newsfirstkannada.com

ರಾಯಲ್ ಎನ್‌ಫೀಲ್ಡ್‌ ಗಾಡಿಯಲ್ಲಿ ಬರುತ್ತಿದ್ದ ತೇಜಸ್‌ ಸಾವನ್ನಪ್ಪಿದ್ದು ಹೇಗೆ? ಆಘಾತಕಾರಿ ವಿಷಯ ಬಯಲು

Share :

Published June 26, 2024 at 4:31pm

Update June 26, 2024 at 4:32pm

    ಕಿರುತೆರೆ ನಟ ವರುಣ್​ ಆರಾಧ್ಯ ಆಪ್ತ ಸ್ನೇಹಿತ ತೇಜಸ್ ಸಾವಿಗೆ ಹೊಸ ಟ್ವಿಸ್ಟ್​

    ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ನಡೆದ ದುರ್ಘಟನೆ

    ಸ್ನೇಹಿತನ ಜೊತೆ ಬರುತ್ತಿದ್ದಾಗ ನಡೆದ ಭೀಕರ ಅಪಘಾತದಲ್ಲಿ ತೇಜಸ್ ಸಾವು

ದೊಡ್ಡಬಳ್ಳಾಪುರ: ಹೊಸ ಹೊಸ ರೀಲ್ಸ್​ಗಳ ಮೂಲಕ ನೆಟ್ಟಿಗರಿಗೆ ಚಿರಪರಿಚಿತ ಆಗಿರೋ ತೇಜಸ್ ಇನ್ನಿಲ್ಲ. ಈ ಸುದ್ದಿ ಕೇಳಿದ ಅದೇಷ್ಟೋ ಜನರಿಗೆ ಬರ ಸಿಡಿಲು ಬಡಿದಂತೆ ಆಗಿದೆ. ಹೌದು, ಕಿರುತೆರೆ ನಟ ವರುಣ್ ಆರಾಧ್ಯ ಆಪ್ತ ಸ್ನೇಹಿತ ತೇಜಸ್ (23) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ಇಂದು ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಬೈಕ್​ನಲ್ಲಿದ್ದ ಆಕಾಶ್ (19) ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅಪಘಾತ ನಡೆದಿದ್ದು ಹೇಗೆ?

ಮೃತ ತೇಜಸ್​ ಹಾಗೂ ಸ್ನೇಹಿತ ಆಕಾಶ್ ಜೊತೆಗೆ ರಾಯಲ್​ ಎನ್ಫೀಲ್ಡ್ ಬುಲೆಟ್​ನಲ್ಲಿ ಹೋಗುತ್ತಿದ್ದರು. ಖುದ್ದು ತೇಜಸ್ ಅವರೇ ಬುಲೆಟ್​ ಓಡಿಸುತ್ತಿದ್ದರಂತೆ. ತೇಜಸ್ ಹಿಂದಿನ ಸೀಟ್​ನಲ್ಲಿ ಆಕಾಶ್ ಕುಳಿತುಕೊಂಡಿದ್ದರು. ಹೀಗೆ ದೊಡ್ಡಬಳ್ಳಾಪುರದ ಕಡೆಯಿಂದ ಬೆಂಗಳೂರಿನ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಮಾವಳಿಪುರ ಕ್ರಾಸ್ ಹತ್ತಿರ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೇಜಸ್ ತಲೆ, ಮುಖಕ್ಕೆ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಆಕಾಶ್​ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಆ ಕೂಡಲೇ ಗಂಭೀರವಾಗಿ ಗಾಯಗೊಂಡ ಆಕಾಶ್​ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಯಲ್ ಎನ್‌ಫೀಲ್ಡ್‌ ಗಾಡಿಯಲ್ಲಿ ಬರುತ್ತಿದ್ದ ತೇಜಸ್‌ ಸಾವನ್ನಪ್ಪಿದ್ದು ಹೇಗೆ? ಆಘಾತಕಾರಿ ವಿಷಯ ಬಯಲು

https://newsfirstlive.com/wp-content/uploads/2024/06/tejas4.jpg

Load More