾನಂದ ಫ್ಲೈ ಓವರ್ ಕೆಳಭಾಗದಲ್ಲಿ ಪಬ್ಲಿಕ್‌ ಪ್ಲಾಜಾ ನಿರ್ಮಾಣಕ್ಕೆ ಮುಂದಾಗಿರೋ ವಿಚಾರವಾಗಿ.

ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿರೋ ಬಿಬಿಎಂಪಿ, ಮೇಲ್ಸೇತುವೆ ಕೆಳಗೆ ನಾಗರಿಕರಿಗೆ ಹಲವು ಸೌಲಭ್ಯ ಕಲ್ಪಿಸಲು ಪ್ಲ್ಯಾನ್‌ ಮಾಡ್ತಿದೆ. ಫ್ಲೈ ಓವರ್ ಕೆಳಭಾಗಲ್ಲಿ ಹೆಚ್ಚಿನ ಜಾಗವಿದೆ. ಇದು ಜನರಿಗೆ ಉಪಯೋಗವಾಗಲಿ ಅನ್ನೋ ಪ್ಲಾನ್ ಪಾಲಿಕೆಯದ್ದು. ಆದರೆ ಇದು ವೆಸ್ಟ್ ಅಂತಿದ್ದಾರೆ ಜನರು. ಈಗಾಗಲೇ ಶಿವಾನಂದ ಸರ್ಕಲ್ ಬಳಿಯ ಫ್ಲೈ ಓವರ್ ಕೆಳಗೆ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿರುವ ಬಹುತೇಕ ಮೇಲ್ಸೇತುವೆ ಕೆಳಗೆ ಹೈಟೆಕ್ ಸೌಲಭ್ಯ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ.‌‌ ಜೊತೆಗೆ ಸುರಕ್ಷತೆಗಾಗಿ ಗ್ರಿಲ್‌ ಅಳವಡಿಸಲಾಗುತ್ತದೆ. ರಾಜ್ಯ ಸರ್ಕಾರದ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಯ ಯೋಜನಾ ವಿಭಾಗದ ವತಿಯಿಂದ ಮೇಲ್ಸೇತುವೆ ಸೇರಿದಂತೆ ನಾಲ್ಕು ಜಂಕ್ಷನ್‌ಗಳಲ್ಲಿ ₹10.45 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.

ಈ ಪಬ್ಲಿಕ್ ಪ್ಲಾಜ್​ನಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನ ಹಾಗೂ ಕುಡಿಯುವ ನೀರಿನ‌ ವ್ಯವಸ್ಥೆ. ಜೊತೆಗೆ ಮೊಬೈಲ್‌ ಚಾರ್ಚಿಂಗ್‌, ಓದಲು ಸ್ಥಳಾವಕಾಶ ಕಲ್ಪಿಸಲಾಗುತ್ತೆ. ಮಕ್ಕಳಿಗೆ ಆಟವಾಡಲು ವ್ಯವಸ್ಥೆ, ಹಾಗೆಯೇ ಅಲಂಕಾರಿಕ ಗಿಡ ನೆಟ್ಟು ಪೋಷಣೆ ಮಾಡಲಾಗುತ್ತೆ. ಹೈಟೆಕ್‌ ಶೌಚಾಲಯ ಸೌಲಭ್ಯ, ಮತ್ತು ಆಟೊ ರಿಕ್ಷಾ ಪಿಕ್‌ಅಪ್‌ ಝೋನ್‌ ಜೊತೆಗೆ ಝೀಬ್ರಾ ಕ್ರಾಸಿಂಗ್‌, ಪಾದಚಾರಿ ಸಿಗ್ನಲ್ ಱಂಪ್​​ ಕೂಡ ಮಾಡಲಾಗುತ್ತೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಆದರೆ ಇದು ದುಂದು ವೆಚ್ಚ, ಜನರಿಗೆ ಯಾವುದೇ ಪ್ರಯೋಜನವಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ರೇಸ್‌ಕೋರ್ಸ್‌ ಜಂಕ್ಷನ್‌, ಆನಂದರಾವ್‌ ಸರ್ಕಲ್, ಬಿಎಚ್‌ಇಲ್‌ ವೃತ್ತ, ಮೈಸೂರು ರಸ್ತೆಯ ಜಂಕ್ಷನ್‌ಗಳನ್ನೂ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಯೂ ಸದ್ಯದಲ್ಲಿಯೇ ಆರಂಭವಾಗಲಿದೆಯಂತೆ. ಆದ್ರೆ, ನಗರದಲ್ಲಿ ನೂರಾರು ಸಮಸ್ಯೆ ಇದೆ. ಅವುಗಳನ್ನ ಬಿಬಿಎಂಪಿ ಮೊದಲು ಸರಿಪಡಿಸಲಿ. ಆ ಮೇಲೆ ಅನಾವಶ್ಯಕ ಕಾಮಗಾರಿಗೆ ಹಣ ವೆಚ್ಚ ಮಾಡಲಿ ಅಂತಿದ್ದಾರೆ ಸಾರ್ವಜನಿಕರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBMP: ಪಬ್ಲಿಕ್‌ ಪ್ಲಾಜಾ ನಿರ್ಮಿಸಲು ದುಂದು ವೆಚ್ಚ ಮಾಡ್ತಾ ಇದೆಯಾ?

https://newsfirstlive.com/wp-content/uploads/2023/06/bng.jpg

Load More