newsfirstkannada.com

ನಿಖಿಲ್​ ಕುಮಾರಸ್ವಾಮಿಗಾಗಿ 3ನೇ ಮಹಡಿವರೆಗೆ ಮೆಟ್ಟಿಲು ಹತ್ತಿಕೊಂಡೇ ಹೋದ ಶಿವಣ್ಣ ದಂಪತಿ.. ಏನ್ ಕಾರಣ?

Share :

16-09-2023

    ದೊಡ್ಡಗೌಡರ ಕುಟುಂಬ-ಅಣ್ಣವ್ರ ಕುಟುಂಬದ ಮಧ್ಯೆ ಬಾಂಧವ್ಯ

    ಶಿವರಾಜ್ ಕುಮಾರ್, ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದೇನು?

    ಅಮೆರಿಕ ಟ್ರಿಪ್ ಮುಗಿಸಿ ನಟ ನಿಖಿಲ್​ರನ್ನ ಭೇಟಿ ಮಾಡಿದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕ ಪ್ರವಾಸದಿಂದ ಬಂದ ನಂತರ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟ ನಿಖಿಲ್ ಅವರು ತಮ್ಮ ಹೊಸ ಸಿನಿಮಾ ಶೂಟಿಂಗ್​ನಲ್ಲಿದ್ದರು. ಇದಕ್ಕಾಗಿ ಅದ್ಧೂರಿ ಸೆಟ್​ಗಳನ್ನು ಕೂಡ ಹಾಕಿದ್ದಾರೆ. ಇಲ್ಲಿಗೆ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಭೇಟಿ ಕೊಟ್ಟಿದ್ದಾರೆ.

ತುಂಬಾ ದಿನಗಳ ನಂತರ ಶಿವಣ್ಣ ಮತ್ತು ನಿಖಿಲ್ ಅವರು ಮೀಟ್ ಆಗಿದ್ದು ಒಂದಿಷ್ಟು ಸಮಯ ಒಟ್ಟಿಗೆ ಕಳೆದರು. ಸಿನಿಮಾಗಳ ಬಗ್ಗೆ ಕೆಲವೊಂದಿಷ್ಟು ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡಿದರು. ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಬಗ್ಗೆ ಶಿವಣ್ಣ ಮಾಹಿತಿ ಪಡೆದುಕೊಂಡರು.

ನಟ ನಿಖಿಲ್​ಗೆ ಥ್ಯಾಂಕ್ಸ್ ಕೊಟ್ಟ ಶಿವರಾಜ್ ಕುಮಾರ್

ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ನಿಖಲ್​ ಹಳೇಯ ಬಿಲ್ಡಿಂಗ್​ನ ಮೇಲಿದ್ದರು. ಈ ಕಟ್ಟಡಕ್ಕೆ ಲಿಫ್ಟ್​ ಇರಲಿಲ್ಲ. ಇದರಿಂದ ಶಿವಣ್ಣ ದಂಪತಿ ಮೆಟ್ಟಿಲು ಹತ್ತಿಕೊಂಡೇ ಮೇಲೆ ಹೋಗಿ ಭೇಟಿ ಮಾಡಿದ್ದಾರೆ. ಬಳಿಕ ಅವರ ಹೊಸ ಸಿನಿಮಾಗೆ ಶುಭಕೋರಿದರು. ಮೂರನೇ ಮಹಡಿಯವರೆಗೆ ತಮ್ಮನ್ನು ನೋಡಲು ಬಂದ ಶಿವಣ್ಣ ದಂಪತಿಯನ್ನು ನಿಖಿಲ್​ ಕಾರುವರೆಗೆ ಹೋಗಿ ಬಿಟ್ಟು ಬಂದರು. ಅಣ್ಣಾವ್ರ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬ ಹಿಂದಿನಿಂದಲೂ ಅನೋನ್ಯವಾಗಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರಿಗೆ ನಿಖಿಲ್ ಅವರ ಕೆಲಸದ ಮೇಲಿನ ಡೆಡಿಕೇಷನ್ ಬಗ್ಗೆ ತುಂಬಾ ಪ್ರೀತಿ ಇತ್ತು. ಈಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಎರಡೂ ಕುಟುಂಬದ ಬಾಂಧವ್ಯವನ್ನ ಮತ್ತೆ ನೆನಪು ಮಾಡಿವೆ.

ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಮೂವಿಯಲ್ಲಿ ನಿಖಿಲ್ ಮೇನ್ ರೋಲ್​ನಲ್ಲಿ ಅಭಿನಯ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಇನ್ನು ಟೈಟಲ್ ಫಿಕ್ಸ್ ಮಾಡಿಲ್ಲ. ಚಿತ್ರವನ್ನು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ಡ್​ ಇತ್ತೀಚಿಗಷ್ಟೇ ಶುರುವಾಗಿದೆ. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಇದೇ ಮೊದಲ ಬಾರಿಗೆ ಲೈಕಾ ಸಂಸ್ಥೆ ಫಸ್ಟ್​ ಮೂವಿಯನ್ನು ನಿರ್ಮಾಣ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಖಿಲ್​ ಕುಮಾರಸ್ವಾಮಿಗಾಗಿ 3ನೇ ಮಹಡಿವರೆಗೆ ಮೆಟ್ಟಿಲು ಹತ್ತಿಕೊಂಡೇ ಹೋದ ಶಿವಣ್ಣ ದಂಪತಿ.. ಏನ್ ಕಾರಣ?

https://newsfirstlive.com/wp-content/uploads/2023/09/SHIVANNA_NIKHIL.jpg

Load More