newsfirstkannada.com

ಟ್ವಿಟರ್ ‘ನೀಲಿ ಹಕ್ಕಿ’ಗೆ ಟಾಟಾ ಬೈ, ಬೈ.. ಕೋಟ್ಯಾಂತರ ಜನರಿಗೆ ಶಾಕ್‌ ಕೊಡಲು ಸಜ್ಜಾದ ಎಲೋನ್ ಮಸ್ಕ್ ಪ್ಲಾನ್ ಏನು?

Share :

Published July 23, 2023 at 12:39pm

Update July 23, 2023 at 3:02pm

    ‘ನೀಲಿ ಹಕ್ಕಿ‘ ಬದಲು ಬೇರೊಂದು ಲೋಗೋ ಪರಿಚಯಕ್ಕೆ ಪ್ಲಾನ್!

    ಟ್ವಿಟರ್‌ಗೆ ಸೂಪರ್ ಆ್ಯಪ್‌ ತಯಾರಿಸಲು ಎಲೋನ್ ಮಸ್ಕ್ ರೆಡಿ

    ನೀಲಿ ಹಕ್ಕಿ ಬದಲು ನಾಯಿಯ ಮೆಮೊ ಬಳಸಿ ಶಾಕ್ ಕೊಟ್ಟಿದ್ದರು

ಟ್ವಿಟರ್ ಅಂದ್ರೆ ಥಟ್ ಅಂತಾ ನೆನಪಾಗೋದೇ ನೀಲಿ ಹಕ್ಕಿಯ ಚಿತ್ರ. ಕೋಟ್ಯಾಂತರ ಜನರ ಕಣ್ಮಣಿಯಾಗಿರುವ ಈ ನೀಲಿ ಹಕ್ಕಿ ಶೀಘ್ರವೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂದ್ರೆ ನೀಲಿ ಹಕ್ಕಿಯ ಬದಲು ಬೇರೊಂದು ಲೋಗೋ ಪರಿಚಯಿಸಲು ಟ್ವಿಟರ್ ಚಿಂತಿಸಿದೆ. ಟ್ವಿಟರ್ ಮಾಲೀಕ, ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್‌ ಅವರು ಈ ಬಗ್ಗೆ ಮಹತ್ವದ ಸುಳಿವು ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೇ ಅತ್ಯಂತ ಪ್ರಮುಖವಾದ ಟ್ವಿಟರ್ ಪ್ಲಾಟ್‌ಫಾರಂ ಅನ್ನು ರೀ ಬ್ರಾಂಡ್ ಮಾಡಲು ನಿರ್ಧರಿಸಿರುವುದಾಗಿ ಎಲೋನ್ ಮಸ್ಕ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚೀನಾದ ವೀಚಾಟ್‌ ರೀತಿಯಲ್ಲೇ ಸೂಪರ್ ಆ್ಯಪ್‌ ಅನ್ನು ತಯಾರಿಸಲಾಗುತ್ತಿದೆ. ಶೀಘ್ರವೇ ಟ್ವಿಟರ್ ಲೋಗೋ, ಬ್ರಾಂಡ್ ಸೇರಿದಂತೆ ಎಲ್ಲಾ ಪಕ್ಷಿಗಳಿಗೂ ವಿದಾಯ ಹೇಳಲಾಗುವುದು ಎಂದಿದ್ದಾರೆ.

ಟ್ವಿಟರ್‌ ಪಕ್ಷಿಗೆ ವಿದಾಯ ಹೇಳುವುದರ ಜೊತೆಗೆ ಎಲೋನ್ ಮಸ್ಕ್ ಮತ್ತೊಂದು ಸುಳಿವು ಕೊಟ್ಟಿದ್ದಾರೆ. ಕಪ್ಪು ಬಣ್ಣದ X ಲೋಗೋವನ್ನು ಪರಿಚಯಿಸಿರುವ ಮಸ್ಕ್‌ ಇದೇ ಚೆನ್ನಾಗಿದೆ ಅಲ್ಲವೇ ಎಂದು ಬರೆದುಕೊಂಡಿದ್ದಾರೆ. ಕಪ್ಪು ಬಣ್ಣಕ್ಕೆ ಹೆಚ್ಚು ಒಲವು ತೋರಿರೋ ಎಲೋನ್ ಮಸ್ಕ್‌ ಶೀಘ್ರವೇ ಟ್ವಿಟರ್ ಲೋಗೋ ಬದಲಾಯಿಸಿ ಎಲ್ಲರಿಗೂ ಪರಿಚಯಿಸುವುದಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಅನ್ನು ಖರೀದಿಸಿದ್ದ ಎಲೋನ್ ಮಸ್ಕ್ ಕಳೆದ ಏಪ್ರಿಲ್‌ ತಿಂಗಳಲ್ಲೇ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದರು. ನೀಲಿ ಹಕ್ಕಿಯ ಬದಲು ಶಿಬಾ ಇನೂ ನಾಯಿಯ ಮೆಮೊ ಚಿತ್ರ ಹಾಕಿ ಎಲ್ಲರನ್ನೂ ಕನ್ಫ್ಯೂಸ್ ಮಾಡಿದ್ದರು. ಇದೀಗ ಮತ್ತೊಮ್ಮೆ ಟ್ವಿಟರ್ ಲೋಗೋ ಹಾಗೂ ಬ್ರಾಂಡ್ ಅನ್ನು ಬದಲಾಯಿಸುವುದಾಗಿ ಹೇಳುತ್ತಿದ್ದಾರೆ. ಟ್ವಿಟರ್ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ನೀಲಿ ಹಕ್ಕಿಯ ಚಿತ್ರ ಟ್ವಿಟರ್‌ಗೆ ಅತಿದೊಡ್ಡ ಆಸ್ತಿಯಾಗಿದೆ. ಹೀಗಾಗಿ ಅದನ್ನು ಸಂರಕ್ಷಿಸಲು ಮುಂದಾಗಿದ್ದೇವೆ ಎನ್ನುತ್ತಿದೆ. ಏನೇ ಆಗಲಿ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಬಳಸುವ ಟ್ವಿಟರ್ ಶೀಘ್ರವೇ ತನ್ನ ಬಣ್ಣ ಬದಲಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಟ್ವಿಟರ್ ಗ್ರಾಹಕರು ಕೆಲವು ದಿನ ಗಲಿಬಿಲಿ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಟ್ವಿಟರ್ ‘ನೀಲಿ ಹಕ್ಕಿ’ಗೆ ಟಾಟಾ ಬೈ, ಬೈ.. ಕೋಟ್ಯಾಂತರ ಜನರಿಗೆ ಶಾಕ್‌ ಕೊಡಲು ಸಜ್ಜಾದ ಎಲೋನ್ ಮಸ್ಕ್ ಪ್ಲಾನ್ ಏನು?

https://newsfirstlive.com/wp-content/uploads/2023/07/Twitter-logo-Elon-Musk.jpg

Load More