newsfirstkannada.com

ಟ್ರೈಯಥ್ಲಾನ್​ನಲ್ಲಿ 2ನೇ ಬಾರಿ ಚಾಂಪಿಯನ್ ಆದ ಕನ್ನಡಿಗ.. 15 ಗಂಟೆಯಲ್ಲಿ ಇವರು ಮಾಡಿದ ಸಾಧನೆ ಏನು?​

Share :

Published July 8, 2023 at 9:13pm

    ಸ್ವಿಮ್ಮಿಂಗ್, ಬೈಕ್ ರೈಡ್​ನಲ್ಲೂ ಮೊದಲ ಸ್ಥಾನ ಪಡೆದ ಶ್ರೇಯಸ್

    ಬೆಂಗಳೂರಿನವರೇ ಆದ ಶ್ರೇಯಸ್​ ರೈಲ್ವೆ ಇಲಾಖೆಯಲ್ಲಿದ್ದಾರೆ

    2ನೇ ಬಾರಿ ಟ್ರೈಯಥ್ಲಾನ್​ ಐರನ್ ಮ್ಯಾನ್ ಆದ ಶ್ರೇಯಸ್..!

ಕಜಕಿಸ್ತಾನ್​ನ ಆಸ್ತಾನ್​ನಲ್ಲಿ ನಡೆದ ಟ್ರೈಯಥ್ಲಾನ್​ ಚಾಂಪಿಯನ್ ಶಿಪ್​ನಲ್ಲಿ ಸತತ 2ನೇ ವರ್ಷವು ಕನ್ನಡಿಗ ಶ್ರೇಯಸ್ ಹೊಸೂರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಆಸ್ತಾನ್​ನಲ್ಲಿ ನಡೆದ ಕ್ರೀಡೆಯಲ್ಲಿ ಭಾಗವಹಿಸಿದ ಶ್ರೇಯಸ್ ಹೊಸೂರ್ ಕಠಿಣವಾದ ಟ್ರೈಯಥ್ಲಾನ್ ಅನ್ನು 15 ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಸ್ವಿಮ್ಮಿಂಗ್ (ಈಜು), ಬೈಕ್ ರೈಡ್, ಫುಲ್ ಮ್ಯಾರಥಾನ್ ಅನ್ನು ಎಲ್ಲರಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದರು. ಶ್ರೇಯಸ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಪುತ್ರರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿನ ಇಂಡಿಯನ್ ರೈಲ್ವೆ ಅಕೌಂಟ್ ಸರ್ವೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೇಯಸ್ ಅವರು, ಒಂದೇ ದಿನದಲ್ಲಿ 3.8 ಕಿಮೀ ದೂರ ಸ್ವಿಮ್ಮಿಂಗ್ ಮಾಡಿದ್ದಾರೆ. ನಂತರ 180 ಕಿಲೋ ಮೀಟರ್​ವರೆಗೆ ಬೈಕ್ ರೈಡಿಂಗ್ ಮಾಡಿದ್ದಾರೆ. ಕೊನೆಯದಾಗಿ ನಡೆದಂತಹ ಫುಲ್ ಮ್ಯಾರಥಾನ್​ನಲ್ಲಿ ಬರೋಬ್ಬರಿ 42.2 ಕಿಲೋ ಮೀಟರ್ ರನ್ನಿಂಗ್ ಮಾಡಿ ಎಲ್ಲರಿಗಿಂತ ಕಡಿಮೆ ಅವಧಿಯಲ್ಲಿಯೇ ಎಲ್ಲವನ್ನು ಪೂರ್ಣ ಮಾಡಿದ್ದರಿಂದ ಜಯ ಸಾಧಿಸಿದ್ದಾರೆ. ಇದರಿಂದಾಗಿ ಟ್ರೈಯಥ್ಲಾನ್​ನಲ್ಲಿ ಐರನ್ ಮ್ಯಾನ್ ಆಗಿ ಸತತ ಎರಡನೇ ಬಾರಿಗೆ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಕೂಡ ಶ್ರೇಯಸ್ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟ್ರೈಯಥ್ಲಾನ್​ನಲ್ಲಿ 2ನೇ ಬಾರಿ ಚಾಂಪಿಯನ್ ಆದ ಕನ್ನಡಿಗ.. 15 ಗಂಟೆಯಲ್ಲಿ ಇವರು ಮಾಡಿದ ಸಾಧನೆ ಏನು?​

https://newsfirstlive.com/wp-content/uploads/2023/07/SHREYAS_HOSURU.jpg

Load More