newsfirstkannada.com

ಇಂಜುರಿ ಗೆದ್ದ ಶ್ರೇಯಸ್ ಅಯ್ಯರ್​​.. ಏಷ್ಯಾಕಪ್​ನಲ್ಲಿ ಘರ್ಜಿಸಲು ನಾ ರೆಡಿ ಎಂಬ ಮುನ್ಸೂಚನೆ

Share :

27-08-2023

    ಕಮಬ್ಯಾಕ್​ಗೆ ಶ್ರೇಯಸ್​​ ಪಟ್ಟ​ ಕಷ್ಟ ಅಷ್ಟಿಷ್ಟಲ್ಲ!

    3 ವರ್ಷದ ಅಂತರದಲ್ಲಿ 2 ಘಾತುಕ ಇಂಜುರಿ!

    ಇಂಜುರಿ ಗೆದ್ದ ಶ್ರೇಯಸ್​ ಮುಂದಿದೆ 2 ಮಹಾ ಗುರಿ

3 ವರ್ಷ, 2 ಘಾತುಕ ಇಂಜುರಿ, 2 ಮೇಜರ್​ ಸರ್ಜರಿ. ಅನುಭವಿಸಿದ ಯಾತನೆ ಹೇಳಲು ಅಸಾದ್ಯ.! ಕಳೆದುಕೊಂಡಿದ್ದಂತೂ ಲೆಕ್ಕವೇ ಇಲ್ಲ. ಏಷ್ಯಾಕಪ್​​ಗೂ ಮುನ್ನ ಟೀಮ್​ ಇಂಡಿಯಾ ಬಲ ಹೆಚ್ಚಿಸಿರೋ ಶ್ರೇಯಸ್​​ ಅಯ್ಯರ್​ರ ಕಳೆದ 3 ವರ್ಷದ ಕಹಾನಿ ಇದು. ಶ್ರೇಯಸ್​​ ಕಮ್​​ಬ್ಯಾಕ್​ ಹಿಂದಿನ ಕಷ್ಟದ ಕತೆ​ ಇಲ್ಲಿದೆ ನೋಡಿ.

ಏಷ್ಯಾಕಪ್​ಗೂ ಮುನ್ನ ಟೀಮ್​ ಇಂಡಿಯಾ ಕ್ಯಾಂಪ್​ಗೆ ಗುಡ್​ನ್ಯೂಸ್​ ಸಿಕ್ಕಿದೆ. ಶ್ರೇಯಸ್​ ಅಯ್ಯರ್​ ಫುಲ್​ ಫಿಟ್​ & ಫೈನ್​​​ ಆಗಿದ್ದು, ​ಭರ್ಜರಿ ಕಮ್​​ಬ್ಯಾಕ್​ಗೆ ಸಜ್ಜಾಗಿದ್ದಾರೆ. ಶ್ರೇಯಸ್​​ ಕಮ್​ಬ್ಯಾಕ್​ನಿಂದ ಮ್ಯಾನೇಜ್​ಮೆಂಟ್​ ನಿಟ್ಟುಸಿರು ಬಿಟ್ಟಿದ್ರೆ, ಫ್ಯಾನ್ಸ್​​ ಫುಲ್​ ಖುಷ್​ ಆಗಿದ್ದಾರೆ. ಮಹಾಸಮರಕ್ಕೂ ಮುನ್ನ ಶ್ರೇಯಸ್​​ ಅಯ್ಯರ್​ ಅಬ್ಬರ,​​ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಪಾಸಿಟಿವ್​ ಎನರ್ಜಿ ಹೆಚ್ಚಿಸಿದೆ.

ಅಭ್ಯಾಸದ ಅಖಾಡದಲ್ಲಿ ಶ್ರೇಯಸ್​​ ಅಯ್ಯರ್​​ ಘರ್ಜನೆ.!

ಇಂಜುರಿಯಿಂದಾಗಿ ಟೀಮ್​ ಇಂಡಿಯಾದಿಂದ ದೂರ ಉಳಿದಿದ್ದ ಶ್ರೇಯಸ್​​ ಅಯ್ಯರ್​, ಫುಲ್​ ಫಿಟ್​ ಆಗಿ ಏಷ್ಯಾಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದ್ರೂ, ತಂಡ ಪ್ರಕಟವಾದಿಗಿನಿಂದ ಶ್ರೇಯಸ್​ ಅಯ್ಯರ್​ ಮ್ಯಾಚ್​ ಫಿಟ್​ನೆಸ್​ ಬಗ್ಗೆ ಅನುಮಾನಗಳಿದ್ವು. ಇದೀಗ ಆ ಅನುಮಾನಗಳಿಗೆ ಶ್ರೇಯಸ್​ ಅಯ್ಯರ್​ ಬ್ಯಾಟ್​ನಿಂದಲೇ ಉತ್ತರಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಮೈದಾನದ ಉದ್ದಗಲಕ್ಕೂ ಬೌಲ್​ನ ದರ್ಶನ ಮಾಡಿಸಿರೋ ಶ್ರೇಯಸ್​​, 199 ರನ್​ ಚಚ್ಚಿದ್ದಾರೆ. ಇಷ್ಟೇ ಅಲ್ಲ, ಬ್ಯಾಟಿಂಗ್​ ಬಳಿಕ, ಸುದೀರ್ಘ 50 ಓವರ್​ ಫೀಲ್ಡಿಂಗ್​ ಕೂಡ ಮಾಡಿ ಫಿಟ್​ನೆಸ್​ ಬಗ್ಗೆ ಪ್ರಶ್ನಿಸಿದವರಿಗೆ ಆನ್ಸರ್​ ಕೊಟ್ಟಿದ್ದಾರೆ.

