newsfirstkannada.com

ಪಾಕಿಸ್ತಾನದ ವಿರುದ್ಧ ಗೆದ್ದರೂ ಇಲ್ಲ ಖುಷಿ.. ಟೀಮ್​ ಇಂಡಿಯಾದಲ್ಲಿ ಟೆನ್ಶನ್​.. ಟೆನ್ಶನ್​..!

Share :

13-09-2023

  ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಆಘಾತ

  NCA ಕಾರ್ಯವೈಖರಿ ಬಗ್ಗೆ ಹುಟ್ಟಿದ ಪ್ರಶ್ನೆ

  ಟೀಮ್​​ ಮ್ಯಾನೇಜ್​ಮೆಂಟ್​ನ ಪ್ಲಾನ್​-ಬಿ ಏನು.?

ಎಲ್ಲಾ ಸರಿಯಾಯ್ತು.. ಅಂತಾ ನೆಮ್ಮದಿಯ ನಿಟ್ಟುಸಿರು ಬಿಡ್ತಿರೋವಾಗ್ಲೆ ಮತ್ತೊಂದು ಆತಂಕ ಟೀಮ್​ ಇಂಡಿಯಾವನ್ನು ಕಾಡಲಾರಂಭಿಸಿದೆ. ಏಷ್ಯಾಕಪ್​ ನಡುವೆಯೇ ಟೀಮ್​ ಮ್ಯಾನೇಜ್​ಮೆಂಟ್​ಗೆ ವಿಶ್ವಕಪ್​​ನ ಟೆನ್ಶನ್​ ಶುರುವಾಗಿದೆ. ಕಮ್​ಬ್ಯಾಕ್​ ಶ್ರೇಯಸ್​ ಅಯ್ಯರ್​​ ಇದಕ್ಕೆಲ್ಲಾ ಕಾರಣವಾಗಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೂಪರ್​​ 4 ಕದನದಲ್ಲಿ ಟೀಮ್​ ಇಂಡಿಯಾ ಸೂಪರ್​ ಗೆಲುವು ದಾಖಲಿಸಿತು. ವಿರಾಟ್​ ಕೊಹ್ಲಿಯ ಭರ್ಜರಿ ಬ್ಯಾಟಿಂಗ್​, ಕೆ.ಎಲ್​ ರಾಹುಲ್​ ಕ್ಲಾಸಿಕ್​ ಇನ್ನಿಂಗ್ಸ್​ ಮುಂದೆ ಪಾಕ್​ ಬೌಲಿಂಗ್​ ಧೂಳಿಪಟವಾಯ್ತು. ಟೀಮ್​ ಇಂಡಿಯಾ ಬೌಲರ್​ಗಳ ದಾಳಿಗೆ ಪಾಕ್​ ಬ್ಯಾಟಿಂಗ್​ ಲೈನ್​ಅಪ್​ ಉಡೀಸ್​​​ ಆಯ್ತು.. ಬರೋಬ್ಬರಿ 228 ರನ್​ ಅಂತರದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿತು.

ಪಾಕ್​ ವಿರುದ್ಧ ಗೆದ್ರೂ ಟೀಮ್​ ಇಂಡಿಯಾದಲ್ಲಿಲ್ಲ ಖುಷಿ..!

ಪಾಕ್​ ವಿರುದ್ಧದ ಪಂದ್ಯ ಮುಗಿದು ಒಂದು ದಿನ ಕಳೆದಿದೆ. ಇನ್ನೊಂದು ಪಂದ್ಯವನ್ನೂ ಆಡಿದ್ದಾಗಿದೆ. ಆದ್ರೂ, ಪಾಕಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಗೆದ್ದ ಸಂಭ್ರಮ ಇಡೀ ಭಾರತದಲ್ಲಿ ಕಳೆಗಟ್ಟಿದೆ. ಆದ್ರೆ, ರೋಹಿತ್​ ಕ್ಯಾಂಪ್​ನಲ್ಲಿ ಗೆಲುವಿನ ಸಂಭ್ರಮವೇ ಇಲ್ಲ.. ಆತಂಕವೇ ಮನೆ ಮಾಡಿದೆ. ಇದಕ್ಕೆಲ್ಲಾ ಕಾರಣ ಶ್ರೇಯಸ್​ ಅಯ್ಯರ್​.

