Advertisment

ಮತ್ತೊಬ್ಬ ಪೂಜಾರ, ರಹಾನೆ ಆಗ್ತಾರಾ ಅಯ್ಯರ್​..! ಟೀಂ ಇಂಡಿಯಾದಲ್ಲಿ ಗಂಭೀರ ಚರ್ಚೆ..!

author-image
Ganesh
Updated On
ಮತ್ತೊಬ್ಬ ಪೂಜಾರ, ರಹಾನೆ ಆಗ್ತಾರಾ ಅಯ್ಯರ್​..! ಟೀಂ ಇಂಡಿಯಾದಲ್ಲಿ ಗಂಭೀರ ಚರ್ಚೆ..!
Advertisment
  • ಇತರರಿಗಿಲ್ಲದ ಶಿಕ್ಷೆ ಶ್ರೇಯಸ್​​ಗೆ ಮಾತ್ರ ಯಾಕೆ..?
  • ​​​ಶ್ರೇಯಸ್​ ಗಾಯಗೊಂಡ್ರಾ.. ಬೇಕಾಗಿಯೇ ಕೈಬಿಡ್ತಾ..?
  • ಬೆನ್ನು ನೋವಿನ ಸಮಸ್ಯೆ, ಫಿಟ್ನೆಸ್ ಬೂಟಾಟಿಕೆನಾ..?

ಇಂಗ್ಲೆಂಡ್ ಎದುರಿನ ಉಳಿದ 3 ಟೆಸ್ಟ್​ ಸರಣಿಗಳಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದಾಗಿದೆ. ಮೊದಲ ಎರಡು ಪಂದ್ಯಗಳಿಗೆ ಲಭ್ಯರಿದ್ದ ಶ್ರೇಯಸ್​​ಗೆ ಕೊಕ್ ನೀಡಿರುವ ಸೆಲೆಕ್ಷನ್ ಕಮಿಟಿ, ಇಂಜುರಿಯಿಂಲೇ ಕೊಕ್ ನೀಡ್ತಾ? ಇಲ್ಲ ಬೇಕಾಗಿಯೇ ಸೈಡ್​ಲೈನ್ ಮಾಡ್ತಾ ಎಂಬ ಅನುಮಾನ ಹುಟ್ಟಿಹಾಕಿದೆ.

Advertisment

ಇಂಗ್ಲೆಂಡ್ ಎದುರಿನ ಕೊನೆ 3 ಟೆಸ್ಟ್​​ ಪಂದ್ಯಗಳಿಗೆ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ಕೆ.ಎಲ್.ರಾಹುಲ್. ರವೀಂದ್ರ ಜಡೇಜಾ ಆಗಮನದೊಂದಿಗೆ ಟೀಮ್ ಇಂಡಿಯಾದ ಬಲವೂ ದುಪ್ಪಟ್ಟಾಗಿದೆ. ಮೊದಲ 2 ಟೆಸ್ಟ್​ ಪಂದ್ಯಗಳಿಗೆ ಲಭ್ಯರಾಗಿದ್ದ ಶ್ರೇಯಸ್​ಗೆ ಶಾಕ್ ನೀಡಿದೆ.

publive-image

ಬೆನ್ನು ನೋವಿನ ಸಮಸ್ಯೆಯ ಕಾರಣ ನೀಡಿರುವ ಸೆಲೆಕ್ಷನ್​ ಕಮಿಟಿ, ಸ್ಟಾರ್​ ಬ್ಯಾಟರ್​ ಶ್ರೇಯಸ್​​​​ರನ್ನ ತಂಡದಿಂದಲೇ ಡ್ರಾಪ್ ಮಾಡಿದೆ. ಆದ್ರೀಗ ಇದೇ ಕೆಲ ಪ್ರಶ್ನೆಗಳ ಜೊತೆ ಜೊತೆಗೆ ಅನುಮಾನಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಇದಕ್ಕೆ ಕಾರಣವೇ ಶ್ರೇಯಸ್​ ಅಯ್ಯರ್​ನ ತಂಡದಿಂದ ಕೈಬಿಟ್ಟಿದ್ದೇ ಆಗಿದೆ.

