Advertisment

ಗಿಲ್, ಪಂತ್ ಜವಾಬ್ದಾರಿಯುತ ಶತಕ.. ಟೆಸ್ಟ್​ನಲ್ಲೂ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದ ಪಂತ್..!

author-image
Ganesh
Updated On
ಗಿಲ್, ಪಂತ್ ಜವಾಬ್ದಾರಿಯುತ ಶತಕ.. ಟೆಸ್ಟ್​ನಲ್ಲೂ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದ ಪಂತ್..!
Advertisment
  • ಬಾಂಗ್ಲಾ ವಿರುದ್ಧ 514 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡ ಭಾರತ
  • ಟೀಂ ಇಂಡಿಯಾದಲ್ಲಿ ನನ್ನ ಸ್ಥಾನ ಖಾಯಂ ಎಂದ ರಿಷಬ್ ಪಂತ್
  • ಟೀಕೆಗೆ ಗುರಿಯಾಗಿದ್ದ ಗಿಲ್ ಕಂಬ್ಯಾಕ್, ಇದು ಬಲಿಷ್ಠ ಟೀಂ ಇಂಡಿಯಾ

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಇಬ್ಬರು ಬ್ಯಾಟ್ಸ್​ಮನ್​​ಗಳು ಸ್ಫೋಟಕ ಶತಕ ಬಾರಿಸಿ ಮಿಂಚಿದ್ದಾರೆ. ಶುಬ್ಮನ್ ಗಿಲ್ ಹಾಗೂ ರಿಷಬ್​ ಪಂತ್ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ ಎದುರಿಸಿದ್ದ ಟೀಕೆಗೆ ಉತ್ತರ ಕೊಟ್ಟಿದ್ದಾರೆ.

Advertisment

ಬ್ಯಾಕ್​ ಟು ಬ್ಯಾಕ್ ಸೆಂಚರಿ..!
ಭಾರತ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಪಂತ್ ಹಾಗೂ ಗಿಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. 176 ಬಾಲ್​ಗಳನ್ನು ಎದುರಿಸಿದ ಗಿಲ್, 119 ರನ್​​ಗಳಿಸಿ ನಾಟೌಟ್ ಆಗಿ ಉಳಿದರು. ಇನ್ನು ಗಿಲ್ ಬ್ಯಾಟ್​ನಿಂದ 4 ಸಿಕ್ಸರ್ ಹಾಗೂ 10 ಬೌಂಡರಿ ಬಾರಿಸಿ ಗಮನ ಸೆಳೆದರು.

ಇದನ್ನೂ ಓದಿ:ಬೂಮ್ರಾ ಔಟ್, ಕಿಶನ್ ಇನ್! KL ರಾಹುಲ್​​ಗೆ ಇಲ್ಲ ಸ್ಥಾನ? 2ನೇ ಟೆಸ್ಟ್​ಗೆ ಸಂಭಾವ್ಯ ತಂಡ..!

ಇನ್ನೂ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪಂತ್, 128 ಬಾಲ್​ನಲ್ಲಿ 109 ರನ್​ಗಳಿಸಿ ಔಟ್ ಆದರು. ಪಂತ್ ಕೂಡ 4 ಸಿಕ್ಸರ್, 13 ಬೌಂಡರಿ ಬಾರಿಸಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದರು. ಅಪಘಾತ ಹಿನ್ನೆಲೆಯಲ್ಲಿ ಪಂತ್ ಎರಡು ವರ್ಷಕ್ಕೂ ಹೆಚ್ಚು ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ತಂಡಕ್ಕೆ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ತಮ್ಮ ಸ್ಥಾನ ಮೇಲೆ ಕಣ್ಣಿಟ್ಟಿದ ಸಹ ಸ್ಪರ್ಧಿಗಳಿಗೂ ದಿಗಿಲು ಹುಟ್ಟಿಸಿದ್ದಾರೆ.

Advertisment

ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 287 ರನ್​ಗಳಿಗೆ ಆಟ ನಿಲ್ಲಿಸಿದೆ. ಬಾಂಗ್ಲಾ ವಿರುದ್ಧ 514 ರನ್​ಗಳ ಮುನ್ನಡೆ ಸಾಧಿಸಿ ಡಿಕ್ಲೈರ್ ಮಾಡಿಕೊಂಡಿದೆ. ಬಾಂಗ್ಲಾ ಈ ಟೆಸ್ಟ್ ಗೆಲ್ಲಬೇಕು ಅಂದರೆ 515 ರನ್​ಗಳನ್ನು ಗಳಿಸಬೇಕಿದೆ.

ಇದನ್ನೂ ಓದಿ:RCB ರಿಟೈನ್​ ಲಿಸ್ಟ್​ನಿಂದ ಸಿರಾಜ್​ ಔಟ್; ಟೀಂ ಇಂಡಿಯಾದ ಸ್ಟಾರ್ ಎಂಟ್ರಿ, ದಯಾಳ್ ಅಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment