ಧನುಷ್, ಶಿವರಾಜ್‌ಕುಮಾರ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’
ಸಂಕ್ರಾಂತಿ ಹಬ್ಬದ 2ನೇ ವಾರ ತೆರೆಗೆ ಬರಲಿದೆ ಈ ಸಿನಿಮಾ
ಅರುಣ್ ಮಾದೇಶ್ವರನ್ ನಿರ್ದೇಶನದ 'ಕ್ಯಾಪ್ಟನ್ ಮಿಲ್ಲರ್'
ಧನುಷ್, ಶಿವರಾಜ್‌ಕುಮಾರ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರಬೇಕಿತ್ತು. ಇದೀಗ 2024ರ ಸಂಕ್ರಾಂತಿ ಹಬ್ಬದ ಪ್ರಯುಕ್ತ (ಜನವರಿ 2ನೇ ವಾರ) ತೆರೆಗೆ ಬರಲಿದೆ. ಆ ಸಮಯಕ್ಕೆ ಈಗಾಗಲೇ ದಕ್ಷಿಣ ಭಾರತದ ಹಲವು ಸಿನಿಮಾಗಳು ತೆರೆಗೆ ಬರಲು ರಿಲೀಸ್ ಡೇಟ್ ಘೋಷಣೆ ಮಾಡಿವೆ. ಅವುಗಳ ಸಾಲಿಗೆ ಕ್ಯಾಪ್ಟನ್ ಮಿಲ್ಲರ್ ಕೂಡ ಸೇರಿಕೊಂಡಿದೆ.
ಪ್ಯಾನ್ ಇಂಡಿಯಾ ಸಿನಿಮಾ
ಧನುಷ್ ಅವರ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ಅರುಣ್ ಮಾದೇಶ್ವರನ್ ನಿರ್ದೇಶನ ಮಾಡಿದ್ದು, ಇದು ಧನುಷ್ ಅವರ ವೃತ್ತಿಜೀವನದ ಅತ್ಯಂತ ಬಿಗ್ ಬಜೆಟ್ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಪ್ರೇಕ್ಷಕರ ಮನಸೂರೆಗೊಂಡಿದೆ. ಈ ಪ್ಯಾನ್ ಇಂಡಿಯಾ ಚಲನಚಿತ್ರವು 2024ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
#CaptainMiller POSTPONED to Pongal 2024.
To clash with #Ayalaan, #GunturKaaram, etc pic.twitter.com/gz4L1Tn2Hu
— Manobala Vijayabalan (@ManobalaV) November 8, 2023
ಇದನ್ನು ಓದಿ: BIGG BOSS: ಈ ಬಾರಿ 7 ಮಂದಿ ನಾಮಿನೇಟ್; ಸೇಫ್ ಆಗೋ ಸ್ಪರ್ಧಿಗಳು ಯಾರ‍್ಯಾರು?
1930-40ರ ಬ್ಯಾಕ್‌ಡ್ರಾಪ್‌ನ ಸಿನಿಮಾ
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು 1930-40ರ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರೀಕರಿಸಲಾಗಿದೆ. ಜೈಲರ್ ಬಳಿಕ ಡಾ ಶಿವರಾಜ್‌ಕುಮಾರ್ ನಟಿಸಿರುವ ಎರಡನೇ ತಮಿಳು ಸಿನಿಮಾ ಇದಾಗಿದೆ. ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್ ಮುಂತಾದವರು ನಟಿಸಿದ್ದಾರೆ. ಟಿ ಜಿ ತ್ಯಾಗರಾಜನ್, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಜಿ ಸರವಣನ್ ಮತ್ತು ಸಾಯಿ ಸಿದ್ಧಾರ್ಥ್ ಸಹ ಹಣ ಹಾಕಿದ್ದಾರೆ. ಹಾಡುಗಳಿಗೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದು, ಸಿದ್ಧಾರ್ಥ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