ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಆಟ
ಟೀಂ ಇಂಡಿಯಾ ಫ್ಯಾನ್ಸ್ಗೆ ನಿರಾಸೆ ಮೂಡಿಸುತ್ತಿರೋ ಅಯ್ಯರ್..!
ಶ್ರೇಯಸ್ ಅಯ್ಯರ್ ಪದೇ ಪದೇ ಅದೇ ತಪ್ಪು ಮಾಡ್ತಿರೋದ್ಯಾಕೆ?
ಸದ್ಯ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಹೊರತುಪಡಿಸಿ ಹಲವರು ಟೀಂ ಇಂಡಿಯಾ ಫ್ಯಾನ್ಸ್ಗೆ ನಿರಾಸೆ ಮೂಡಿಸುತ್ತಲೇ ಇದ್ದಾರೆ.
ಹೌದು, ಇದುವರೆಗೂ ಶ್ರೇಯಸ್ ಅಯ್ಯರ್ ಆಡಿದ ಎಲ್ಲಾ ವಿಶ್ವಕಪ್ ಪಂದ್ಯಗಳಲ್ಲೂ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಪ್ರದರ್ಶನವೇನು ಶ್ರೇಯಸ್ ನೀಡುತ್ತಿಲ್ಲ. ಕಾರಣ ಅದೇ ಶಾರ್ಟ್ ಬಾಲ್ ಸಮಸ್ಯೆ.
ಬಹಳ ದಿನಗಳಿಂದ ಅಯ್ಯರ್ಗೆ ಶಾರ್ಟ್ ಬಾಲ್ ಸಮಸ್ಯೆ ಕಾಡುತ್ತಲೇ ಇದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ಅಯ್ಯರ್ ವೇಗಿ ಟ್ರೆಂಟ್ ಬೌಲ್ಟ್ ಎಸೆದ ಶಾರ್ಟ್ ಬಾಲ್ಗೆ ತುತ್ತಾದರು. ಅಯ್ಯರ್ ಶಾರ್ಟ್ ಬಾಲ್ಗೆ ಔಟ್ ಆಗುತ್ತಿರುವುದು ಇದು ಮೊದಲೇನಲ್ಲ, ಹಲವು ಬಾರಿ ಹೀಗೆ ಆಗಿದೆ.
ಅಸಲಿಗೆ ಆಗಿದ್ದೇನು..?
ಟ್ರೆಂಟ್ ಬೌಲ್ಟ್ ಎಸೆದ ಶಾರ್ಟ್ ಬಾಲ್ ಅನ್ನು ಅಯ್ಯರ್ ಬೌಂಡರಿಗಟ್ಟಲು ಯತ್ನಿಸಿದರು. ಆದರೆ, ಬಾಲ್ ಬ್ಯಾಟ್ಗೆ ತಗುಲಿ ಏರ್ನಲ್ಲಿ ಇದ್ದರಿಂದ ಡಿವೋನ್ ಕಾನ್ವೆ ಕೈಗೆ ಕ್ಯಾಚ್ ಹೋಯ್ತು.
ಈ ಹಿಂದೆ ಏಷ್ಯಾಕಪ್ನಲ್ಲೂ ಪಾಕ್ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಅಯ್ಯರ್ ಶಾರ್ಟ್ ಬಾಲ್ಗೆ ಔಟಾಗಿದ್ರು. ಹೀಗೆ ಅಯ್ಯರ್ ಒಂದಲ್ಲ, ಎರಡಲ್ಲ, ಹಲವು ಬಾರಿ ಔಟಾಗುವುದನ್ನು ನೋಡಿದ್ದೇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