ಮತ್ತೊಬ್ಬ ಪೂಜಾರ-ರಹಾನೆ ಆಗ್ತಾರಾ ಶ್ರೇಯಸ್​
ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್. ಮಿಡಲ್ ಆರ್ಡರ್​ನಲ್ಲಿ ತಂಡಕ್ಕೆ ಬಲ ತುಂಬಬಲ್ಲ ಅಯ್ಯರ್, ಮ್ಯಾಚ್ ವಿನ್ನರ್ ಬ್ಯಾಟರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೀಗ ಇದೇ ಶ್ರೇಯಸ್​ ಅಯ್ಯರ್​​ಗೆ ಕೊನೆ 3 ಟೆಸ್ಟ್​ ಪಂದ್ಯಗಳಿಂದ ಕೈಬಿಟ್ಟಿದೆ. ಇದು ಸಹಜವಾಗೇ ಶ್ರೇಯಸ್​​ ಮತ್ತೊಬ್ಬ ಪೂಜಾರ ಹಾಗೂ ರಹಾನೆ ಆಗ್ತಿದ್ದಾರಾ ಎಂಬ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಕಾರಣ ಅಜಿಂಕ್ಯಾ ರಹಾನೆ ಹಾಗೂ ಪೂಜಾರ ವಿಚಾರದಲ್ಲಿ ನಡೆದುಕೊಂಡ ರೀತಿ.

Advertisment

6 ತಿಂಗಳಲ್ಲೇ ಬದಲಾಗಿತ್ತು ರಹಾನೆ ಹಣೆಬರಹ
2021ರ ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​ಗೂ ಮುನ್ನ ರಹಾನೆಯನ್ನ ಡ್ರಾಪ್ ಮಾಡಿದ್ದ ಸೆಲೆಕ್ಷನ್ ಕಮಿಟಿ, ಫೈನಲ್​ ಪಂದ್ಯದಲ್ಲಿ ಚಾನ್ಸ್ ನೀಡಿತ್ತು. ಈ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ ಕ್ರಮವಾಗಿ 89, 46 ರನ್ ಸಿಡಿಸಿ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದ್ದ ರಹಾನೆ, ಟೆಸ್ಟ್​ ತಂಡದಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ರು. ಆದ್ರೆ, ವೆಸ್ಟ್​ ಇಂಡೀಸ್ ಎದುರಿನ ಎರಡೇ ಎರಡು ಇನ್ನಿಂಗ್ಸ್​ಗಲ್ಲಿ ವಿಫಲರಾಗಿದ್ದೇ ತಡ ಟೆಸ್ಟ್​ನಿಂದಲೇ ಕೈಬಿಡಲಾಯ್ತು. ಪೂಜಾರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದ್ರೀಗ ಶ್ರೇಯಸ್ ಅಯ್ಯರ್​ಗೂ ಇಂಥದ್ದೇ ಶಿಕ್ಷೆ ವಿಧಿಸುತ್ತಿದೆ.

