newsfirstkannada.com

ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಅಪಾರ್ಟ್ಮೆಂಟ್​​ನಲ್ಲಿ ನಾಯಿ ಸಾಕಲು ಹೊಸ ರೂಲ್ಸ್​ ಜಾರಿ

Share :

Published November 5, 2023 at 6:16am

    10 ಸಾವಿರ ಠೇವಣಿ ಇಡಬೇಕು, ಶಿಫ್ಟ್ ಚಾರ್ಟ್‌​ ಪಾಲಿಸಬೇಕು

    ಠೇವಣಿ ಜೊತೆ ನಿಗದಿತ ಟೈಮ್​ನಲ್ಲಿ ಶ್ವಾನವನ್ನ ಆಚೆ ತರಬೇಕು!

    ನ.15ರೊಳಗೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ ₹100 ರೂ. ದಂಡ

ಬೆಂಗಳೂರು: ನಾನೇನು ಮಾಡ್ಲಿ ಸ್ವಾಮಿ ನನ್​ ಹುಡ್ಗಿ ನಾಯಿ ಪ್ರೇಮಿ, ಹೌದು​ ಸಿಲಿಕಾನ್​ ಸಿಟಿ ಮಂದಿಯೂ ಒಂಥರ ನಾಯಿ ಪ್ರೇಮಿಗಳೇ. ಮುದ್ದು ಮುದ್ದಾದ​ ಪಪ್ಪಿಗಳನ್ನು ಕಂಡರೆ ಎಲ್ಲಿಲ್ಲದಂತಹ ಪ್ರೀತಿ. ನಾಯಿಗಾಗಿ ಪ್ರಾಣವನ್ನೇ ಬಿಡ್ತಾರೆ. ಹೀಗೆ ಪ್ರಾಣಿ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಆದರೆ ಇನ್ಮುಂದೆ ಶ್ವಾನಗಳನ್ನು ಸಾಕಬೇಕು ಅಂದ್ರೆ ಪಾಲಿಸಬೇಕಂತೆ ಈ ಶಿಫ್ಟ್ ಚಾರ್ಟ್‌.

ಅಪಾರ್ಟ್ಮೆಂಟ್​​ನಲ್ಲಿ ಶ್ವಾನ ಸಾಕಲು ಹೊಸ ರೂಲ್ಸ್​ಗಳನ್ನು ಜಾರಿ ಮಾಡಲಾಗಿದೆ. ಇನ್ಮುಂದೆ ನಾಯಿಗಳನ್ನು ಸಾಕೋಕೆ 10 ಸಾವಿರ ಠೇವಣಿ ಇಡಬೇಕು. ಶಿಫ್ಟ್ ಚಾರ್ಟ್‌​ ಪಾಲಿಸಬೇಕು. ಠೇವಣಿ ಜೊತೆ ನಿಗದಿತ ಟೈಮ್​ನಲ್ಲಿ ಶ್ವಾನವನ್ನ ಆಚೆ ತರಬೇಕು. ಈ ಹಣ ಅಪಾರ್ಟ್ಮೆಂಟ್​ನಲ್ಲಿ ಶ್ವಾನ ಕಚ್ಚಿದವರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತೆ.

ಮತ್ತೆ ಶ್ವಾನದಿಂದ ಏನಾದರೂ ಹಾನಿ ಆದರೆ ಸ್ವಚ್ಛತೆಗಾಗಿ ಬಳಕೆ ಮಾಡಲಾಗುತ್ತೆ. ಬೆಳಗ್ಗೆ 6 ರಿಂದ 7, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ10 ರಿಂದ 11ರವರೆಗೆ ಮಾತ್ರ ತರಬೇಕು. ಈ ಟೈಮ್​ನಲ್ಲಿ ಮಾತ್ರ ಶ್ವಾನವನ್ನು ಮನೆಯಿಂದ ಆಚೆ ತರಲು ಅವಕಾಶ ನೀಡಲಾಗಿದೆ. ಶ್ವಾನವನ್ನು ಆಚೆ ತರುವ ಬಗ್ಗೆ ಅಸೋಸಿಯೇಷನ್ ಶಿಫ್ಟ್ ಚಾರ್ಟ್​ವೊಂದನ್ನು ರೆಡಿ ಮಾಡಿದೆ. ನವೆಂಬರ್​ 15ರೊಳಗೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಅಪಾರ್ಟ್ಮೆಂಟ್​​ನಲ್ಲಿ ನಾಯಿ ಸಾಕಲು ಹೊಸ ರೂಲ್ಸ್​ ಜಾರಿ

https://newsfirstlive.com/wp-content/uploads/2023/11/dog.jpg

Load More