newsfirstkannada.com

‘ಸ್ಮೃತಿ ಇರಾನಿಗೆ ರಾಹುಲ್ ‘ಫ್ಲೈಯಿಂಗ್ ಕಿಸ್’ ಕೊಟ್ಟಿದ್ದು ನೋವು ತಂದಿದೆ’- ಶೋಭಾ ಕರಂದ್ಲಾಜೆ ಆರೋಪ

Share :

09-08-2023

  ಸ್ಮೃತಿ ಇರಾನಿಗೆ ರಾಹುಲ್ ‘ಫ್ಲೈಯಿಂಗ್ ಕಿಸ್’ ಕೇಸ್​​​

  ಸಚಿವೆ ಶೋಭಾ ಕರಂದ್ಲಾಜೆಯಿಂದ ತೀವ್ರ ಆಕ್ಷೇಪ..!

  ರಾಹುಲ್​​ ಗಾಂಧಿ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ನವದೆಹಲಿ: ಸಂಸತ್​​ನಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಶೋಭಾ ಕರಂದ್ಲಾಜೆ, ರಾಹುಲ್​ ಗಾಂಧಿ ನಡೆ ಬಹಳ ನೋವು ತಂದಿದೆ. ಇಂತಹ ಅಸಭ್ಯಾ ವರ್ತನೆಯನ್ನು ಸಂಸತ್​​ ಹಿಂದೆಂದೂ ಕಂಡಿಲ್ಲ ಎಂದರು.

ರಾಹುಲ್ ಗಾಂಧಿ ಸಂಸತ್​​ಗೆ ಭಾಷಣ ಮಾಡಲು ಬಂದಿದ್ದರು. ಇವರ ಭಾಷಣದ ಬಳಿಕ ಸಚಿವೆ ಸ್ಮೃತಿ ಇರಾನಿ ಮಾತಾಡಬೇಕಿತ್ತು. ತಮ್ಮ ಭಾಷಣ ಮುಗಿಸಿ ಹೊರ ಹೋಗುವ ಮುನ್ನ ರಾಹುಲ್ ಗಾಂಧಿ ಸ್ಮೃತಿ ಇರಾನಿಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟರು ಎಂದರು.

ಇನ್ನು, ತನ್ನ ತಾಯಿ ಮುಂದೆಯೇ ರಾಹುಲ್​ ಗಾಂಧಿ ಹೀಗೆ ಮಾಡಿದ್ದಾರೆ. ಇದು ಯಾವ ಸಂಸ್ಕಾರ ಎಂದು ಗೊತ್ತಿಲ್ಲ. ನಾನು ಹಲವು ಕಾಂಗ್ರೆಸ್​ ನಾಯಕರನ್ನು ಕಂಡಿದ್ದೇನೆ. ಸಂಸತ್​​ನಲ್ಲಿ ಫ್ಲೈಯಿಂಗ್​​ ಕಿಸ್​ ಕೊಟ್ಟಿದ್ದು ಎಂದು ಕಂಡಿಲ್ಲ. ಈ ಬಗ್ಗೆ ಸ್ಪೀಕರ್​ಗೆ ದೂರು ನೀಡಿದ್ದೇವೆ. ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸ್ಮೃತಿ ಇರಾನಿಗೆ ರಾಹುಲ್ ‘ಫ್ಲೈಯಿಂಗ್ ಕಿಸ್’ ಕೊಟ್ಟಿದ್ದು ನೋವು ತಂದಿದೆ’- ಶೋಭಾ ಕರಂದ್ಲಾಜೆ ಆರೋಪ

https://newsfirstlive.com/wp-content/uploads/2023/08/Shobha-Karandlaje.jpg

Load More