ಕಮಬ್ಯಾಕ್​ಗೆ ಶ್ರೇಯಸ್​​ ಪಟ್ಟ​ ಕಷ್ಟ ಅಷ್ಟಿಷ್ಟಲ್ಲ..!

ಸದ್ಯ ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​ ಮಾಡಿರೋದು ಟೀಮ್​ ಇಂಡಿಯಾದ ಜೋಷ್​ ಹೆಚ್ಚಿಸಿದೆ. ಮುಂಬರೋ ಏಷ್ಯಾಕಪ್​ ಹಾಗೂ ವಿಶ್ವಕಪ್​ ಮಹಾಸಮರಗಳಲ್ಲಿ ಟ್ರೋಫಿ ಗೆಲ್ಲೋ ಕನಸಿಗೆ ನೀರೆರೆದಿದೆ. ಟೀಮ್​ ಇಂಡಿಯಾ ಹಾಗೂ ಫ್ಯಾನ್ಸ್​ ವಲಯದಲ್ಲಿ ಖುಷಿ ಮೂಡಿಸಿರೋ ಕಮ್​​ಬ್ಯಾಕ್​ನಿಂದರೋ ಕಷ್ಟ ಅಷ್ಟಿಷ್ಟಲ್ಲ.. ಕಳೆದ 3 ವರ್ಷದಿಂದಂತೂ ಶ್ರೇಯಸ್​​ ಅನುಭವಿಸಿದ್ದು, ಅಕ್ಷರಶಃ ನರಕಯಾತನೆ..! ಈ ಅವಧಿಯಲ್ಲಿ ಶ್ರೇಯಸ್​​​ ಜಯಿಸಿದ್ದು 2 ಘಾತುಕ ಇಂಜುರಿಗಳನ್ನ.!

ಮಾರ್ಚ್​​ 23, 2021 ಶೋಲ್ಡರ್​ ಇಂಜುರಿ, ಲಂಡನ್​ನಲ್ಲಿ ಸರ್ಜರಿ

2021 ಮಾರ್ಚ್​ 23ರಂದು ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್​​ ಅಯ್ಯರ್​ ಫೀಲ್ಡಿಂಗ್​ ಮಾಡೋ ವೇಳೆ ಎಡವಿದ್ರು. ಬಾಲ್​ ತಡೆಯುವ ಯತ್ನದಲ್ಲಿ ಗಂಭೀರ ಇಂಜುರಿಗೆ ತುತ್ತಾದ ಶ್ರೇಯಸ್​ ಆನಂತರ ನಡೆದ ಐಪಿಎಲ್​ ಟೂರ್ನಿಯಿಂದಲೇ ಔಟ್​ ಆದ್ರು. ಇಷ್ಟೇ ಅಲ್ಲ.. ಲಂಡನ್​ಗೆ ತೆರಳಿ ಸರ್ಜರಿಗೂ ಒಳಗಾಗಿದ್ರು. ಕೊನೆಗೆ 2021ರ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ರು.

