/newsfirstlive-kannada/media/post_attachments/wp-content/uploads/2024/11/BALAGAVI-SHOOTOUT.jpg)
ಬೆಳಗಾವಿಯಲ್ಲಿ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೂಟೌಟ್ ನಡೆದಿದ್ದು. ಕುಂದಾನಗರಿ ಬೆಚ್ಚಿ ಬಿದ್ದಿದೆ. ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಪಾಪಿಗಳು. ಬೆಳಗಾವಿಯಲ್ಲಿ ಪುನೀತ್ ಕುಮಾರ್ ಎಂಬುವವರಿಗೆ ಈ ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗಳಾಗಿವೆ.
ಗಾಯಾಳುವನ್ನು ಬಿಮ್ಸ್​ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೊಡೆ ಹಾಗೂ ಗಲ್ಲಕ್ಕೆ ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದಾರೆ ಪುನೀತ್. ಬೆಳಗಾವಿಯ ಮಹಾಂತೇಶ್ ನಗರದ ನಂದಿನಿ ಡೈರಿ ಹತ್ತಿರ ಈ ಫೈರಿಂಗ್ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us