newsfirstkannada.com

ಬಿಸಿಸಿಐನಿಂದ ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ಶ್ರೇಯಸ್​ ಅಯ್ಯರ್​ಗೆ ಬಿಗ್​ ಶಾಕ್​; ಕಾರಣವೇನು?

Share :

Published August 31, 2024 at 6:09pm

    ಇತ್ತೀಚೆಗಷ್ಟೇ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದ ಶ್ರೇಯಸ್​ ಅಯ್ಯರ್​​

    ಮುಂಬರುವ ಟೆಸ್ಟ್​ ಸರಣಿಗೆ ಆಯ್ಕೆಯಾಗುವ ಕನಸು ಕಂಡಿದ್ದ ಸ್ಟಾರ್​ ಬ್ಯಾಟರ್​​!

    ಬಿಸಿಸಿಐನಿಂದ ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​​ ಶ್ರೇಯಸ್​ ಅಯ್ಯರ್​ಗೆ ಶಾಕ್​​

ಸೀಮಿತ ಓವರ್‌ಗಳ ತಂಡಕ್ಕೆ ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ದರು. ಮುಂಬರುವ ಟೆಸ್ಟ್​ ಸೀರೀಸ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಶ್ರೇಯಸ್​ ಅಯ್ಯರ್​​ ಕನಸು ಕಾಣುತ್ತಿದ್ದರು. ಹಾಗಾಗಿ ದೇಶೀಯ ಕ್ರಿಕೆಟ್​ ಬುಚ್ಚಿ ಬಾಬು ಟೂರ್ನಿಯಲ್ಲಿ ರನ್‌ ಕಲೆ ಹಾಕಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆಯೋ ಪ್ಲಾನ್​ ಮಾಡಿಕೊಂಡಿದ್ದರು ಶ್ರೇಯಸ್​​. ಈಗ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಶ್ರೇಯಸ್​ ಅಯ್ಯರ್​​​ ರನ್​ ಕಲೆ ಹಾಕುವಲ್ಲಿ ಫೇಲ್ಯೂರ್​ ಆಗಿದ್ದಾರೆ.

ಇತ್ತೀಚೆಗೆ ನಡೆದ ಪಂದ್ಯವೊಂದರ 2ನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್ ಅಯ್ಯರ್ ರನ್​​ ಗಳಿಸುವಲ್ಲಿ ವಿಫಲರಾದರು. ಈ ಮೂಲಕ ತಂಡ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡರು. ಮೊದಲ ಇನಿಂಗ್ಸ್‌ನಂತೆ 2ನೇ ಇನಿಂಗ್ಸ್‌ನಲ್ಲೂ ರನ್‌ ಕಲೆ ಹಾಕುವಲ್ಲಿ ಎಡವಿದ್ದು, ಶ್ರೇಯಸ್​ ತಾನು ಎದುರಿಸದ 72 ಎಸೆತಗಳಲ್ಲಿ ಕೇವಲ 22 ರನ್​​ ಬಾರಿಸಿ ಔಟ್​ ಆದರು.

ಬಾಂಗ್ಲಾ ವಿರುದ್ಧ ಟೆಸ್ಟ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಆಯ್ಕೆ ಡೌಟ್​​!

ದೇಶೀಯ ಕ್ರಿಕೆಟ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಅಯ್ಯರ್​​ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ ಆಯ್ಕೆ ಆಗುವುದು ಡೌಟ್​ ಆಗಿದೆ. ಹಾಗಾಗಿ ಇವರು ಭಾರತ ಟೆಸ್ಟ್​ ಕ್ರಿಕೆಟ್​ ತಂಡಕ್ಕೆ ಪ್ರವೇಶ ಮಾಡಬೇಕು ಅನ್ನೋ ಕನಸು ಕೈ ಬಿಡಬೇಕಾಗಿದೆ.

ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ ಇನ್ನು ತಂಡ ಪ್ರಕಟಿಸಿಲ್ಲ. ಮುಂದಿನ ತಿಂಗಳು ಮೊದಲ ವಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಂಡಿದ್ದ ಶ್ರೇಯಸ್‌ ಅಯ್ಯರ್​ಗೆ ಇದು ಬಿಗ್​ ಶಾಕ್​ ಆಗಿದೆ.

ಇದನ್ನೂ ಓದಿ: ಕೊಹ್ಲಿ ಆಪ್ತನಿಗೆ ಬಂಪರ್​ ಆಫರ್​​.. ಆರ್​​​ಸಿಬಿ ತಂಡದ ಹೊಸ ಕ್ಯಾಪ್ಟನ್​ ಇವರೇ ನೋಡಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಿಸಿಸಿಐನಿಂದ ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ಶ್ರೇಯಸ್​ ಅಯ್ಯರ್​ಗೆ ಬಿಗ್​ ಶಾಕ್​; ಕಾರಣವೇನು?

https://newsfirstlive.com/wp-content/uploads/2023/09/Shreyas-Iyer_1.jpg

Load More