ಶ್ರೇಯಸ್​ ಅಯ್ಯರ್​ಗೆ ಮತ್ತೆ ಬೆನ್ನು ನೋವು..!

ಶ್ರೇಯಸ್​ ಅಯ್ಯರ್​ಗೆ ಇಂಜುರಿಯಾಗಿರೋದ್ರಲ್ಲಿ ಟೆನ್ಶನ್​ ತೆಗೆದುಕೊಳ್ಳುವಂತದ್ದು ಏನಿದೆ ಅಂದುಕೊಳ್ಳುವಂತೆ ಇಲ್ಲ. ಯಾಕಂದ್ರೆ ಇದು ಸಣ್ಣ ವಿಚಾರವಲ್ಲ. ಇಡೀ ಟೀಮ್​ ಇಂಡಿಯಾ ಮೇಲೆ ಇದ್ರಿಂದ ಆಗೋ ಇಂಪ್ಯಾಕ್ಟ್​ ಸಣ್ಣ ಪ್ರಮಾಣದ್ದಲ್ಲ. ಯಾಕಂದ್ರೆ ಶ್ರೇಯಸ್​​ ಮತ್ತೆ ತುತ್ತಾಗಿರೋದು ಬ್ಯಾಕ್​ ಇಂಜುರಿ. ಪಾಕ್​ ವಿರುದ್ಧದ ಪಂದ್ಯದ ಮೊದಲ ದಿನ ಟಾಸ್​ನಲ್ಲಿ ರೋಹಿತ್​ ಹೇಳಿದ್ದಕ್ಕೆ ಎಲ್ಲಾ ಮುಗಿದಿದ್ರೆ ಟೆನ್ಶನ್​ ತೆಗೆದುಕೊಳ್ಳುವಂತದ್ದು ಏನು ಇರಲಿಲ್ಲ. ಅದಾಗಿ 3 ದಿನ ಕಳೆದ್ರೂ ಶ್ರೇಯಸ್​ ಅಯ್ಯರ್​ ಫಿಟ್​ ಆಗಿಲ್ವಂತೆ. ಇನ್​​ಫ್ಯಾಕ್ಟ್​ ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಶ್ರೇಯಸ್​ ಬಂದೇ ಇರಲಿಲ್ಲ. ಬೆನ್ನು ನೋವಿನಿಂದ ಬಳಲ್ತಿದ್ದ ಶ್ರೇಯಸ್​, ಹೋಟೆಲ್​​ನಲ್ಲೇ ಉಳಿದಿದ್ರು. ಇದನ್ನ ಸ್ವತಃ ಬಿಸಿಸಿಐ ಸ್ಪಷ್ಟಪಡಿಸಿದೆ.

ತರಾತುರಿಯಲ್ಲಿ ಶ್ರೇಯಸ್​ ಅಯ್ಯರ್​ನ ಆಡಿಸಲಾಯ್ತಾ..?

