ಶ್ರೇಯಸ್ ಔಟ್ ಆದರೆ ತಂಡಕ್ಕೆ ಸೇರಲು ಈ ಇಬ್ಬರಲ್ಲಿ ಭಾರೀ ಫೈಟ್
ಸೆಪ್ಟೆಂಬರ್ 28 ರವರೆಗೆ ವಿಶ್ವಕಪ್ ತಂಡದಲ್ಲಿ ಬದಲಾವಣೆಗೆ ಅವಕಾಶ
ಭಾರತದಲ್ಲಿ ನಡೆಯೋ ಏಕದಿನ ವಿಶ್ವಕಪ್ ಟೂರ್ನಿಗೆ 3 ವಾರ ಬಾಕಿ
ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುತ್ತಾ? ಶ್ರೇಯಸ್ ಅಯ್ಯರ್ ಇಂಜುರಿ ಬಳಿಕ ಇಂತಹದೊಂದು ಪ್ರಶ್ನೆ ಎದ್ದಿದೆ. ಹಾಗೊಂದು ವೇಳೆ ಶ್ರೇಯಸ್ ವಿಶ್ವಕಪ್ ಮಹಾಸಮರದಿಂದ ಕಿಕೌಟಾದ್ರೆ ಹಲವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆ ಲಕ್ಕಿಮ್ಯಾನ್ಸ್ ಯಾರು?
ಒನ್ಡೇ ವರ್ಲ್ಡ್ ಕಪ್ ಕ್ರಿಕೆಟ್ ಫೆಸ್ಟಿವಲ್ ಅಂತ ಕರೆಸಿಕೊಳ್ಳುವ ಈ ಮಹಾಸಮರಕ್ಕೆ ಆಲ್ರೆಡಿ ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 5 ರಿಂದ ಟೂರ್ನಿಗೆ ಗ್ರ್ಯಾಂಡ್ ಕಿಕ್ಸ್ಟಾರ್ಟ್ ಸಿಗಲಿದೆ. ಈ ಪ್ರತಿಷ್ಠಿತ ಟೂರ್ನಿ ಗೆಲ್ಲಲು ಬಿಸಿಸಿಐ 15 ಸದಸ್ಯರ ಪರ್ಫೆಕ್ಟ್ ತಂಡವನ್ನ ಸಜ್ಜುಗೊಳಿಸಿದೆ. ಇನ್ನೇನು ಅಖಾಡಕ್ಕೆ ಧುಮುಕೋದಷ್ಟೆ ಬಾಕಿ. ಇಂತಹ ಹೊತ್ತಲ್ಲಿ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಮತ್ತೆ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಶ್ರೇಯಸ್ ಅಯ್ಯರ್ ವಿಶ್ವಕಪ್ ಆಡೋದು ಅನುಮಾನ..!
ಇಂಜುರಿಯಿಂದ ಸಂಪೂರ್ಣ ಚೇತರಿಕೆ ಕಂಡು ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್ ಕಥೆ ಅದೇ ರಾಗ ಅದೇ ಹಾಡು ಅನ್ನುವಂತಾಗಿದೆ. ಏಷ್ಯಾಕಪ್ನಲ್ಲಿ ಶ್ರೇಯಸ್ ಆಟ ಜಸ್ಟ್ ಎರಡೇ ಗೇಮ್ಗೆ ಮುಗಿದಿದೆ. ಪಾಕಿಸ್ತಾನ ವಿರುದ್ಧ ಸೂಪರ್-4 ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿ ಮುಂಬೈಕರ್ ಇನ್ನೂ ಫುಲ್ ಫಿಟ್ ಆಗಿಲ್ಲ. ನಾಳೆ ಫೈನಲ್ ಪಂದ್ಯ ಆಡುವುದು ಕೂಡ ಅನುಮಾನ ಎನ್ನಲಾಗ್ತಿದೆ. ಇಂಜುರಿ ಗಂಭೀರವಾದ ಹಿನ್ನೆಲೆ ಬಿಸಿಸಿಐ ಮೆಡಿಕಲ್ ಟೀಮ್ ತೀವ್ರ ನಿಗಾವಹಿಸಿದೆ.
ಸರ್ಜರಿಗೆ ಒಳಗಾದ ಶ್ರೇಯಸ್ ರಿಕವರಿ ಆಗೋದು ಕಷ್ಟ ?
