ಮುಂದಿನ ವರ್ಷ ನಡೆಯಲಿರೋ ಐಸಿಸಿ ಮೆಗಾ ಚಾಂಪಿಯನ್ ಟ್ರೋಫಿ
ಚಾಂಪಿಯನ್ ಟ್ರೋಫಿಗೆ ಈಗಿನಿಂದಲೇ ಟೀಮ್ ಇಂಡಿಯಾ ತಯಾರಿ
ಮಾರ್ಚ್ 1ನೇ ತಾರೀಕಿನಂದು ಭಾರತ- ಪಾಕಿಸ್ತಾನ ನಡುವಣ ಪಂದ್ಯ!
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಈಗ 37 ವರ್ಷ. ಐಸಿಸಿ ಚಾಂಪಿಯನ್ ಟ್ರೋಫಿ ನಂತರ ಇವರು 38 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಇವರಿಗೆ ಭಾರತ ಏಕದಿನ ತಂಡದ ಕ್ಯಾಪ್ಟನ್ಸಿಯಿಂದ ಕೊಕ್ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಟೀಮ್ ಇಂಡಿಯಾದ ಉಪ ನಾಯಕ ಶುಭ್ಮನ್ ಗಿಲ್ ಕ್ಯಾಪ್ಟನ್ಸಿ ಪಟ್ಟ ಕಟ್ಟಲಿದ್ದಾರೆ ಎನ್ನುತ್ತಿವೆ ಮೂಲಗಳು.
ಗಿಲ್ಗೆ ಉಪ ನಾಯಕನ ಪಟ್ಟ ಕಟ್ಟಿದ್ದು ಏಕೆ?
ಶ್ರೀಲಂಕಾ ಪ್ರವಾಸಕ್ಕೆ ಮುನ್ನವೇ ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ತಂಡದ ಉಪ ನಾಯಕನ ಪಟ್ಟವನ್ನು ಗಿಲ್ ಅವರಿಗೆ ಕಟ್ಟಲಾಯ್ತು. ದೂರ ದೃಷ್ಟಿಯಿಂದ ಎಲ್ಲಾ ಮಾದರಿಯಲ್ಲೂ ಒಬ್ಬರೇ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕು. ಮುಂದಿನ 10 ವರ್ಷಗಳ ಕಾಲ ಟೀಮ್ ಇಂಡಿಯಾ ಕ್ಯಾಪ್ಟನ್ ಬದಲಾಗಬಾರದು ಎಂದು ಸೆಲೆಕ್ಷನ್ ಕಮಿಟಿ ಗಿಲ್ಗೆ ಉಪ ನಾಯಕ ಪಟ್ಟ ಕಟ್ಟಿದೆ. ಮುಂದಿನ ವರ್ಷದ ಚಾಂಪಿಯನ್ ಟ್ರೋಫಿ ನಂತರ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗಲಿದ್ದು, ಗಿಲ್ ಏಕದಿನ ತಂಡದ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ನಡೆಯಲಿರೋ ಚಾಂಪಿಯನ್ ಟ್ರೋಫಿಗೆ ಈಗಿನಿಂದಲೇ ಟೀಮ್ ಇಂಡಿಯಾ ತಯಾರಿ ನಡೆಸಿಕೊಂಡಿದೆ. ಈಗಾಗಲೇ ಐಸಿಸಿ ಮೆಗಾ ಟೂರ್ನಿ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್ ಆಗಿದ್ದು, ಮಾರ್ಚ್ 1ನೇ ತಾರೀಕಿನಂದು ಭಾರತ- ಪಾಕಿಸ್ತಾನ ನಡುವಣ ಪಂದ್ಯ ನಿಗದಿಪಡಿಸಲಾಗಿದೆ. ಆದರೆ, ಬಿಸಿಸಿಐ ಮಾತ್ರ ಈ ತಾತ್ಕಾಲಿಕ ವೇಳಾಪಟ್ಟಿಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿ ತಿಳಿಸಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಇದ್ದು, ರೋಹಿತ್ಗೆ ಕೊಕ್ ನೀಡಿ ಗಿಲ್ಗೆ ಕ್ಯಾಪ್ಟನ್ಸಿ ಕೊಡುವುದು ಪಕ್ಕಾ ಆಗಿದೆ.
ಇದನ್ನೂ ಓದಿ: ಭಾರತ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಔಟ್? ಮುಂದಿನ ಕ್ಯಾಪ್ಟನ್ ಇವರೇ ನೋಡಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