ರೋಗಿಗಳಿಂದ ಪ್ಲೇಟ್ಲೆಟ್ಸ್ಗೆ ಹೆಚ್ಚಾಯ್ತು ಬೇಡಿಕೆ
ದಿನಕ್ಕೆ 150 ಯುನಿಟ್ನಷ್ಟು ಪ್ಲೇಟ್ಲೆಟ್ಸ್ ಅವಶ್ಯಕ
15- 20 ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕ
ಬೆಂಗಳೂರು: ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಡೆಂಘಿಯದ್ದೇ ದರ್ಬಾರ್. ನಾಲ್ಕು ವರ್ಷಗಳ ಹಿಂದಿನ ತನ್ನದೆ ದಾಖಲೆಯನ್ನ ಪುಡಿಗಟ್ಟಿರುವ ಡೆಂಘೀ ರಾಜ್ಯ ರಾಜಧಾನಿಯಲ್ಲಿ ಸವಾರಿ ಹೊರಟು ಬಿಟ್ಟಿದೆ. ಒಂದು ಕಡೆ ಡೆಂಘೀ ಆರ್ಭಟ ಶುರು ಮಾಡ್ತಿದ್ದಂಗೆ ಇತ್ತ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಡೆಂಘೀ ಓಟ ಸಿಲಿಕಾನ್ ಸಿಟಿಯ ಮಂದಿಯ ನೆಮ್ಮದಿಯನ್ನ ಕಸಿದುಕೊಂಡು ಬಿಟ್ಟಿದೆ. ಡೆಂಘಿಯಿಂದ ಇದೀಗ ಆಸ್ಪತ್ರೆಗೆ ದಾಖಲಾಗ್ತಿರುವವರ ಸಂಖ್ಯೆ ಏರಿಕೆಯಾಗ್ತಿದೆ. ಈ ಬೆನ್ನಲ್ಲೇ ಪ್ಲೇಟ್‌ಲೆಟ್ಸ್‌ಗಳಿಗೆ ಫುಲ್ ಡಿಮ್ಯಾಂಡ್ ಉಂಟಾಗಿದೆ.
ಬೆಂಗಳೂರಲ್ಲಿ ಡೆಂಘೀ ಪ್ರಕರಣ ಹೆಚ್ಚಾಗ್ತಿದ್ದಂಗೆ ಕೆಲವೆಡೆ ಪ್ಲೇಟ್ಸ್ ಗಳ ಕೊರತೆ ಉಂಟಾಗಿದ್ದು, ಪ್ಲೇಟ್‌ಲೆಟ್ಸ್‌ಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಉಂಟಾಗಿದೆ. ಇದೇ ಕಾರಣಕ್ಕೆ ಅಗತ್ಯ ಪ್ರಮಾಣದ ಪ್ಲೇಟ್‌ಲೆಟ್ಸ್ ಮತ್ತು ರಕ್ತ ಸಂಗ್ರಹಿಸಲು ನಗರದ ಎಲ್ಲಾ ಬ್ಲಡ್ ಬ್ಯಾಂಕ್ಗಳಿಂದ ರಕ್ತದಾನ ಶಿಬಿರಗಳ ಆಯೋಜನೆ ಮಾಡ್ಲಾಗಿದೆ.
ಪ್ಲೇಟ್ಲೆಟ್ಸ್ಗೆ ಡಿಮ್ಯಾಂಡ್!
ರಾಷ್ಟ್ರೋತ್ಥಾನ ಬ್ಲಡ್ ಸೆಂಟರ್ನಲ್ಲಿ ನಾಲ್ಕೈದು ತಿಂಗಳ ಹಿಂದೆ ದಿನಕ್ಕೆ 10-12ರಷ್ಟು ಱಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಬರ್ತಾ ಇತ್ತು. ಆದ್ರೆ ಇದೀಗ ದಿನಕ್ಕೆ 150 ಯುನಿಟ್ನಷ್ಟು ಱಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇದೆ. ಪ್ರತಿನಿತ್ಯ 15 ರಿಂದ 20 ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ಬೇಕಾಗುತ್ತೆ.
ಡಿಮ್ಯಾಂಡ್ ಹೆಚ್ಚಾಗಿದ್ಯಾಕೆ?
ಮನುಷ್ಯನ ರಕ್ತದಲ್ಲಿ ಮೂರು ಬಗೆಯ ಜೀವಕೋಶಗಳಿವೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್‌ಗಳು. ಯಾವುದಾದರೂ ವ್ಯಕ್ತಿಗೆ ಡೆಂಘೀ ಬಂದರೆ ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳು ಕಡಿಮೆ ಮಾಡುತ್ತದೆ. ಪರಿಣಾಮ ದೇಹದ ರೋಗ ನಿರೋಧಕ ಶಕ್ತಿ ನಿಧಾನವಾಗಿ ಕ್ಷೀಣಿಸಿ ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಡೆಂಘೀಯಿಂದ ಪಾರಾಗಬೇಕಾದ್ರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಇದೇ ಕಾರಣಕ್ಕೆ ಇದೀಗ ಡೆಂಘೀ ಪ್ರಕರಣ ಹೆಚ್ಚಾಗ್ತಿದ್ದಂಗೆ ಪ್ಲೇಟ್ಲೆಟ್ಸ್ಗೂ ಕೂಡ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ.
ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಡೆಂಘೀ ಪ್ರಕರಣ ಏರಿಕೆಯಾಗ್ತಿದ್ದು, ಈ ವರ್ಷ ನಗರದಲ್ಲಿ 4,979 ಪ್ರಕರಣಗಳು ದಾಖಲಾಗಿವೆ. ಡೆಂಘೀ ಮಣಿಸಲು ಜನರು ಕೂಡ ಕೆಲವೊಂದು ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