newsfirstkannada.com

ಇನ್​​ಸ್ಟಾ ಬಯೋದಲ್ಲಿದ್ದ ಪತ್ನಿ ಸಾನಿಯಾ ಮಿರ್ಜಾರ ಹೆಸರನ್ನು ತೆಗೆದ ಶೋಯೆಬ್​ ಮಲ್ಲಿಕ್​! ಏನಿದು ಸಮಾಚಾರ?

Share :

03-08-2023

    ಈ ಕ್ರೀಡಾ ದಂಪತಿಗಳ ಮೇಲೆ ಹುಟ್ಟಿದೆ ಅಭಿಮಾನಿಗಳಿಗೆ ಅನುಮಾನ

    ಶೋಯೆಬ್​ ಮಲ್ಲಿಕ್​ ಮತ್ತು ಭಾರತೀಯ ಮಾಜಿ ಟೆನ್ನಿಸ್​ ತಾರೆ ನಡುವೆ ಏನಾಗ್ತಿದೆ?

    ಪಾಕ್​ ಮಾಜಿ ಕ್ರಿಕೆಟಿಗನ ಈ ನಡೆ ಕಂಡು ಕ್ರಿಕೆಟ್​ ಫ್ಯಾನ್ಸ್​ ಶಾಕ್​

ಕೆಲವು ತಿಂಗಳಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​ ಮತ್ತು ಭಾರತೀಯ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ವಿಚ್ಛೇದನಗೊಂಡಿದ್ದಾರೆ ಎಂಬ ಸುದ್ದಿ ವೈರಲ್​ ಆಗುತ್ತಲೇ ಇದೆ. ಆದರೆ ಈ ವಿಚಾರದ ಬಗ್ಗೆ ಇಬ್ಬರು ಪ್ರತಿಕ್ರಿಯಿಸಿರಲಿಲ್ಲ. ಆದರೀಗ ಮತ್ತೊಮ್ಮೆ ಇದೇ ಸಂಗತಿ ಮುನ್ನೆಲೆಗೆ ಬಂದಿದೆ. ಅದೇನೆಂದರೆ ಶೋಯೆಬ್​ ಮಲ್ಲಿಕ್ ತಮ್ಮ ಇನ್​ಸ್ಟಾ ಬಯೋದಲ್ಲಿ ಹಾಕಿಕೊಂಡಿದ್ದ ಸಾನಿಯಾ ಮಿರ್ಜಾ ಅವರ ಹೆಸರನ್ನು ತೆಗೆದಿದ್ದಾರೆ.

ಶೋಯೆಬ್​ ಮಲ್ಲಿಕ್​​ ತಮ್ಮ ಬಯೋದಲ್ಲಿ ‘ನಾನು ಸೂಪರ್​ವುಮೆನ್​ ಸಾನಿಯಾ ಮಿರ್ಜಾಳ ಗಂಡ’ ಎಂದು ಬರೆದುಕೊಂಡಿದ್ದರು. ಮಾತ್ರವಲ್ಲದೆ ಟ್ಯಾಗ್​ ಕೂಡ ಮಾಡಿದ್ದರು. ಆದರೀಗ ತಮ್ಮ ಬಯೋವನ್ನು ಎಡಿಟ್​ ಮಾಡಿದ್ದಾರೆ. ಸಾನಿಯಾ ಹೆಸರನ್ನು ತೆಗೆದು ಹಾಕಿದ್ದಾರೆ.

ಅಂದಹಾಗೆಯೇ ಈ ಸಂಗತಿ ಕ್ರಿಕೆಟ್​ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಶೋಯೆಬ್​ ಮಲ್ಲಿಕ್ ಮತ್ತು ಸಾನಿಯಾ ಮಿರ್ಜಾ ಕುರಿತು ಚರ್ಚೆ ನಡೆಯುತ್ತಿದೆ. ಅದರಲ್ಲೂ ಇವರಿಬ್ಬರು ವಿಚ್ಛೇದನಗೊಂಡಿದ್ದಾರೆ ಎಂಬ ಅನುಮಾನದ ಕುರಿತು ಕ್ರಿಕೆಟ್​ ಪ್ರೇಮಿಗಳು ಮಾತನಾಡುತ್ತಿದ್ದಾರೆ. ಆದರೆ ಇದು ನಿಜವೇ? ಎಂಬ ಸಂಗತಿ ಇಬ್ಬರು ಕ್ರೀಡಾ ದಂಪತಿಗಳ ಬಾಯಾರೆ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​​ಸ್ಟಾ ಬಯೋದಲ್ಲಿದ್ದ ಪತ್ನಿ ಸಾನಿಯಾ ಮಿರ್ಜಾರ ಹೆಸರನ್ನು ತೆಗೆದ ಶೋಯೆಬ್​ ಮಲ್ಲಿಕ್​! ಏನಿದು ಸಮಾಚಾರ?

https://newsfirstlive.com/wp-content/uploads/2023/08/sania-mirza-and-Shoaib-malik.jpg

Load More