ಲಂಡನ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಗಿಲ್ ವೈಫಲ್ಯ..!
3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್ ಪುತ್ತರ್ಗೆ ಏನಾಗಿದೆ
ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಬ್ಯಾಟಿಂಗ್ ಡಲ್
ಟ್ಯಾಲೆಂಟೆಡ್ ಕ್ರಿಕೆಟರ್ ಎಂದು ಬೇಷ್ ಎನಿಸಿಕೊಂಡಿದ್ದ ಶುಭ್‌ಮನ್ ಗಿಲ್ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ. ಇದ್ರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮತ್ತೆ ಫೇವರಿಸಮ್ನ ಚರ್ಚೆ ಜೋರಾಗಿದೆ. ಕೋಚ್ ದ್ರಾವಿಡ್, ಟೀಮ್ ಸೆಲೆಕ್ಷನ್ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರಾ.?
ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೆ ಫೇವರಿಸಮ್ನ ಸದ್ದು ಜೋರಾಗಿದೆ. ಕೋಚ್- ಕ್ಯಾಪ್ಟನ್ ಕೃಪಾಕಟಾಕ್ಷ ಇದ್ರೆ ಸಾಲು ಸಾಲು ಪ್ಲಾಫ್ ಶೋ ನೀಡಿದ್ರೂ, ಅವಕಾಶ ಸಿಗುತ್ತೆ. ಆದ್ರೆ, ಬೆಂಚ್ನಲ್ಲಿರೋ ಟ್ಯಾಲೆಂಟೆಡ್ ಕ್ರಿಕೆಟರ್ಗೆ ಮಾತ್ರ ಅನ್ಯಾಯ ಮಾಡಲಾಗ್ತಿದೆ ಅಂತಾ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ.
ಮೊದಲ ಏಕದಿನದಲ್ಲೂ ಶುಭ್‌ಮನ್ ಪ್ಲಾಫ್ ಶೋ.!
ಸದ್ಯ ನಡೀತಾ ಪೇವರಿಸಮ್ ಚರ್ಚೆಗೆ ನೇರಾ ನೇರ ಕಾರಣ ಶುಭ್‌ಮನ್ ಗಿಲ್..! ಪ್ರಾಮಿಸಿಂಗ್ ಯಂಗ್ಸ್ಟರ್ ಅನಿಸಿಕೊಂಡಿದ್ದ ಶುಭ್‌ಮನ್, ಸದ್ಯ ವೈಫಲ್ಯದ ಹಾದಿ ತುಳಿದಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನದಲ್ಲೂ 7 ರನ್ಗಳಿಗೆ ಗಿಲ್ ಪೆವಿಲಿಯನ್ ಸೇರಿದ್ರು.
ವಿಂಡೀಸ್ ಟೆಸ್ಟ್ ಸರಣಿಯಲ್ಲೂ ಶುಭ್‌ಮನ್ ಸೈಲೆಂಟ್.!
ಏಕದಿನ ಸರಣಿಯ ಮೊದಲ ಪಂದ್ಯ ಮಾತ್ರವಲ್ಲ.. ಅದಕ್ಕೂ ಮುನ್ನ ನಡೆದ ವಿಂಡೀಸ್ ವಿರುದ್ಧದ 2 ಟೆಸ್ಟ್ನಲ್ಲೂ ಗಿಲ್ ನಿರಾಸೆ ಮೂಡಿಸಿ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದ್ರು. ಅದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲೂ ರನ್ಗಳಿಕೆಗೆ ಪರದಾಡಿದ್ದ ಗಿಲ್, ಸುಲಭಕ್ಕೆ ಶರಣಾಗಿದ್ರು.
ಐಪಿಎಲ್ ಬಳಿಕ ಗಿಲ್ ಶೈನಿಂಗ್ ಆಟ ಮಾಯ.!
2023ರ ಐಪಿಎಲ್ನಲ್ಲಿ ಶುಭ್‌ಮನ್ ಗಿಲ್ ಧಮಾಕಾ ಸೃಷ್ಟಿಸಿದ್ರು. 3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್ ಪುತ್ತರ್ 59.33ರ ಸರಾಸರಿಯಲ್ಲಿ ರನ್ ಗಳಿಸಿದ್ರು. ಆದ್ರೆ, ಆ ಬಳಿಕ ಇಂಟರ್ನ್ಯಾಷನಲ್ ಅಖಾಡದಲ್ಲಿ ಗಿಲ್ ರನ್ಗಾಗಿ ಪರದಾಟ ನಡೆಸ್ತಿದ್ದಾರೆ. 2023ರ ಐಪಿಎಲ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಪಂದ್ಯಗಳನ್ನಾಡಿದ ಗಿಲ್, 16.60ರ ಸರಾಸರಿಯಲ್ಲಿ ಕೇವಲ 83 ರನ್ಗಳಿಸಿದ್ದಾರೆ.
ಪ್ರಯೋಗಕ್ಕೆ ಮುಂದಾಗಿದ್ರೂ ಯಾಕಿಲ್ಲ ಬದಲಾವಣೆ.?
