newsfirstkannada.com

ಶಿವರಾಜ್​ ಕುಮಾರ್, ಪ್ರೇಮಾ ‘ಓಂ’ ಸಿನಿಮಾದ ರೀಕ್ರಿಯೇಟ್‌ ಸೀನ್‌ಗೆ ಫ್ಯಾನ್ಸ್​ ಶಾಕ್; ವಿಡಿಯೋ ಇಲ್ಲಿದೆ!

Share :

Published September 4, 2024 at 6:28pm

    ಸ್ಟೇಜ್ ಮೇಲೆ ಶಿವಣ್ಣ, ಪ್ರೇಮಾ ಅವರ ಅಭಿನಯ ಹೇಗಿತ್ತು..?

    ಅದೇ ವಾಯ್ಸ್​, ಅದೇ ಪ್ರೀತಿ, ದ್ವೇಷ ಇಬ್ಬರ ನಟನೆ ಸೂಪರ್

    ಓಂ ಸಿನಿಮಾದ ಆ ಒಂದು ಸೀನ್​ಗೆ ಈಗಲೂ ಭಾರೀ ಬೇಡಿಕೆ?

ಉಪೇಂದ್ರ ನಿರ್ದೇಶನ ಮಾಡಿದ ಸಿನಿಮಾಗಳೆಂದರೆ ಅದರ ತೂಕನೇ ಬೇರೆ ಇರುತ್ತೆ. ಅದರಲ್ಲಿ ರಿಯಲ್ ಸ್ಟಾರ್ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್​ಗೆ ಅಭಿಮಾನಿಗಳ ಬಳಗ ಕೂಡ ಭಾರೀ ಮಟ್ಟದಲ್ಲಿ ಇದೆ. ಏಕೆಂದರೆ 29 ವರ್ಷಗಳ ಹಿಂದೆ ತೆರೆಗೆ ಅಪ್ಪಳಿಸಿದ್ದ ಓಂ ಸಿನಿಮಾ ಈಗಲೂ ಥಿಯೇಟರ್​​ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿನ ಪ್ರತಿಯೊಂದು ಸೀನ್​ಗಳು ಕೂಡ ಕನ್ನಡಿಗರ ಕಣ್ಣಲ್ಲಿ ಕಟ್ಟಿದಂತೆ ಇವೆ. ಸದ್ಯ ಓಂ ಸಿನಿಮಾದ ಅದೊಂದು ಸೀನ್ ಅನ್ನು ಶಿವರಾಜ್ ಕುಮಾರ್ ಹಾಗೂ ನಟಿ ಪ್ರೇಮಾ ರಿಯಲ್ ಆಗಿ ಮಾಡಿದ್ದು ನೋಡಿದವರೆಲ್ಲಾ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ಓಂ ಸಿನಿಮಾದಲ್ಲಿ ಶಿವಣ್ಣ ಕ್ಯಾರೆಕ್ಟರ್​ ಹೇಗಿದೆಯೋ ಹಾಗೇ ಪ್ರೇಮಾ ಅವರು ಕಾಲೇಜು ವಿದ್ಯಾರ್ಥಿನಿಯಾಗಿ ಮಾಡಿರೋ ಅಭಿನಯವೂ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಸಿನಿಮಾದಲ್ಲಿ ರೌಡಿಸಂ ಮುಖ್ಯವಾಗಿ ಕಾಣಿಸಿದರೂ ಇದರ ಜೊತೆಗೆ ಕಾಲೇಜು, ಪ್ರೀತಿ, ಫ್ಯಾಮಿಲಿ, ಹಾಡುಗಳು ಎಲ್ಲವೂ ನೋಡುವ ಪ್ರೇಕ್ಷಕನ ಬಡಿದೆಬ್ಬಿಸುತ್ತವೆ. ಸಿನಿಮಾ ಕತೆಗೆ ಈಗಲೂ ಕ್ರೇಜ್​ ಇದೆ. ಈ ಮೂವಿಯನ್ನು ಫ್ಯಾನ್ಸ್​ ಸಂಭ್ರಮಿಸಲು ಅನೇಕ ಕಾರಣಗಳಿವೆ. ಇಡೀ ಭಾರತೀಯ ಚಿತ್ರರಂಗವನ್ನು ಅಚ್ಚರಿ ಮೂಡಿಸಿದ ಸಿನಿಮಾವಿದು. ಈ ಸಿನಿಮಾದಲ್ಲಿನ ಒಂದು ಸೀನ್​ ಪ್ರೇಮಾ ಅವರ ಬರ್ತ್​ಡೇಗೆ ಶಿವರಾಜ್ ಕುಮಾರ್ ವಿಶ್ ಮಾಡಲು ಮನೆಗೆ ಬಂದಾಗ ನಡೆಯುವ ಘಟನೆಯನ್ನು ಸ್ಟೇಜ್ ಮೇಲೆ ಶಿವರಾಜ್ ಕುಮಾರ್, ಪ್ರೇಮಾ ರೀಕ್ರಿಯೇಟ್ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ; ಅಧ್ಯಯನಕ್ಕೆ ಸಮಿತಿ ರಚಿಸಿ; ಸಿಎಂಗೆ ನಟ ನಟಿಯರ ಪತ್ರ!

View this post on Instagram

A post shared by kartik bgm 🧿 (@kartik_bgm_)

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಅವರು ತಮ್ಮ ಯಂಗ್ ಏಜ್​​ ಅಲ್ಲಿ ಮಾಡಿದ ಆ ಸೀನ್​ ಅನ್ನು ಈಗಲೂ ಸೇಮ್​ ಟು ಸೇಮ್ ಮಾಡಿದ್ದಾರೆ. ಕನ್ನಡದ ರಿಯಾಲಿಟಿ ಶೋವೊಂದರಲ್ಲಿ ಶಿವಣ್ಣ ಹಾಗೂ ಪ್ರೇಮಾ ಒಂದೇ ವೇದಿಕೆ ಮೇಲೆ ಮಾಡಿರುವುದು ಪ್ರೇಕ್ಷಕರನ್ನು ರಂಜಿಸಿದೆ. ಸೀನ್​ನಲ್ಲಿನ ಅದೇ ವಾಯ್ಸ್​, ಅದೇ ಪ್ರೀತಿ, ಅದೇ ಡೈಲಾಗ್ಸ್​, ಅದೇ ನಟನೆಯನ್ನು ನೋಡಿದ ಜನರು ಚಪ್ಪಳೆ ತಟ್ಟಿ, ಶಿಳ್ಳೆ ಹೊಡೆದು ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಈ ವಿಡಿಯೋ ಶೇರ್ ಆಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಶಿವಣ್ಣ ಫ್ಯಾನ್ಸ್​ ಹಾಗೂ ನೆಟ್ಟಿಗರು ಫುಲ್ ಒರಿಜನ್​ ಸೀನ್ ಮತ್ತೊಮ್ಮೆ ನೋಡಿದ್ದು ಅದೃಷ್ಟ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವರಾಜ್​ ಕುಮಾರ್, ಪ್ರೇಮಾ ‘ಓಂ’ ಸಿನಿಮಾದ ರೀಕ್ರಿಯೇಟ್‌ ಸೀನ್‌ಗೆ ಫ್ಯಾನ್ಸ್​ ಶಾಕ್; ವಿಡಿಯೋ ಇಲ್ಲಿದೆ!

https://newsfirstlive.com/wp-content/uploads/2024/09/SHIVANNA-1.jpg

Load More