ಮಾರ್ಚ್​​ 21, 2023 ಬ್ಯಾಕ್​ ಪೇನ್​, ಮತ್ತೆ ಲಂಡನ್​ನಲ್ಲಿ ಸರ್ಜರಿ

ಹೌದು. ಈ ವರ್ಷ ಮಾರ್ಚ್​ನಲ್ಲಿ ನಡೆದ ಬಾರ್ಡರ್​ – ಗವಾಸ್ಕರ್​ ಟೆಸ್ಟ್​ ಸರಣಿ ವೇಳೆ ಶ್ರೇಯಸ್​​ ಅಯ್ಯರ್​ ಮತ್ತೆ ಇಂಜುರಿಗೆ ತುತ್ತಾದ್ರು. ಇದಕ್ಕಿದ್ದಂತೆ ಬೆನ್ನು ನೋವಿನ ಸಮಸ್ಯೆ ಎದುರಿಸಿದ ಶ್ರೇಯಸ್​​, ಅಹಮದಾಬಾದ್​ ಟೆಸ್ಟ್​ ಪಂದ್ಯದ ನಡುವೆಯೇ ಸ್ಕ್ಯಾನ್​ಗೆ ತೆರಳಿದ್ರು. ಆಗಲೇ ಗೊತ್ತಾಗಿದ್ದು ಶ್ರೇಯಸ್​​ ಅಯ್ಯರ್​​ರ ಲೋವರ್​ ಬ್ಯಾಕ್​​ ಬಳಿ ಡಿಸ್ಕ್​ ಬಲ್ಜ್​ ಆಗಿದೆ ಅಂತಾ. ಇದಕ್ಕಿದ್ದ ಒಂದೇ ಪರಿಹಾರ ಸರ್ಜರಿಗೊಳಗಾಗೋದು. ಆದ್ರೂ, ಕಾದು ನೋಡಲು ಮುಂದಾದ ಶ್ರೇಯಸ್​​, ಆರ್ಯುವೇದ ಚಿಕಿತ್ಸೆಯ ಮೊರೆ ಹೋಗಿದ್ರು. ಆದ್ರೆ, ಯಶಸ್ಸು ದಕ್ಕಲಿಲ್ಲ. ಕೊನೆಗೆ ಅನಿವಾರ್ಯವಾಗಿ ಲಂಡನ್​ನಲ್ಲಿ ಮತ್ತೆ ಸರ್ಜರಿಗೆ ಒಳಗಾದ್ರು.

ಇಂಜುರಿ ಕಾಟ, 3 ಐಸಿಸಿ​​ ಟೂರ್ನಿಗಳಿಂದ ಔಟ್​​​​.!

3 ವರ್ಷದ ಅಂತರದಲ್ಲಿ 2 ಇಂಜುರಿಗೆ ತುತ್ತಾದ ಶ್ರೇಯಸ್​ ಕಳೆದುಕೊಂಡಿದ್ದೇ ಹೆಚ್ಚು. ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ನಾಯಕನ ಪಟ್ಟ ಹೋಗಿ ತಂಡದಿಂದ ಹೊರಬಿದ್ರು. ಆ ಬಳಿಕ 2021ರ ವಿಶ್ವಕಪ್​ನಿಂದ ಔಟ್​ ಆದ್ರು. ಶ್ರೇಯಸ್​​ ಅಲಭ್ಯತೆಯಲ್ಲಿ ಸೂರ್ಯ ಕುಮಾರ್​ ಮಿಂಚಿದ ಪರಿಣಾಮ 2022ರ ಟಿ20 ವಿಶ್ವಕಪ್​ನಲ್ಲೂ ಸ್ಥಾನ ಸಿಗಲಿಲ್ಲ. 2023ರಲ್ಲಿ ಮತ್ತೆ ಇಂಜುರಿಗೆ ತುತ್ತಾದ ಶ್ರೇಯಸ್​​, ಐಪಿಎಲ್​ ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಆಡೋ ಭಾಗ್ಯ ಕಳೆದುಕೊಂಡ್ರು.

ಇಂಜುರಿ ಗೆದ್ದ ಶ್ರೇಯಸ್​ ಮುಂದೆ 2 ಮಹಾ ಗುರಿ.!

ಸದ್ಯ, ಇಂಜುರಿ ವಿರುದ್ಧದ ಸಮರ ಗೆದ್ದಿರೋ ಶ್ರೇಯಸ್​​ ಫುಲ್​ ಫಿಟ್​ ಆಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಸದ್ಯ ಶ್ರೇಯಸ್​ ಅಯ್ಯರ್​ ಮುಂದಿರೋದು 2 ಗುರಿ.. ಒಂದು ಏಷ್ಯಾಕಪ್​, ಇನ್ನೊಂದು ವಿಶ್ವಕಪ್.! ಏಕದಿನ ಮಾದರಿಯಲ್ಲಿ ಟೀಮ್​ ಇಂಡಿಯಾದ ಶ್ರೇಯಸ್​​ ಅಯ್ಯರ್​ ನಾಲ್ಕನೇ ಕ್ರಮಾಂಕದ ಬಲ. ಈ ಸ್ಲಾಟ್​ ಶ್ರೇಯಸ್​ ಮಿಂಚಿದ್ರೆ, ಮೆಗಾ ಟೀಮ್​ ಇಂಡಿಯಾವನ್ನ ಕಟ್ಟಿ ಹಾಕೋದು ಸುಲಭ ಅಲ್ಲವೇ ಅಲ್ಲ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂಜುರಿ ಗೆದ್ದ ಶ್ರೇಯಸ್ ಅಯ್ಯರ್​​.. ಏಷ್ಯಾಕಪ್​ನಲ್ಲಿ ಘರ್ಜಿಸಲು ನಾ ರೆಡಿ ಎಂಬ ಮುನ್ಸೂಚನೆ

https://newsfirstlive.com/wp-content/uploads/2023/08/Shreyas-Iyer.jpg

Load More