ಒಂದೆಡೆ ಶುಭ್‌ಮನ್ ಗಿಲ್ ಪ್ಲಾಫ್ ಶೋ ನೀಡ್ತಾ ಇದ್ರೆ, ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಜೋರಾಗಿದೆ. ವಿಂಡೀಸ್ ವಿರುದ್ಧದ ಮೊದಲ ಏಕದಿನವೇ ಪಂದ್ಯದಲ್ಲೇ ಮ್ಯಾನೇಜ್ಮೆಂಟ್ ಪ್ರಯೋಗವನ್ನ ನಡೆಸಿದೆ. ಆದ್ರೆ, ವೈಫಲ್ಯದ ಸುಳಿಗೆ ಸಿಲುಕಿರುವ ಗಿಲ್ ಬದಲಾವಣೆಯ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಮೌನಕ್ಕೆ ಜಾರಿದೆ.
ಟ್ಯಾಲೆಂಟೆಡ್ ಋತುರಾಜ್ ಬೆಂಚ್ಗೆ ಸೀಮಿತ..!
ಗಿಲ್ರಂತೇ ಐಪಿಎಲ್ನಲ್ಲಿ ಋತುರಾಜ್ ಗಾಯಕ್ವಾಡ್ ಕೂಡ ಅಬ್ಬರಿಸಿದ್ರು. 42.14ರ ಉತ್ತಮ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ರು. ಆದ್ರೆ, ಟೀಮ್ ಇಂಡಿಯಾ ಪರ ಬೆಂಚ್ಗೆ ಸೀಮಿತವಾಗಿದ್ದಾರೆ. ಗಾಯಕ್ವಾಡ್ಗೆ ಚಾನ್ಸ್ ನೀಡೋ ಬಗ್ಗೆ ಮ್ಯಾನೇಜ್ಮೆಂಟ್ ಯೋಚಿಸ್ತಾನೆ ಇಲ್ಲ…!
ತಂಡದ ಆಯ್ಕೆಯಲ್ಲಿ ನಡೀತಿದ್ಯಾ ಫೇವರಿಸಮ್..?
ವೈಫಲ್ಯ ಅನುಭವಿಸ್ತಾ ಇದ್ರೂ, ಗಿಲ್ಗೆ ಚಾನ್ಸ್ ನೀಡ್ತಿರೋದು ಹಲವರ ಕಣ್ಣನ್ನ ಕೆಂಪಾಗಿಸಿದೆ. ಅದ್ರಲ್ಲೂ ಋತುರಾಜ್ ಗಾಯಕ್ವಾಡ್ರನ್ನ ಆಯ್ಕೆ ಮಾಡದೇ ನಿರ್ಲಕ್ಷ್ಯ ಮಾಡ್ತಿರೋದು ಫೇವರಿಸಮ್ನ ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಕೆಲವರು ಕೋಚ್ ದ್ರಾವಿಡ್, ಶಿಷ್ಯ ಶುಭ್‌ಮನ್ ಪರ ಬ್ಯಾಟಿಂಗ್ ನಡೆಸ್ತಿದ್ದಾರೆ ಎಂದು ನೇರವಾದ ಆರೋಪ ಮಾಡ್ತಿದ್ದಾರೆ. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಪರೋಕ್ಷವಾಗಿ ಕುಟುಕಿದ್ದಾರೆ.
‘ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ’
‘ಶುಭ್‌ಮನ್ ಗಿಲ್ರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಆದರೆ ದುಃಖಕರ ವಿಚಾರ ಏನಂದ್ರೆ, ಶುಭ್‌ಮನ್ ಪರ್ಫಾಮೆನ್ಸ್ ಉತ್ತಮವಾಗಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಇನ್ನಿಂಗ್ಸ್‌ಗಳ ನಂತರ 30ರ ಸರಾಸರಿ ಸಾಮಾನ್ಯವಾಗಿದೆ. ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ ಎಂದು ಯೋಚಿಸಲೂ ಆಗ್ತಿಲ್ಲ’
ವೆಂಕಟೇಶ್ ಪ್ರಸಾದ್, ಮಾಜಿ ಕ್ರಿಕೆಟಿಗ
ಈ ಎಲ್ಲ ಟೀಕೆಗಳು, ಚರ್ಚೆಗಳ ಹೊರತಾಗಿ ಇಂದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ಗೆ ಅವಕಾಶ ಸಿಗೋದು ಬಹುತೇಕ ಖಚಿತ. ಈ ಚಾನ್ಸ್ನಲ್ಲಿ ಗಿಲ್ ಪರ್ಫಾಮ್ ಮಾಡಬೇಕಿದೆ. ಇಲ್ಲದಿದ್ರೆ, ಮ್ಯಾನೇಜ್ಮೆಂಟ್ ಶುಭ್ಮನ್ಗೆ ಕೊಕ್ ನೀಡಿ, ಋತುರಾಜ್ಗೆ ಚಾನ್ಸ್ ನೀಡೋ ಬಗ್ಗೆ ಯೋಚಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