ಶ್ರೇಯಸ್​​ ಅಯ್ಯರ್ ಮತ್ತೆ​​ ಇಂಜುರಿಗೆ ತುತ್ತಾದ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಬೆಂಗಳೂರಿನ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿ ಬಗ್ಗೆ ತೀವ್ರ ಚರ್ಚೆಯಾಗ್ತಿದೆ. ಕಳೆದ ಕೆಲ ತಿಂಗಳಿನಿಂದ ಎನ್​ಸಿಎನಲ್ಲೇ ಬೀಡು ಬಿಟ್ಟಿದ್ದ ಶ್ರೇಯಸ್​, ರಿಹ್ಯಾಬ್​ಗೆ​ ಒಳಗಾಗಿ, ಫುಲ್​ ಫಿಟ್​ ಅನ್ನೋ ಸರ್ಟಿಫಿಕೆಟ್​ ಹಿಡಿದೇ ಟೀಮ್​ ಇಂಡಿಯಾ ರೀ ಎಂಟ್ರಿ ಕೊಟ್ಟಿದ್ರು. ತಿಂಗಳಾನುಗಟ್ಟಲೇ ರಿಹ್ಯಾಬ್​ಗೆ ಒಳಗಾಗಿ ಬಂದ ಶ್ರೇಯಸ್​​, ಈಗ ನೋಡಿದ್ರೆ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಫ್ಯಾನ್ಸ್​, NCAನ ಡಾಕ್ಟರ್ಸ್​​, ಫಿಸಿಯೋಗಳ ಕಾರ್ಯವೈಖರಿಯನ್ನ ಪ್ರಶ್ನಿಸ್ತಿದ್ದಾರೆ.

ಟೀಮ್​ ಇಂಡಿಯಾದಲ್ಲಿ ಟೆನ್ಶನ್​.. ಟೆನ್ಶನ್​..!

ಶ್ರೇಯಸ್​ ಅಯ್ಯರ್​​ ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ ವಾರ್ಮ್​ ಅಪ್​ ಟೈಮ್​ನಲ್ಲಿ ಬ್ಯಾಕ್​ ಸ್ಪ್ಯಾಸಮ್​ ಸಮಸ್ಯೆ ಎದುರಿಸಿರೋದು ಟೀಮ್​ ಇಂಡಿಯಾಗೆ ದೊಡ್ಡ ಆಘಾತ ತಂದಿಟ್ಟಿದೆ. ಈ ವರ್ಷ ಮಾರ್ಚ್​ನಲ್ಲಿ ಇದಕ್ಕಿದ್ದಂತೆ ಬೆನ್ನು ನೋವಿನ ಸಮಸ್ಯೆ ಎದುರಿಸಿದ ಶ್ರೇಯಸ್​​ ಅಯ್ಯರ್, ಲಂಡನ್​ಗೆ ಹೋಗಿ ಸರ್ಜರಿಗೆ ಒಳಗಾಗಿ ಬಂದಿದ್ರು. ಆ ಬಳಿಕ ಕಂಪ್ಲೀಟ್​​ ವಿಶ್ರಾಂತಿ ಪಡೆದಿದ್ದ ಮುಂಬೈಕರ್​, ಕಾಂಪಿಟೇಟಿವ್​ ಕ್ರಿಕೆಟ್​​ಗೆ ಮರಳಿದ್ದೇ, ಈ ಏಷ್ಯಾಕಪ್​​ನಲ್ಲಿ.! ಎಲ್ಲಾ ಫಿಟ್​ನೆಸ್​ ಟೆಸ್ಟ್​ ಪಾಸ್​ ಮಾಡಿ ರೀ ಎಂಟ್ರಿ ಕೊಟ್ಟ ಶ್ರೇಯಸ್​​, 2 ಪಂದ್ಯ ಆಡುವಷ್ಟರಲ್ಲೇ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ. ಬ್ಯಾಕ್​ ಸರ್ಜರಿ ಒಳಗಾಗಿ ಬಂದ ಶ್ರೇಯಸ್ ಮತ್ತೆ ಬೆನ್ನು ನೋವಿನ ಸಮಸ್ಯೆ ಎದುರಿಸ್ತಾ ಇರೋದು ಸದ್ಯ ಟೀಮ್​ ಇಂಡಿಯಾದಲ್ಲಿ ಆತಂಕ ಹುಟ್ಟಿಸಿದೆ.

ಏಷ್ಯಾಕಪ್​ ಅಲ್ಲ.. ವಿಶ್ವಕಪ್​ ಟೂರ್ನಿಯ ಟೆನ್ಶನ್​..!

