ಕೊಹ್ಲಿ ಟೀಮ್ ಇಂಡಿಯಾದ ಫಿಟ್ಟೆಸ್ಟ್ ಕ್ರಿಕೆಟರ್ ಅಲ್ಲವೇ ಅಲ್ಲ
18.7 ಅಂಕ ಗಳಿಸಿ ಎಲ್ಲರ ಹುಬ್ಬೇರಿಸಿದ ಪಂಜಾಬ್ ಪುತ್ತರ್..!
ಇದು ಕೊಹ್ಲಿ ಫಿಟ್ನೆಸ್ ಯುಗಾಂತ್ಯದ ಸೂಚನೆನಾ..?
ಟೀಮ್ ಇಂಡಿಯಾದ ಮೋಸ್ಟ್ ಫಿಟ್ & ಫೈನ್ ಕ್ರಿಕೆಟರ್ ಯಾರು ಅಂತ ಕೇಳಿದ್ರೆ ತಕ್ಷಣ ಎಲ್ಲರೂ ವಿರಾಟ್ ಕೊಹ್ಲಿ ಅಂತಾರೆ. ಆದ್ರೆ ಅದು ರಾಂಗ್. ತಂಡದಲ್ಲಿ ಕೊಹ್ಲಿಗಿಂತ ಓರ್ವ ಫಿಟ್ಟೆಸ್ ಆಟಗಾರನಿದ್ದಾನೆ. ಫಿಟ್ನೆಸ್ ವಿಚಾರದಲ್ಲಿ ಫಿಟ್ನೆಸ್ ಪಂಟರ್ ಕೊಹ್ಲಿಗೆ ಸೆಡ್ಡು ಹೊಡೆದು ಅಚ್ಚರಿ ಮೂಡಿಸಿದ್ದಾನೆ.
ವಿರಾಟ್ ಕೊಹ್ಲಿ..! ಈ ಕ್ರಿಕೆಟ್ ಒಂಟಿಸಲಗ ಆಟದಿಂದ ಎಷ್ಟು ಫೇಮಸೋ, ಫಿಟ್ನೆಸ್ನಿಂದಲೂ ಅಷ್ಟೇ ಫೇಮಸ್ ಆಗಿದ್ದಾರೆ. ಇವರು ಫಿಟ್ನೆಸ್ ಐಕಾನ್ ಕೂಡ ಹೌದು. ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ವಿಚಾರಕ್ಕೆ ಕೊಹ್ಲಿನೇ ಟಾಪರ್. ಅವರನ್ನ ಬೀಟ್ ಮಾಡೋದಿರ್ಲಿ, ಹತ್ತಿರನೂ ಯಾರು ಸುಳಿದಿಲ್ಲ. ಆ ಮಟ್ಟಿಗೆ ಕೊಹ್ಲಿ ಫಿಟ್ನೆಸ್ ಟ್ರೆಂಡ್ ಸೆಟ್ ಮಾಡಿದ್ದಾರೆ.
ಆದರೆ ಇವೆಲ್ಲವೂ ಹಳೇ ಮಾತು. ಸದ್ಯ ಟೀಮ್ ಇಂಡಿಯಾದ ಫಿಟ್ನೆಸ್ ವಿಚಾರಕ್ಕೆ ಬಂದ್ರೆ ಕೊಹ್ಲಿಯನ್ನೇ ಮೀರಿಸುವ ಮತ್ತೊಬ್ಬ ಆಟಗಾರ ಉದಯಿಸಿದ್ದಾನೆ. ನಾನೇ ಫಿಟ್ನೆಸ್ ಕಿಂಗ್, ನನ್ಮುಂದೆ ಯಾರಿಲ್ಲ ಅಂತ ಕಾಲರ್ ಪಟ್ಟಿ ಹಾರಿಸ್ತಿದ್ದ ಕೊಹ್ಲಿಗೆ ಪ್ರಬಲ ಕಾಂಪಿಟೇಟರ್ ಹುಟ್ಟಿಕೊಂಡಿದ್ದಾನೆ. ಅಷ್ಟಕ್ಕೂ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಗೆ ಸೆಡ್ಡು ಹೊಡೆದ ಆ ನಯಾ ಫಿಟ್ನೆಸ್ ಕಾ ಸುಲ್ತಾನ್ ಮತ್ಯಾರು ಅಲ್ಲ, ಆತನೇ ಪಂಜಾಬ್ ಕಾ ಶೇರ್ ಶುಭ್ಮನ್ ಗಿಲ್..!
ಯಂಗ್ಗನ್ ಶುಭಮನ್ ಗಿಲ್ ನಯಾ ಫಿಟ್ನೆಸ್ ಕಾ ಸುಲ್ತಾನ್..!
ಹೌದು, ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ.ದಶಕಗಳ ಕಾಲ ಫಿಟ್ನೆಸ್ ಕ್ರಾಂತಿಯನ್ನೇ ಮಾಡಿದ್ದ ಕೊಹ್ಲಿ ಟೀಮ್ ಇಂಡಿಯಾದ ಮೋಸ್ಟ್ ಫಿಟ್ಟೆಸ್ಟ್ ಕ್ರಿಕೆಟರ್ ಅಲ್ಲ. ಬದಲಿಗೆ ಯಂಗ್ ಸೆನ್ಷೆಷನ್ ಗಿಲ್ ಪ್ರಸಂಟ್ ಟೀಮ್ ಇಂಡಿಯಾದ ಮೋಸ್ಟ್ ಫಿಟ್ಟೆಸ್ಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನ ನಾವು ಹೇಳ್ತಿಲ್ಲ. ಬಿಸಿಸಿಐ ನಡೆಸಿದ ಯೋ ಯೋ ಟೆಸ್ಟ್ನಲ್ಲಿ ಈ ಅಸಲಿ ಸತ್ಯ ಬಯಲಾಗಿದೆ.