ಸದ್ಯ ಬೆನ್ನುನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ರಿಕವರಿ ಸುಲಭವಿಲ್ಲ. ಯಾಕಂದ್ರೆ ಈಗಾಗ್ಲೇ ಮುಂಬೈಕರ್ ಬೆನ್ನುನೋವಿನ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿದ್ರು. ಇದೀಗ ಮತ್ತೆ ಇಂಜುರಿ ಪೆಡಂಭೂತ ವಕ್ಕರಿಸಿದೆ. ಚೇತರಿಕೆಗೆ ಸುದೀರ್ಘ ಸಮಯ ಹಿಡಿಯಲಿದೆ ಎಂದು ಹೇಳಲಾಗ್ತಿದೆ. ಇದು ನಿಜ ಆಗಿದ್ದೇ ಆದ್ದಲ್ಲಿ ಶ್ರೇಯಸ್ ಅಯ್ಯರ್ ಉಳಿದ ಏಷ್ಯಾಕಪ್ ಪಂದ್ಯಗಳು ಸೇರಿದಂತೆ ಮುಂಬರೋ ಒನ್ಡೇ ವಿಶ್ವಕಪ್ ಕೂಡ ಆಡುವುದು ಸಾಧ್ಯತೆ ಕಮ್ಮಿ ಎಂದು ಹೇಳಲಾಗ್ತಿದೆ.
ಸ್ಯಾಮ್ಸನ್-ತಿಲಕ್..ಯಾರು ಆ ಅದೃಷ್ಟ ಶಾಲಿ .?
ಶ್ರೇಯಸ್ ಅಯ್ಯರ್ ಅನುಪಸ್ಥಿತಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ನಿಜ. ಹಾಗಂತ ಎಲ್ಲವೂ ಮುಗಿದೇ ಹೋಯ್ತು ಎಂದಲ್ಲ. ಯಾಕಂದ್ರೆ ಸೆಪ್ಟೆಂಬರ್ 28 ರವರೆಗೆ ವಿಶ್ವಕಪ್ಗೆ ಪ್ರಕಟಿಸಿದ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಹೀಗಾಗಿ ಶ್ರೇಯಸ್ ಹೊರಬಿದ್ದರೂ ಅವರ ಸ್ಥಾನ ತುಂಬಲು ಯಂಗ್ಗನ್ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ಗಿದೆ. ತಿಲಕ್ ವರ್ಮಾ ಹಾಗೂ ಸ್ಯಾಮ್ಸನ್ ಶ್ರೇಯಸ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗ್ಲೇ ತಿಲಕ್ ವರ್ಮಾ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಿಕ್ಕ ಕೆಲವೇ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಲೆಕ್ಟರ್ಸ್ ಮನಗೆದ್ದಿದ್ದಾರೆ.
ಇನ್ನು ತಿಲಕ್ ವರ್ಮಾ ಜೊತೆ ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಕೂಡ ರೇಸ್ನಲ್ಲಿದ್ದಾರೆ. ತಿಲಕ್ಗೆ ಹೋಲಿಸಿದ್ರೆ ಸ್ಯಾಮ್ಸನ್ಗೆ ಅನುಭವ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿ ರನ್ ಗುಡ್ಡೆ ಹಾಕುವ ತಾಕತ್ತು ಹೊಂದಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಸ್ಥಾನಕ್ಕಾಗಿ ತಿಲಕ್ ವರ್ಮಾ ಹಾಗೂ ಸ್ಯಾಮ್ಸನ್ ನಡುವೆ ಮೆಗಾ ಫೈಟ್ ಏರ್ಪಡೋದು ಖಚಿತ.
ಬ್ಯಾಕ್ಅಪ್ ಆಟಗಾರರ ಸ್ಥಾನಕ್ಕೆ ಪ್ರಬಲ ಪೈಪೋಟಿ..!
ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ 3 ವಾರ ಬಾಕಿ ಇದೆ. ಅಷ್ಟರಲ್ಲಿ ಏನು ಬೇಕಾದ್ರು ಆಗಬಹುದು. ಶ್ರೇಯಸ್ ಅಲ್ಲದೇ ಉಳಿದ ಆಟಗಾರರು ಸಹ ಇಂಜುರಿಗೆ ತುತ್ತಾಗಬಹುದು. ಇದರಿಂದ ವಿಶ್ವಕಪ್ ಆಡುವ ಕನಸು ಕಮರಬಹುದು. ಹಾಗೊಂದು ವೇಳೆ ಆದಲ್ಲಿ ಬ್ಯಾಕ್ಅಪ್ ಆಟಗಾರರ ಸ್ಥಾನಕ್ಕೂ ರೇಸ್ ಏರ್ಪಡಲಿದೆ. ಪ್ರಸಿದ್ಧ್ ಕೃಷ್ಣ ಹಾಗೂ ಯುಜುವೇಂದ್ರ ಚಹಲ್ಗೂ ಅದೃಷ್ಟ ಖುಲಾಯಿಸಬಹುದು. ಏನಕ್ಕೂ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