ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ ನಟಿ ಶ್ರೀಯಾ ಶರಣ್
‘ಇಷ್ಟಂ’ ಸಿನಿಮಾ ಮೂಲಕ ನಟಿಯ ಸಿನಿಮಾ ರಂಗ ಪ್ರವೇಶ
ಉಪ್ಪಿ ನಟನೆಯ ಕಬ್ಜದಲ್ಲಿ ಮಧುಮತಿಯಾಗಿದ್ದ ಕ್ಯೂಟ್ ನಟಿ
ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಹೀರೋಯಿನ್ ಶ್ರೀಯಾ ಶರಣ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 41ನೇ ವರ್ಷಕ್ಕೆ ಶ್ರೀಯಾ ಶರಣ್ ಕಾಲಿಟ್ಟಿದ್ದು, ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
‘ಇಷ್ಟಂ’ ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಶ್ರೀಯಾ ಶರಣ್, ಆ ಬಳಿಕ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಾ ಬಂದರು. 2001ರಿಂದ ಸಿನಿ ಪರದೆಯ ಮೇಲೆ ಕಾಣಿಸಿಕೊಂಡರು. ಟಾಲಿವುಡ್ನಲ್ಲಿ ಮನರಂಜಿಸುತ್ತಿದ್ದ ಈ ನಟಿ ಬಳಿಕ ಬಾಲಿವುಡ್ನತ್ತ ಅವಕಾಶ ಕೈ ಬೀಸಿ ಕರೆಯಿತು. ನಂತರ ‘ತುಜೆ ಮೇರಿ ಕಸಮ್’ ಚಿತ್ರದಲ್ಲಿ ಕಾಣಿಸಿಕೊಂಡರು.
ಶ್ರೀಯಾ ಶರಣ್ ಅವರು ಪುನೀತ್ ರಾಜ್ ಕುಮಾರ್ ಅವರ ‘ಅರಸು’ ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಬ್ಜ ಸಿನಿಮಾದಲ್ಲಿ ಮಧುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಭಿಮಾನಿಗಳ ನೆಚ್ಚಿನ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿಯ ಫೋಟೋ ಹಂಚಿಕೊಳ್ಳುವ ಮೂಲಕ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