ಯೋ ಯೋ ಟೆಸ್ಟ್ನಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಗಿಲ್
ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಯೋ ಯೋ ಟೆಸ್ಟ್ ನಡೆಸಲಾಗಿತ್ತು. ಮಹತ್ವದ ಟೂರ್ನಿಯಲ್ಲಿ ಆಡಬೇಕಾದ್ರೆ ಆಯ್ಕೆಯಾದ ಎಲ್ಲ ಪ್ಲೇಯರ್ಸ್ ಈ ಟೆಸ್ಟ್ನಲ್ಲಿ ಪಾಸಾಗೋದು ಕಡ್ಡಾಯವಾಗಿತ್ತು. ಈ ಯೋ ಯೋ ಟೆಸ್ಟ್ನಲ್ಲಿ ದಿ ಪ್ರಿನ್ಸ್ ಗಿಲ್, ಫಿಟ್ನೆಸ್ ಪಂಟರ್ ಕೊಹ್ಲಿಯನ್ನೇ ಸೈಡ್ಲೈನ್ ಮಾಡಿದ್ದಾರೆ.
ಹೌದು, ಯೋ ಯೋ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ 17.2 ಸ್ಕೋರ್ ಗಳಿಸಿದ್ರೆ ಯುವಬ್ಯಾಟ್ಸ್ಮನ್ 18.7 ಸ್ಕೋರ್ ಗಳಿಸಿ ಎಲ್ಲರ ನಿಬ್ಬೆರಗಾಗಿಸಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಟೀಮ್ ಇಂಡಿಯಾ ಎಲ್ಲಾ ಆಟಗಾರರ ಯೋ ಯೋ ಟೆಸ್ಟ್ ಎವರೇಜ್ ಸ್ಕೋರ್ 16.5 ಮತ್ತು 18 ಆಗಿದೆ. ಆ ಪೈಕಿ ಶುಭ್ಮನ್ ಗಿಲ್ 18.7 ಸ್ಕೋರ್ ಗಳಿಸಿ ಭಾರತ ತಂಡದ ಮೋಸ್ಟ್ ಫಿಟ್ಟೆಸ್ಟ್ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ.

ಸದ್ಯ ಗಿಲ್ ಯೋ ಯೋ ಟೆಸ್ಟ್ನಲ್ಲಿ 18.7 ಸ್ಕೋರ್ ಗಳಿಸುವ ಮೂಲಕ ಕೊಹ್ಲಿ ಫಿಟ್ನೆಸ್ಗೆ ಸವಾಲೆಸೆದಿದ್ದಾರೆ. ದಶಕದ ಬಳಿಕ ಕೊಹ್ಲಿ ಟಾಪ್ ಫಿಟ್ಟೆಸ್ಟ್ ಸ್ಥಾನ ಕಾಯ್ದುಕೊಳ್ಳುವಲ್ಲಿ ಫೇಲಾಗಿದ್ದಾರೆ. ಇದು ಬರಿ ಹಿನ್ನಡೆ ಅಷ್ಟೇ ಅಲ್ಲ. ಕ್ರಿಕೆಟ್ ದುನಿಯಾದಲ್ಲಿ ವಿರಾಟ್ ಫಿಟ್ನೆಸ್ ಯುಗ ಕೊನೆಗೊಳ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಇನ್ಮುಂದೆ ಸೆನ್ಷೆಷನಲ್ ಸ್ಟಾರ್ ಗಿಲ್ ಹಿಡಿಯೋರೆ ಇಲ್ಲ..!
ಫಿಟ್ನೆಸ್ನಲ್ಲಿ ಲೆಜೆಂಡ್ರಿ ಕೊಹ್ಲಿಗೆ ಟಕ್ಕರ್ ಕೊಟ್ಟಿರೋ ಶುಭ್ಮನ್ ಗಿಲ್ ರನ್ನ ಇನ್ಮುಂದೆ ಹಿಡಿಯೋದು ನಿಜಕ್ಕೂ ಕಷ್ಟ. ಒಂದೆಡೆ ರಾಯಲ್ ಫಾರ್ಮ್ನಿಂದ ಕ್ರಿಕೆಟ್ ದುನಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಕಮ್ಮಿ ಅವಧಿಯಲ್ಲೆ ಮೂರು ಮಾದರಿಯ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈಗ ಮೆನ್ ಬ್ಲೂ ಪಡೆಯ ಟಾಪ್ ಫಿಟ್ಟೆಸ್ಟ್ ಕ್ರಿಕೆಟರ್ ಅನ್ನೋ ಟ್ಯಾಗ್ಲೈನ್ ಬೇರೆ ಸಿಕ್ಕಿದೆ. ಸೋ ಇನ್ಮುಂದೆ ಯಂಗ್ ಟೈಗರ್ ಗಿಲ್ರನ್ನ ಹಿಡಿಯೋದು ನಿಜಕ್ಕೂ ಕಷ್ಟವೇ ಸೈ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