newsfirstkannada.com

ಹ್ಯಾಟ್ರಿಕ್​ ಹೀರೋಗೆ 61ನೇ ವರ್ಷದ ಸಂಭ್ರಮ.. 4 ವರ್ಷದ ಬಳಿಕ ಫ್ಯಾನ್ಸ್​ ಜೊತೆಗೆ ಹುಟ್ಟುಹಬ್ಬ ಸಂಭ್ರಮಿಸಿದ ಶಿವಣ್ಣ

Share :

12-07-2023

    ಹ್ಯಾಟ್ರಿಕ್​ ಹೀರೋ ಶಿವಣ್ಣಗೆ ಹುಟ್ಟುಹಬ್ಬದ ಸಂಭ್ರಮ

    61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕರುನಾಡ ಚಕ್ರವರ್ತಿ

    ಅಭಿಮಾನಿಗಳ ಜೊತೆ ಕೇಕ್​ ಕತ್ತರಿಸಿ ಬರ್ತ್​ಡೇ ಆಚರಿಸಿದ ಶಿವಣ್ಣ

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 61ನೇ ಹುಟ್ಟುಹಬ್ಬವನ್ನು ಕರುನಾಡ ಚಕ್ರವರ್ತಿ ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಬರ್ತ್​​ಡೇಗಾಗಿ ಅಭಿಮಾನಿಗಳು ಅವರ ಮನೆ ಮುಂದೆ ಸೇರಿದ್ದಾರೆ. ಶಿವಣ್ಣನಿಗಾಗಿ ಕೇಕ್​, ಹೂವಿನ ಹಾರ ತಂದು ಶುಭಾಶಯ ಕೋರುತ್ತಿದ್ದಾರೆ. ಅಂದಹಾಗೆಯೇ ಶಿವಣ್ಣ 4 ವರ್ಷಗಳ ಬಳಿಕ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಪವರ್​ ಸ್ಟಾರ್​ ಅಗಲಿದ ಬಳಿಕ ಶಿವಣ್ಣ ಹುಟ್ಟುಹಬ್ಬವನ್ನೇ ಆಚರಿಸಿಕೊಂಡಿಲ್ಲ. ಆದರೆ 4 ವರ್ಷಗಳ ಬಳಿಕ ಶಿವಣ್ಣ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ನಿನ್ನೆ ರಾತ್ರಿ ಶಿವಸೈನ್ಯವು  ಶಿವಣ್ಣನ ಜನ್ಮದಿನವನ್ನ ಸೆಲೆಬ್ರೇಟ್ ಮಾಡಿದೆ. ಹಾಗಾಗಿ ಇಂದು ಅಭಿಮಾನಿಗಳ ಜೊನತೆಗೆ ಇದ್ದು ಶಿವಣ್ಣ ಹುಟ್ಟುಹಬ್ಬವನ್ನ ಸಂಭ್ರಮಿಸಲಿದ್ದಾರೆ.

ನಟ ಶಿವರಾಜ್​ ಕುಮಾರ್​ ಇಂದು 10 ಗಂಟೆಗ ನಂತರ ಕಂಠೀರವ ಸ್ಟೂಡಿಯೋದಲ್ಲಿರುವ ಡಾ. ರಾಜ್​ ಕುಮಾರ್​ ಸಮಾಧಿಗೆ ಭೇಟಿ ಕೊಡಲಿದ್ದಾರೆ. 11 ಗಂಟೆಗೆ ‘ಗೋಸ್ಟ್’ ಸಿನಿಮಾದ ಫಸ್ಟ್ ಲುಕ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಟ ಶಿವರಾಜ್​ ಕುಮಾರ್​
ನಟ ಶಿವರಾಜ್​ ಕುಮಾರ್​

ನೆಚ್ಚಿನ ನಟನಿಗಾಗಿ ಮಾನ್ಯತ ಟೆಕ್ ಪಾರ್ಕ್ ಬಳಿ ಇರುವ ಶಿವಣ್ಣನ ಮನೆ ಹತ್ತಿರ  ಬ್ಯಾನರ್ ಗಳು ರಾರಾಜಿಸುತ್ತಿವೆ. ದೂರದೂರುಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇವಿಷ್ಟು ಮಾತ್ರವಲ್ಲದೆ ದೂರದ ಊರುಗಳಿಂದ ಬಂದ ಅಭಿಮಾನಿಗಳಿಗೆ ಬಿರಿಯಾನಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶಿವಣ್ಣ ಬರ್ತ್​ಡೇಗೆ ಚಿಕ್ಕಮಗಳೂರಿನ ಸೋಷಿಯಲ್​ ಮೀಡಿಯಾ ಸ್ಟಾರ್​ ಕಾಫಿ ನಾಡು ಚಂದು ಕೂಡ ಶಿವಣ್ಣನ ಬರ್ತ್​ಡೇಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಶಿವಣ್ಣ ಮತ್ತು ಗೀತಕ್ಕನಿಗಾಗಿ ಹೊಸ ಹಾಡು ಹಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹ್ಯಾಟ್ರಿಕ್​ ಹೀರೋಗೆ 61ನೇ ವರ್ಷದ ಸಂಭ್ರಮ.. 4 ವರ್ಷದ ಬಳಿಕ ಫ್ಯಾನ್ಸ್​ ಜೊತೆಗೆ ಹುಟ್ಟುಹಬ್ಬ ಸಂಭ್ರಮಿಸಿದ ಶಿವಣ್ಣ

https://newsfirstlive.com/wp-content/uploads/2023/07/Shiva-rajkumar.jpg

Load More