newsfirstkannada.com

ಶತಕ ವೀರರಾದ ಶ್ರೇಯಸ್​ ಮತ್ತು ರಾಹುಲ್​.. ನೆದರ್​ಲ್ಯಾಂಡ್​ಗೆ 410 ರನ್​ಗಳ ಬೆಟ್ಟದಂತಾ ಟಾರ್ಗೆಟ್​

Share :

12-11-2023

    ಶ್ರೇಯಸ್​​ ಅಯ್ಯರ್​ ಆಟಕ್ಕೆ ತಲೆಬಾಗಿದ ಟೀಂ ಇಂಡಿಯಾ ಫ್ಯಾನ್ಸ್​

    ತವರಿನಲ್ಲಿ ಕೆ ಎಲ್​ ರಾಹುಲ್​​ ಭರ್ಜರಿ ಆಟಕ್ಕೆ ಫಿದಾ ಆದ್ರು ಅಭಿಮಾನಿಗಳು

    ನೆದರ್​ಲ್ಯಾಂಡ್​ಗೆ ಬೆಟ್ಟದಷ್ಟು ಟಾರ್ಗೆಟ್​ ನೀಡಿದ ಟೀಂ ಇಂಡಿಯಾ ಕಲಿಗಳು

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ನೆದರ್​ ಲ್ಯಾಂಡ್​ ಪಂದ್ಯ ನಡೆಯುತ್ತಿದೆ. ಆರಂಭದಲ್ಲಿ ಟಾಸ್​ ಗೆದ್ದ ರೋಹಿತ್​ ಪಡೆ ಬ್ಯಾಟಿಂಗ್​ ಆಯ್ದುಕೊಂಡು 410 ರನ್​ಗಳ ಟಾರ್ಗೆಟ್​ ನೀಡಿದೆ. 4 ವಿಕೆಟ್ ಕಳೆದುಕೊಂಡು​ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಸಂಪಾದಿಸುವ ಮೂಲಕ ನೆದರ್​ಲ್ಯಾಂಡ್​ಗೆ ಜಯದ ಸವಾಲೊಡ್ಡಿದೆ.

ಶ್ರೇಯಸ್​ ಐಯ್ಯರ್​ 94 ಎಸೆತಕ್ಕೆ 128 ರನ್​ ಬಾರಿಸುವ ಮೂಲಕ ಕ್ರಿಕೆಟ್​ ಪ್ರಿಯರನ್ನು ಸಂತಸದಲ್ಲಿ ತೇಲಾಡುವಂತೆ ಮಾಡಿದ್ದಾರೆ. 10 ಫೋರ್​, 5 ಸಿಕ್ಸ್​ ಬಾರಿಸುವ ಮೂಲಕ ಫ್ಯಾನ್ಸ್​ ಮನತಣಿಸಿದ್ದಾರೆ. ರಾಹುಲ್​ ಕೂಡ ತವರಿನಲ್ಲಿ ತನ್ನ ಶಕ್ತಿ ಪ್ರದರ್ಶನ ತೋರಿಸಿದ್ದು, 64 ಎಸೆತಕ್ಕೆ 4 ಸಿಕ್ಸ್​, 11 ಫೋರ್​ ಬಾರಿಸುವ ಮೂಲಕ 102 ರನ್​ ಬಾರಿಸಿದ್ದಾರೆ.

ಇನ್ನು ಆರಂಭಿಕ ಆಟಗಾರ ರೋಹಿತ್​ ಶರ್ಮಾ 61 ರನ್​ ಬಾರಿಸುವ ಮೂಲಕ ಬಾಸ್​ ದೆ ಲೇಡೆ ಬೌಲ್​ಗೆ ವಿಕೆಟ್​ ಒಪ್ಪಿಸಿದರು. ಬೆಟ್ಟದಷ್ಟು ನಿರೀಕ್ಷೆ ಹೊತ್ತುಕೊಂಡಿದ್ದ ಕಿಂಗ್​ ಕೊಹ್ಲಿ ಮತ್ತು ಶುಭ್ಮನ್​ ಗಿಲ್​ ಅರ್ಧ ಶತಕಕ್ಕೆ ಬ್ಯಾಟಿಂಗ್​ ನಿಲ್ಲಿಸಿದರು. ಒಟ್ಟಿನಲ್ಲಿ ಟೀಂ ಇಂಡಿಯಾ 410 ರನ್​ಗಳ ಟಾರ್ಗೆಟ್​ ನೀಡಿದೆ.

ನೆದರ್​ಲ್ಯಾಂಡ್​ ಬೌಲರ್​​ ಬಾಸ್​​ ದೆ ಲೀಡೆ 2 ವಿಕೆಟ್ ಕಬಳಿಸಿದರೆ. ಅತ್ತ ಪೌಲ್​ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದು ವಿಕೆಟ್​​ ಕಬಳಿಸಿದ್ದಾರೆ. ​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶತಕ ವೀರರಾದ ಶ್ರೇಯಸ್​ ಮತ್ತು ರಾಹುಲ್​.. ನೆದರ್​ಲ್ಯಾಂಡ್​ಗೆ 410 ರನ್​ಗಳ ಬೆಟ್ಟದಂತಾ ಟಾರ್ಗೆಟ್​

https://newsfirstlive.com/wp-content/uploads/2023/11/Shreyas-Iyer-1.jpg

Load More