ಬ್ಯಾಕ್​ ಸ್ಪ್ಯಾಸಮ್​ ಸಮಸ್ಯೆಯಿಂದಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗುಳಿದ ಶ್ರೇಯಸ್​ ಅಯ್ಯರ್​, ಮುಂದಿನ ಪಂದ್ಯದ ವೇಳೆಗೆ ಫುಲ್​ ಫಿಟ್ಟಾಗಬಹುದು. ಪ್ಲೇಯಿಂಗ್​ ಇಲೆವೆನ್​​ಗೂ ಕಮ್​​ಬ್ಯಾಕ್​ ಮಾಡಬಹುದು. ಆದ್ರೆ, ಮತ್ತೆ ಇಂಜುರಿಗೆ ತುತ್ತಾಗೋ ಸಾಧ್ಯತೆಯನ್ನ 100% ತಳ್ಳಿ ಹಾಕಲು ಸಾಧ್ಯವಿಲ್ಲ ಅನ್ನೋದು ನುರಿತ ವೈದ್ಯರ ಅಭಿಪ್ರಾಯವಾಗಿದೆ. ಇದು ಟೀಮ್​ ಇಂಡಿಯಾ ವಿಶ್ವಕಪ್​ ಪ್ಲಾನಿಂಗ್​​ ಅನ್ನ ತಲೆ ಕೆಳಗೆ ಮಾಡುವ ಸಾಧ್ಯತೆಯಿದೆ.

ವಿಶ್ವಕಪ್​ಗೆ ಮ್ಯಾನೇಜ್​ಮೆಂಟ್​ನ ಪ್ಲಾನ್​-ಬಿ ಏನು?

ವಿಶ್ವಕಪ್​ ಟೂರ್ನಿಗೆ ಸಜ್ಜಾಗಿರೋ ಟೀಮ್​ ಮ್ಯಾನೇಜ್​ಮೆಂಟ್​, ಶ್ರೇಯಸ್​​ ಅಯ್ಯರ್​​ರನ್ನ 4ನೇ ಕ್ರಮಾಂಕದಲ್ಲಿ ಆಡಿಸೋ ಪ್ಲಾನ್​ ರೂಪಿಸಿದೆ. ಶ್ರೇಯಸ್​​ ಅಯ್ಯರ್​ ಮತ್ತೆ ಇಂಜುರಿಗೆ ತುತ್ತಾಗಿರೋದು, ಪ್ಲಾನ್​-ಬಿ ರೂಪಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿಸಿದೆ. ಶ್ರೇಯಸ್​ ಫುಲ್​ ಫಿಟ್​ನೆಸ್​​ ಸಾಧಿಸುವಲ್ಲಿ ಫೇಲ್​ ಕೆ.ಎಲ್​ ರಾಹುಲ್​ ಹಾಗೂ ಇಶಾನ್​ ಕಿಶನ್​ ಇಬ್ಬರೂ ಪ್ಲೇಯಿಂಗ್​ ಇಲೆವೆನ್​ಗೆ ಫಸ್ಟ್​ ಚಾಯ್ಸ್​ ಪ್ಲೇಯರ್​​ಗಳಾಗಿ ಎಂಟ್ರಿ ಕೊಡ್ತಾರೆ. ಬ್ಯಾಕ್​ ಅಪ್​ ಪ್ಲೇಯರ್​ ಆಗಿ ಯಾರಿಗೆ ಚಾನ್ಸ್​ ಅನ್ನೋ ಪ್ರಶ್ನೆ ಉದ್ಭವಿಸಲಿದೆ.

ವಿಶೇಷ ವರದಿ: ವಸಂತ್​​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕಿಸ್ತಾನದ ವಿರುದ್ಧ ಗೆದ್ದರೂ ಇಲ್ಲ ಖುಷಿ.. ಟೀಮ್​ ಇಂಡಿಯಾದಲ್ಲಿ ಟೆನ್ಶನ್​.. ಟೆನ್ಶನ್​..!

https://newsfirstlive.com/wp-content/uploads/2023/09/Team_India-1.jpg

Load More