publive-image

ಬೇರೆ ಆಟಗಾರರಿಗೆ ಇಲ್ಲದ ಶಿಕ್ಷೆ ಶ್ರೇಯಸ್​ಗೆ ಯಾಕೆ
ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್​ ಪಂದ್ಯಗಳಲ್ಲಿ ಶ್ರೇಯಸ್​, ರನ್​​ ಗಳಿಕೆ ನಿಜಕ್ಕೂ ಡಿಸೆಂಟ್ ಆಗಿದೆ. ಕೆ.ಎಸ್.ಭರತ್​, ರೋಹಿತ್ ಶರ್ಮಾಗೆ ಹೋಲಿಸಿದ್ರೆ, ಶ್ರೇಯಸ್​ ಅಯ್ಯರ್​ ಕಠಿಣ ಪರಿಸ್ಥಿತಿಗಳಲ್ಲಿ ಜೊತೆಯಾಟದ ಮೂಲಕ ನೆರವಾಗಿದ್ದಾರೆ. ಹೀಗಾದ್ರೂ ಶ್ರೇಯಸ್​ ಅಯ್ಯರ್​ಗೆ ತಂಡದಿಂದ ಡ್ರಾಪ್ ಮಾಡಿದೆ. ಇದು ಸಹಜವಾಗೇ ಶ್ರೇಯಸ್​ ಅಯ್ಯರ್​ನ ಸೈಡ್​ ಲೈನ್ ಮಾಡುವ ಯತ್ನ ಬಿಸಿಸಿಐ ಮಾಡ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ಗಾಯಗೊಂಡ್ರಾ.. ಬೇಕಾಗಿಯೇ ಕೈಬಿಡ್ತಾ ಬಿಸಿಸಿಐ..?
ಶ್ರೇಯಸ್​ ಅಯ್ಯರ್​ನ ಡ್ರಾಪ್ ಮಾಡಿರುವ ಸೆಲೆಕ್ಷನ್ ಕಮಿಟಿ, ಈ ಬಗ್ಗೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ. ಶ್ರೇಯಸ್ ಅಯ್ಯರ್​ನ ಕೈಬಿಡಲಾಗಿದೆಯೇ? ಗಾಯಗೊಂಡಿದ್ದಾರೆಯೇ? ಎಂಬ ಸ್ಪಷ್ಟನೆ ನೀಡಿಲ್ಲ. ಅದ್ರಲ್ಲೂ ವಿರಾಟ್ ವಿಷ್ಯದಲ್ಲಿ ಕ್ಲಾರಿಟಿ ನೀಡಿರುವ ಸೆಲೆಕ್ಷನ್ ಕಮಿಟಿ, ಶ್ರೇಯಸ್​ ವಿಚಾರದಲ್ಲಿ ಮಾತ್ರ ಮೌನ ವಹಿಸಿದೆ. ಕೆಲ ವರದಿಗಳು, ಬೆನ್ನು ನೋವಿನ ಸಮಸ್ಯೆ ಹಾಗೂ ಫಿಟ್ನೆಸ್ ಕಾರಣದಿಂದ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದೇ ಹೇಳ್ತಿವೆ.

Advertisment

ಇದಿಷ್ಟೇ ಅಲ್ಲ. ವೈಜಾಗ್​ ಟೆಸ್ಟ್​ ಮುಗಿದ ಬೆನ್ನಲ್ಲೇ ಕೋಚ್ ದ್ರಾವಿಡ್, ಶ್ರೇಯಸ್​ ಅಯ್ಯರ್ ಜೊತೆಗಿನ ದೀರ್ಘ ಮಾತುಕತೆ ನಡೆಸಿದರು. ಇದೀಗ ಈ ಮಾತುಕತೆ ಹಿಂದಿನ ರಹಸ್ಯ ತಂಡದಿಂದ ಕೈಬಿಡುವ ಸೂಚನೆಯೇ ಆಗಿತ್ತಾ ಎಂಬ ಅನುಮಾನ ಹುಟ್ಟಿಹಾಕಿದೆ. ಒಟ್ನಲ್ಲಿ, ಶ್ರೇಯಸ್​ ಅಯ್ಯರ್ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿಯ ನಿಗೂಢ ನಡೆ ನಿಜಕ್ಕೂ, ಫ್ಯಾನ್ಸ್​ ವಲಯದಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟಿಹಾಕಿರೋದಂತು ಸುಳ್ಳಲ್ಲ. ಹೀಗಾಗಿ ಯಾವುದು ಸತ್ಯ ಅನ್ನೋದು ಕಾಲವೇ ನಿರ್ಣಯಿಸಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment